ದೋಣಿ ಮುಳುಗಿ 28 ಮಂದಿ ಜಲ ಸಮಾಧಿ..!

ಈ ಸುದ್ದಿಯನ್ನು ಶೇರ್ ಮಾಡಿ

ಡಾಕಾ,ಜೂ.29-ಬಾಂಗ್ಲಾದೇಶದ ರಾಜಧಾನಿ ಡಾಕಾ ಸಮೀಪ ಇಂದು ಬೆಳಗ್ಗೆ ದೋಣಿಯೊಂದು ಮುಳುಗಿ ಮೂವರು ಮಕ್ಕಳು ಸೇರಿದಂತೆ 28 ಮಂದಿ ನೀರು ಪಾಲಾಗಿದ್ದಾರೆ. ಈ ದುರ್ಘಟನೆಯಲ್ಲಿ ಹಲವರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

ಡಾಕಾದ ಶಾಂಬಜಾರ್ ಸಮೀಪ ಬೂರಿಗಂಗಾ ನದಿಯಲ್ಲಿ ಇಂದು ಬೆಳಗ್ಗೆ 9.30ರಲ್ಲಿ ಈ ಘಟನೆ ಸಂಭವಿಸಿದೆ. ಈವರೆಗೆ 18 ಪುರಷರು, 7 ಮಹಿಳೆಯರು ಮತ್ತು ಮೂರು ಮಕ್ಕಳ ಶವಗಳನ್ನು ನೀರಿನಿಂದ ಹೊರತೆಗೆಯಲಾಗಿದೆ. ನಾಪತ್ತೆಯಾದವರಿಗಾಗಿ ತೀವ್ರ ಶೋಧ ಮುಂದುವರೆದಿದೆ.

ಸುಮಾರು 100 ಜನರಿದ್ದ ದೋಣಿ ಮತ್ತೊಂದು ನೌಕೆಗೆ ಡಿಕ್ಕಿ ಹೊಡೆದು ಮಗುಚಿ ನೀರಿನಲ್ಲಿ ಮುಳುಗಿತು. ಈ ದುರ್ಘಟನೆಯಲ್ಲಿ ಈವರೆಗೆ 28 ಮಂದಿ ಜಲಸಮಾಧಿಯಾಗಿದ್ದಾರೆ. ಉಳಿದವರಿಗಾಗಿ ಶೋಧ ಮುಂದುವರೆದಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ ಎಂದು ಕಾರ್ಯಾಚರಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Facebook Comments