ದೀಪಕ್ ಚಹರ್ ಕೊರೊನಾ ಪರೀಕ್ಷೆ 2ನೇ ಬಾರಿ ನೆಗಿಟಿವ್

ಈ ಸುದ್ದಿಯನ್ನು ಶೇರ್ ಮಾಡಿ

ದುಬೈ,ಸೆ.10-ಚೆನ್ನೈ ಸೂಪರ್ ಕಿಂಗ್ಸ್‍ನ ವೇಗದ ಬೌಲರ್ ದೀಪಕ್ ಚಹರ್ 2ನೇ ಬಾರಿ ಕೊರೊನಾ ಪರೀಕ್ಷೆಗೆ ಒಳಗಾಗಿದ್ದು, ನೆಗಿಟಿವ್ ವರದಿ ಬಂದಿದೆ. ಸೆ.19ರಿಂದ ಆರಂಭಗೊಳ್ಳಲಿರುವ ಐಪಿಎಲ್‍ನಲ್ಲಿ ಸ್ಟಾರ್ ಆಟಗಾರರೆಂದೇ ಗುರುತಿಸಿಕೊಂಡಿದ್ದು, ಈಗ ತಂಡಕ್ಕೆ ಮರಳುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಬಿಸಿಸಿಐನ ನಿಯಮಾನುಸಾರ ಎಲ್ಲಾ ಆಟಗಾರರು ಪರೀಕ್ಷೆಗೆ ಒಳಗಾಗುತ್ತಿದ್ದು, ಸದ್ಯದಲ್ಲಿಯೇ ಅವರು ತರಬೇತಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಿಎಸ್‍ಕೆನ ಸಿಇಒ ಕೆ.ಎಸ್.ವಿಶ್ವನಾಥನ್ ತಿಳಿಸಿದ್ದಾರೆ.

ಯುಎಇ ಹೋಟೆಲ್‍ವೊಂದರಲ್ಲಿ ಪ್ರತ್ಯೇಕವಾಗಿ ಐಸೋಲೇಷನ್‍ನಲ್ಲಿದ್ದ ದೀಪಕ್ ಚಹರ್ 2ನೇ ಬಾರಿಯ ಕೋವಿಡ್ ಟೆಸ್ಟ್‍ನಲ್ಲಿ ನೆಗೆಟಿವ್ ಬಂದಿದೆ. ಆದರೂ ಅವರು ವಿಶ್ರಾಂತಿಯಲ್ಲಿದ್ದಾರೆ.  ಐಪಿಎಲ್‍ನಲ್ಲಿ ಯಾವಾಗ ಆಡಲಿದ್ದಾರೆ ಎಂಬ ಸಮಯ ನಿಗದಿ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಪಂದ್ಯ ಆರಂಭಕ್ಕೆ 4 ದಿನಗಳ ಮುನ್ನ ಸ್ಪಷ್ಟ ಮಾಹಿತಿ ತಿಳಿಯಲಿದೆ ಎಂದು ತಿಳಿಸಿದ್ದಾರೆ.

Facebook Comments