ಡೆಡ್ಲಿ ಕೋವಿಡ್-19 ವೈರಸ್‍ಗೆ 1,500ಕ್ಕೂ ಹೆಚ್ಚು ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೀಜಿಂಗ್,ಫೆ.14- ವಿಶ್ವಾದ್ಯಂತ ತೀವ್ರ ಆತಂಕ ಸೃಷ್ಟಿಸಿ ಚೀನಾವನ್ನು ಅಲ್ಲೋಲಕಲ್ಲೋಲ ಮಾಡಿರುವ ಮಾರಕ ಕೊರೋನಾ ವೈರಾಣು (ಕೋವಿಡ್-19) ಸೋಂಕಿನ ಕೇಂದ್ರ ಬಿಂದುವಾದ ಹೆಬೀ ಪ್ರಾಂತ್ಯದಲ್ಲಿ ಅಕ್ಷರಶಃ ಸಾವಿನ ಮನೆಯಾಗಿದೆ.  ಕಿಲ್ಲರ್ ಕೊರೋನಾ ದಾಳಿಗೆ ಸತ್ತವರ ಸಂಖ್ಯೆ 1,500ಕ್ಕೆ ಏರಿರುವುದು ಪರಿಸ್ಥಿತಿಯ ಭೀಕರತೆಗೆ ಸಾಕ್ಷಿಯಾಗಿದೆ.

ಅಲ್ಲದೇ ಹೊಸದಾಗಿ ಮತ್ತೆ 1ಸುಮಾರು 5,010 ಜನರಿಗೆ ಸೋಂಕು ತಗುಲಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ. ಡೆಡಿ ್ಲಕೊರೋನಾ ವೈರಾಣುವಿನ ಮೃತ್ಯ ಕೋಟೆಯ ಕೇಂದ್ರ ಬಿಂದುವಾದ ಹುಬೇ ಪ್ರಾಂತ್ಯದಲ್ಲಿ ಸಾವಿನ ಸಂಖ್ಯೆ ಏರುತ್ತಲೇ ಇದೆ. ನಿನ್ನೆಯಿಂದ ಇಂದು ಬೆಳಗ್ಗೆವರೆಗೆ ಈ ಮಾರಕ ಸೋಂಕಿಗೆ ಇನ್ನೂ 110ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ಸತ್ತವರ ಸಂಖ್ಯೆ 1,500 ದಾಟಿದೆ.

ಅಲ್ಲದೇ 5,000ಕ್ಕೂ ಅಧಿಕ ಚೀನಿಯರಲ್ಲಿ ಕೊರೋನಾ ವೈರಸ್ ಸೋಂಕು ಕಾಣಿಸಿಕೊಂಡಿದ್ದು, ಈ ಪಿಡುಗೆಗೆ ಒಳಗಾದವರ ಸಂಖ್ಯೆ 60,000ಕ್ಕೂ ಮೀರಿದೆ. ಕೊರೋನಾ ವೈರಾಣು ನಿಗ್ರಹಕ್ಕೆ ವಿಶ್ವಆರೋಗ್ಯ ಸಂಸ್ಥೆ ಮತ್ತು ಇತರ ದೇಶಗಳ ಬೆಂಬಲದೊಂದಿಗೆ ಚೀನಾ ತೀವ್ರ ಹೋರಾಟ ಮುಂದುವರಿಸಿದ್ದರೂ, ಕೊರೋನಾ ಕೌರ್ಯಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಏರುತ್ತಲೇ ಇದೆ.

Facebook Comments