ವೈಎಸ್‌ಆರ್ ಪಕ್ಷದ ಮಾನ್ಯತೆಯನ್ನು ರದ್ದು ಕೋರಿ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ವಜಾ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜೂ.4- ಆಂಧ್ರ ಪ್ರದೇಶದಲ್ಲಿ ಸರ್ಕಾರ ನಡೆಸುತ್ತಿರುವ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈ ಎಸ್ ಆರ್ ಪಕ್ಷದ ಮಾನ್ಯತೆಯನ್ನು ರದ್ದು ಮಾಡುವಂತೆ ಸಲ್ಲಿಸಲಾಗಿದ್ದ ತಕರಾರು ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿ ಪ್ರತೀಕ್ ಜಲನ್ ಅವರನ್ನೊಳಗೊಂಡ ಹೈಕೋರ್ಟ್ ನ ವಿಭಾಗೀಯ ಪೀಠ ಅಣ್ಣ ಯುವಜನ, ಶ್ರಮಿಕ, ರೈತ (ಅಣ್ಣ ವೈ ಎಸ್ ಆರ್) ಪರವಾಗಿ ಸಲ್ಲಿಸಿದ್ದ ತರಕಾರು ಅರ್ಜಿಯನ್ನು ಇತ್ಯರ್ಥಗೊಳಿಸಿದ್ದು, ಅರ್ಜಿದಾರರ ಪರ ವಾದದಲ್ಲಿ ಜೇಷ್ಠತೆಯಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಅರ್ಜಿದಾರರು ಜಗನ್ ಮೋಹನ್ ರೆಡ್ಡಿ ಅವರ ನೇತೃತ್ವ ವೈಎಸ್ ಆರ್ ಕಾಂಗ್ರೆಸ್ ಅಣ್ಣಾ ವೈಎಸ್ ಆರ್ ಪಕ್ಷದ ಆಂತರಿಕ ವಿಭಾಗವಾಗಿದೆ. ಅದು ಪ್ರತ್ಯೇಕವಾಗಿ ಚಿಹ್ನೆಯನ್ನು ಬಳಸಲು ಅವಕಾಶ ಇಲ್ಲ. ಕೇಂದ್ರ ಚುನಾವಣಾ ಆಯೋಗದ ನಿರ್ದೇಶನವನ್ನೂ ಮೀತಿ ವೈಎಸ್ ಆರ್ ಕಾಂಗ್ರೆಸ್ ಪ್ರತ್ಯೇಕವಾದ ಲೆಟರ್ ಹೆಡ್, ಚಿಹ್ನೆ, ಪ್ರಚಾರ ಸಾಮಾಗ್ರಿಗಳನ್ನು ಬಳಸುತ್ತಿದೆ. ಇದು ಸಂಪೂರ್ಣ ನಿಯಮಬಾಹಿರ ಹಾಗೂ ಅಕ್ರಮ ಎಂದು ವಾದಿಸಿದ್ದರು.

ಜಗನ್ ಮೋಹನ್ ರೆಡ್ಡಿ ಅವರ ಪಕ್ಷ ತಪ್ಪು ಮಾಡಿರುವುದು ಸಾಬೀತಾಗಿದೆ. ಉದ್ದೇಶಪೂರ್ವಕವಾಗಿ ತನ್ನ ತಪ್ಪನ್ನು ಮುಂದುವರೆಸುತ್ತಿದೆ. ಅದಕ್ಕಾಗಿ ರಾಜಕೀಯ ಪಕ್ಷಗಳ ನೋಂದಣಿ ನಿಯಮಾವಳಿಗಳ ಪ್ಯಾರ 16ಎ ಪ್ರಕಾರ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಮಾನ್ಯತೆಯನ್ನು ರದ್ದುಗೊಳಿಸಬೇಕು ಎಂದು ಅರ್ಜಿದಾರರು ವಾದಿಸಿದರು. ಆದರೆ ವಾದವನ್ನು ತಳ್ಳಿ ಹಾಕಿರುವ ದೆಹಲಿ ಹೈಕೋರ್ಟ್ ತರಕಾರು ಅರ್ಜಿಯನ್ನು ವಜಾಗೊಳಿಸಿದೆ.

Facebook Comments