ಚೀನಾದಲ್ಲಿ ವಿವಾಹವಾಗುವವರ ಸಂಖ್ಯೆ ಇಳಿಕೆ, ಜನನ ಪ್ರಮಾಣ ಕುಸಿತ

ಈ ಸುದ್ದಿಯನ್ನು ಶೇರ್ ಮಾಡಿ

ಬೀಜಿಂಗ್,ನ.24- ಜಗತ್ತಿನಲ್ಲೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ರಾಷ್ಟ್ರವಾದ ಚೀನಾದಲ್ಲಿ ಅತಿ ಕಡಿಮೆ ಜನರು ವಿವಾಹವಾಗುತ್ತಿರುವುದರಿಂದ ಜನನ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಅಕೃತ ಅಂಕಿ-ಅಂಶಗಳು ತಿಳಿಸಿವೆ.

ಚೀನಾದಲ್ಲಿ ಸತತ ಏಳು ವರ್ಷಗಳಿಂದ ವಿವಾಹನೋಂದಣಿ ಕುಸಿತ ಕಂಡಿದೆ ಮತ್ತು ಕಳೆದ ಸಾಲಿನಲ್ಲಿ 17 ವರ್ಷಗಳಲ್ಲೇ ಅತಿ ಕಡಿಮೆ ಪ್ರಮಾಣದಲ್ಲಿ ವಿವಾಹ ನೋಂದಣಿಗಳಾಗಿವೆ ಎಂದು ಇತ್ತೀಚೆಗೆ ಬಿಡುಗಡೆಯಾದ ಚೀನಾದ ಕಾರ್ಯತಂತ್ರ ವಾರ್ಷಿಕ ಪುಸ್ತಕ-2021 ಪ್ರದರ್ಶಿಸಿದೆ.

2021ರ ಮೊದಲ ತ್ರೈಮಾಸಿಕದಲ್ಲಿ 5.87 ಚೀನಾದಲ್ಲಿ 5.87 ದಶಲಕ್ಷ ಜೋಡಿಗಳು ಮದುವೆಯಾಗಿದ್ದಾರೆ. ಕಳೆದ ವರ್ಷ ಇದೇ ಅವಯಲ್ಲಿ ಇದಕ್ಕಿಂತ ಹೆಚ್ಚು ಜನರು ವಿವಾಹವಾಗಿದ್ದರು ಎಂದು ನಾಗರಿಕ ವ್ಯವಹಾರಗಳ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ-ಅಂಶಗಳಿಂದ ತಿಳಿದು ಬಂದಿದೆ.

2021ರಲ್ಲಿ ಚೀನಾದಲ್ಲಿ ವಿವಾಹ ನೋಂದಣಿಗಳು ಇನ್ನಷ್ಟು ಕಡಿಮೆಯಾಗುವ ನಿರೀಕ್ಷೆ ಇದೆ ಎಂದು ಸರ್ಕಾರಿ ಸ್ವಾಮ್ಯದ ಚೀನಾ ಡೈಲಿ ವರದಿ ಮಾಡಿದೆ.

Facebook Comments