ದೀನ್ ದಯಾಳ್ ಉಪಾಧ್ಯಾಯ ಕಚೇರಿ ಉದ್ಘಾಟನೆ

ಈ ಸುದ್ದಿಯನ್ನು ಶೇರ್ ಮಾಡಿ

ಮಹದೇವಪುರ, ಡಿ.2- ಪಂಡಿತ ದಿನ್ ದಯಾಳ್ ಉಪಾಧ್ಯಯರ ಕಚೇರಿ ಯನ್ನು ಶಾಸಕ ಅರವಿಂದ ಲಿಂಬಾವಳಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸರ್ಕಾರಿ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಲು ಈ ಕಚೇರಿಯನ್ನು ಪ್ರಾರಂಭಿಸಲಾಗಿದ್ದು ಇದರ ಸದುಪಯೋಗ ಪಡಿಸಿಕೊಳ್ಳಲು ಮನವಿ ಮಾಡಿದರು.

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಗಳಾದ ಆಯುಷ್ ಮಾನ್ ಭಾರತ್, ಜನ್ ಧನ್, ವಿಧವಾ ವೇತನ, ಭಾಗ್ಯಲಕ್ಷ್ಮಿ ಯೋಜನೆ ಸೇರಿ ದಂತೆ ಹಲವು ಯೋಜನೆಯನ್ನು ಜನರಿಗೆ ತಲುಪಿಸುವ ಕಾರ್ಯ ಮಾಡಲಾಗುವುದೆಂದು ಹೇಳಿದರು.

ಅನ್‍ಲೈನ್ ಮೂಲಕ ದೊರೆಯುವ ಸರ್ಕಾರಿ ಯೋಜನೆಗಳನ್ನು ಜನ ಸಾಮಾನ್ಯರಿಗೆ ಉಚಿತವಾಗಿ ತಲುಪಿಸುವ ಸಲುವಾಗಿ ಜನ ಸಂಘ ಸ್ಥಾಪಕರಾದ ಪಂಡಿತ ದೀನ್ ದಯಾಳ್ ಉಪಾಧ್ಯಾಯ ಹೆಸರಿನಲ್ಲಿ ಕಾಡುಗುಡಿ ಅಟಲ್ ಬಿಹಾರಿ ವಾಜಪೇಯಿ ರಸ್ತೆಯಲ್ಲಿ ಕಚೇರಿಯನ್ನು ತೆರೆಯಲಾಗಿದೆ ಎಂದು ಶಕ್ತಿ ಕೇಂದ್ರ ಅಧ್ಯಕ್ಷ ಪ್ರಶಾಂತ್ ವೀರಸ್ವಾಮಿರೆಡ್ಡಿ ತಿಳಿಸಿದರು.

ಕ್ಷೇತ್ರ ಗ್ರಾಮಾಂತರ ಮಂಡಲ ಅಧ್ಯಕ್ಷ ನಟರಾಜ್, ವೀರಸ್ವಾಮಿರೆಡ್ಡಿ, ಪಿಳ್ಳಪ್ಪ, ರಾಮಮೂರ್ತಿ, ವಾರ್ಡ್ ಅಧ್ಯಕ್ಷ ಅರವಿಂದ ಬಾಬು, ಅಸ್ಲಾಂ ಪಾಷ, ಎಂಜಿ ರೆಡ್ಡಿ, ಕೇಶವಮೂರ್ತಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Facebook Comments