66,517 ಮೃತ ವ್ಯಕ್ತಿಗಳ ಹೆಸರಿನಲ್ಲಿವೆ ರೇಷನ್ ಕಾರ್ಡ್..! : ಅಕ್ರಮ ಜಾಲ ಬೆಳಕಿಗೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.1- ಪಡಿತರ ಚೀಟಿ ಅಕ್ರಮ ತಡೆಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅನೇಕ ಕ್ರಮಗಳನ್ನು ಕೈಗೊಂಡಿದ್ದು, 66,517 ಮೃತ ವ್ಯಕ್ತಿಗಳ ಹೆಸರಿನಲ್ಲಿ ಪಡಿತರ ಪಡೆದುಕೊಳ್ಳುತ್ತಿರು ವುದನ್ನು ಪತ್ತೆ ಮಾಡಿದೆ. ಈಗಾಗಲೇ ಹಲವು ಮಂದಿ ಸುಳ್ಳು ಮಾಹಿತಿ ನೀಡಿ ಪಡೆದುಕೊಂಡಿದ್ದ ಬಿಪಿಎಲ್ ಕಾರ್ಡುಗಳನ್ನು ಇಲಾಖೆ ರದ್ದು ಮಾಡಿದೆ.

ಕಂದಾಯ ಇಲಾಖೆ ಇ-ಜನ್ಮ ತಂತ್ರಾಂಶದ ಮೂಲಕ ಜನನ-ಮರಣ ನೋಂದಣಿ ಪ್ರಮಾಣ ಪತ್ರ ನೀಡುತ್ತಿದ್ದು, ಈ ತಂತ್ರಾಂಶದಲ್ಲಿ ಮೃತಪಟ್ಟವರ ಮಾಹಿತಿ ಕಲೆ ಹಾಕಿದಾಗ 66,517 ಮೃತ ವ್ಯಕ್ತಿಗಳ ಹೆಸರಿನಲ್ಲಿ ಪಡಿತರ ಪಡೆದುಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ. ಈಗಾಗಲೇ ಮರಣ ಹೊಂದಿದ ಮತ್ತು ಪಡಿತರ ಚೀಟಿಯಲ್ಲಿ ಮಾತ್ರ ಜೀವಂತವಾಗಿದ್ದ 66,517 ಮಂದಿ ಪತ್ತೆಯಾಗಿದ್ದು,

ಇದಲ್ಲದೆ ಆದಾಯ ತೆರಿಗೆ ಪಾವತಿದಾರರು, ಸರ್ಕಾರಿ ನೌಕರರು, ಜಮೀನ್ದಾರರು ಕೂಡ ಬಿಪಿಎಲ್ ಕಾರ್ಡು ಪಡೆದುಕೊಂಡಿರುವುದು ಆಹಾರ ಇಲಾಖೆ ಪತ್ತೆ ಕಾರ್ಯಾಚರಣೆಯಲ್ಲಿ ಗೊತ್ತಾಗಿದೆ. ಅತಿ ಹೆಚ್ಚಿನ ಆದಾಯ ಹೊಂದಿರುವ ಮತ್ತು ಅರ್ಹತೆ ಇಲ್ಲದವರು ಕೂಡ ಬಿಪಿಎಲ್ ಸೌಲಭ್ಯ ಪಡೆದುಕೊಂಡಿದ್ದಾರೆ.

85,204 ಆದಾಯ ತೆರಿಗೆ ಪಾವತಿದಾರರು 50,060 ಅಕ ಆದಾಯ ಹೊಂದಿರುವವರು, 2,18,125 ಮಂದಿ 3 ಹೆಕ್ಟೇರಿಗಿಂತ ಹೆಚ್ಚಿನ ಜಮೀನು ಹೊಂದಿರುವವರು, 2,127 ಸರ್ಕಾರಿ ನೌಕರರು ಸೇರಿದಂತೆ ಹಲವು ಅನರ್ಹರು ಬಿಪಿಎಲ್ ಕಾರ್ಡು ಪಡೆದುಕೊಂಡಿದ್ದಾರೆ. 4.5 ಲಕ್ಷಕ್ಕೂ ಹೆಚ್ಚು ಅಕ್ರಮ ಪ್ರಕರಣ ಪತ್ತೆ ಹಚ್ಚಿದ್ದು, ಸರ್ಕಾರಕ್ಕೆ ವಾರ್ಷಿಕ 100 ಕೋಟಿಗೂ ಅಕ ಉಳಿತಾಯವಾಗಲಿದೆ ಎಂದು ಹೇಳಲಾಗಿದೆ.

Facebook Comments