ಹೊಟೇಲ್ ಕುಸಿದು 29 ಮಂದಿ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ಬೀಜಿಂಗ್, ಆ.30- ಚೀನಾದ ಉತ್ತರ ಭಾಗದ ಸಿಂಚು ಪ್ರದೇಶದಲ್ಲಿನ ಹೊಟೇಲ್ ಉರುಳಿ ಸುಮಾರು 29 ಮಂದಿ ಸಾವನ್ನಪ್ಪಿದ್ದಾರೆ. ಎರಡು ಅಂತಸ್ತಿನ ಈ ಹೊಟೇಲ್‍ನಲ್ಲಿ ಕಳೆದ ರಾತ್ರಿ ಸುಮಾರು ನೂರಕ್ಕೂ ಹೆಚ್ಚು ಮಂದಿ ಊಟ ಮಾಡುತ್ತಿದ್ದರು.

ವ್ಯಕ್ತಿಯೊಬ್ಬರ ಹುಟ್ಟುಹಬ್ಬ ಸಮಾರಂಭ ಕೂಡ ನಡೆಯುತ್ತಿತ್ತು. ಈ ವೇಳೆ ನೋಡು ನೋಡುತ್ತಿದ್ದಂತೆಯೇ ಕಟ್ಟಡ ಕುಸಿದಿದೆ. ತಕ್ಷಣ ಸ್ಥಳಕ್ಕೆ ಬಂದ ರಕ್ಷಣಾ ಸಿಬ್ಬಂದಿಗಳು ಅವಶೇಷಗಳಿಂದ 57 ಮಂದಿಯನ್ನು ಹೊರ ತೆಗೆದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ಹೊಟೇಲ್ ಅನ್ನು ರಾಜ್ಯ ಸರ್ಕಾರ ನಡೆಸುತ್ತಿತ್ತು ಎಂದು ಇಲ್ಲಿನ ಸುದ್ದಿ ವಾಹಿನಿ ತಿಳಿಸಿದೆ.

Facebook Comments

Sri Raghav

Admin