ದೀಪದಿಂದ ದೀಪವ ಹಚ್ಚಬೇಕು ಮಾನವ

ಈ ಸುದ್ದಿಯನ್ನು ಶೇರ್ ಮಾಡಿ

ಪ್ರೀತಿಯಿಂದ ಪ್ರೀತಿ ಹಂಚಲು ಎಂಬ ಹಾಡಿನಂತೆ ದೀಪಗಳ ಹಬ್ಬ ಪ್ರೀತಿ ಸಹಬಾಳ್ವೆಯ ಸಂಕೇತವೂ ಹೌದು. ಅಂತರಂಗದ ಅಂಧಕಾರ ಕಳೆದು ಜ್ಞಾನದ ಬೆಳಕು ತುಂಬುವ ಹಬ್ಬವೇ ದೀಪಾವಳಿ. ಸಾಲಾಗಿ ದೀಪಗಳನ್ನು ಬೆಳಗಿಸುವ ಮೂಲಕ ದೀಪಾವಳಿ ಆಚರಿಸುವುದು ಭಾರತೀಯರ ಸಂಪ್ರದಾಯ. ಅದಕ್ಕೆ ಯಾವುದೇ ಲೋಹ ಅಥವಾ ಮಣ್ಣಿನ ಹಣತೆ ಬೆಳಗುವುದೇ ಪದ್ದತಿ ಆದರೆ, ಇತ್ತೀಚಿನ ದಿನಗಳಲ್ಲಿ ದೀಪಗಳ ಸ್ಥಾನವನ್ನು ಕ್ಯಾಂಡಲ್‍ಗಳೂ, ಚೈನಾ ನಿರ್ಮಿತ ಲೈಟಿಂಗ್‍ಗಳೂ ಆಕ್ರಮಿಸುತ್ತಿವೆ.

ನಾವು ನಮ್ಮತನದೊಂದಿಗೆ, ತಮ್ಮವರ ಹಿತ ಕಾಪಾಡುತ್ತಾ, ಅವರೂ ದೀಪಾವಳಿಯನ್ನು ಅಷ್ಟೆ ಸಡಗರ ಸಂಭ್ರಮದಿಂದ ಆಚರಿಸಲು ಅನುವಾಗುವಂತೆ ನಾವು ಕೆಲ ಮಾರ್ಪಾಡು ಮಾಡಿಕೊಮಡು ಹಬ್ಬ ಆಚರಿಸುವುದು ಈ ಕಾಲಘಟ್ಟದಲ್ಲಿ ಅತ್ಯಗತ್ಯ. ಈ ಬಗ್ಗೆ ಜನ ಎಚ್ಚೆತ್ತುಕೊಳ್ಳ ಬೇಕಿದೆ. ದೇಶದ ಗಡಿಯಲ್ಲಿ ಕೆಲವೇ ತಿಂಗಳ ಹಿಂದೆ ಚೀನಾ ನಡೆಸಿದ ದುಷ್ಕøತ್ಯ ದೇಶಪ್ರೇಮಿಗಳನ್ನು ಬಡಿದೆಬ್ಬಿಸಬೇಕಿದೆ.

ಕಾರಣ ನಮ್ಮ ಸಂಪ್ರದಾಯ ಹಿಂದಿನ ರೂಢಿಗತ ಆಚರಣೆಗಳನ್ನು ಇಂದು ಆಧುನಿಕತೆ ಸ್ಪಷ್ಟಿಸಿರುವ ಧಾವಂತದಲ್ಲಿ ಎಲ್ಲೋ ಮರೆಯಾಗಿ ಹೋಗುತ್ತಿದೆ. ಜತೆಗೆ ಚೀನಾದ ವಸ್ತುಗಳ ಬಹಳ ಸುಲಭವಾಗಿ ತೂರಿಬಿಟ್ಟಿವೆ. ಆದ್ದರಿಂದಲೇ ಈ ಬಾರಿಯ ದೀಪಾವಳಿ ಯನ್ನು ವಿಭಿನ್ನವಾಗಿ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲು ಮನಸ್ಸು ಮಾಡಬೇಕಿದೆ.

ನಮ್ಮ ದೇಶದಲ್ಲಿ ವಂಶ ಪಾರಂಪರಿಕವಾಗಿ ಕುಂಬಾರಿಕೆಯನ್ನೇ ಅವಲಂಬಿಸಿ ಜೀವನ ನಡೆಸುತ್ತಿರುವ ಅನೇಕ ಕುಟುಂಬಗಳಿವೆ. ಅವರು ತಯಾರಿಸುವ ಹಣತೆ ನಮ್ಮ ಸಂಸ್ಕøತಿಯ ಪ್ರತಿಬಿಂಬ ಅದನ್ನು ಮನದಟ್ಟು ಮಾಡಿಕೊಂಡು ಅವರಿಂದ ಖರೀದಿಸಿ ಬೆಳಗುವ ಒಂದೊಂದು ಹಣತೆಗಳೂ ಕೇವಲ ನಮ್ಮ ಮನೆ- ಮನಗಳಲ್ಲಿ ಮಾತ್ರವಲ್ಲದೆ ಅವರ ಮನೆಗಳಲ್ಲೂ ಬೆಳಕು ತರಬಲ್ಲದು.

ಕುಂಬಾರ ಮಾಡಿದ ಹಣತೆ , ರೈತ ಬೆಳೆದ ಹತ್ತಿ, ಗಾಣಿಗ ತೆಗೆದ ಎಣ್ಣೆಯಿಂದ ದೀಪ ಹಚ್ಚುವಾಗ ಅದನ್ನು ದೇವರು ಮೆಚ್ಚಿ ಇಷ್ಟಾರ್ಥ ಪೂರೈಸುವಂತಹ ನಂಬಿಕೆ ನಮ್ಮಲಿರುವಾಗ ನಮ್ಮ ಸಮಾಜದ ಇತರರ ಕಷ್ಟಗಳಿಗೂ ಸ್ಪಂದಿಸಬೇಕಾದದು ಪ್ರತಿಯೊಬ್ಬರ ಕರ್ತವ್ಯ ಹಾಗೂ ಮಾನವೀಯತೆ ಎಂಬುದನ್ನು ಮರೆಯುವಂತಿಲ್ಲ.

ಅಲ್ಲದೆ, ಲಾಕ್‍ಡೌನ್ ನಂತರದಲ್ಲಿ ಎಲ್ಲಾ ಕಸುಬು ಗಳು ಒಂದಲ್ಲಾ ಒಂದು ತೊಂದರೆ ಎದುರಿಸುತ್ತಿವೆ. ಕನಿಷ್ಠ ಇಂತಹ ಕ್ರಮಗಳಿಂದಲಾದರೂ ಅವರೂ ಹಬ್ಬವನ್ನು ಸಂತಸದಿಂದ ಆಚರಿಸುವಂತಾಗಲಿ. ಪರಿಸರಕ್ಕೆ ಮಾರಕವಾಗುವ ಪಟಾಕಿ ಮತ್ತಿತರ ವಸ್ತುಗಳಿಗಿಂತ ಈ ಮಣ್ಣಿನ ಹಣತೆಗಳು, ಪ್ರಕೃತಿಗೆ ಎಂದೂ ಭಾರವಾಗಲಾರದು.

ಈ ಬಾರಿ ನೂತನ ಪ್ರಯತ್ನವಾಗಿ ಗೋಮಯ ದಿಂದ ಹಣತೆಗಳನ್ನು ತಯಾರಿ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುವಂತೆ ಮಾಡಿರುವುದು. ಹಬ್ಬಕ್ಕೆ ಒಂದು ತಾತ್ವಿಕ ಅರ್ಥವನ್ನು ಕಲ್ಪಿಸಿದಂತಾಗಿದೆ. ಯಾವುದೇ ರಾಸಾಯನಿಕ ಬಣ್ಣಗಳನ್ನು ಬಳಸದೆ ಸಂಪೂರ್ಣವಾಗಿ ಗೋಮಯದಿಂದ ತಯಾ ರಿಸಲ್ಪಟ್ಟ ದೀಪಗಳೂ ಮಾರುಕಟ್ಟೆಗೆ ಬಂದಿರುವುದು ನಮಗೆ ವರದಾನವಾಗಿದೆ ಎಂದೇ ಭಾವಿಸೋಣ. ಸಾಧ್ಯವಾದರೇ ಅದರ ಬಳಕೆಯನ್ನು ಮಾಡುತ್ತಾ ಹಬ್ಬವನ್ನು ಹೆಚ್ಚುಅರ್ಥ ಪೂರ್ಣವಾಗಿಸುತ್ತಾ ನಮ್ಮ ಆಚರಣೆಗಳ ವೈಶಿಷ್ಟ್ಯತೆ ಆರಿಯೋಣ.

ಗೋವನ್ನೇ ಕಾಮಧೇನು, ಗೋಮಾತೆ ಎಂದೆಲ್ಲಾ ಪೂಜಿಸುವ ನಾವು ಇದರಿಂದ ತಯಾರಿಸಲ್ಪಟ್ಟ ದೀಪಗಳು ರಾಸಾಯನಿಕ ಮುಕ್ತ ಎಂಬ ಮಹೋನ್ನತ ಕಾರಣದಿಂದಾಗಿ ಅದನ್ನು ಖರೀದಿಸಿ ಬಳಸಲು ಮುಂದಾಗಬೇಕಿದೆ. ಈ ದೀಪಗಳು ಮಣ್ಣಿನಲ್ಲಿ ಸುಲಭವಾಗಿ ಸೇರಿಕೊಳ್ಳುತ್ತದೆ.

ಪ್ರಧಾನ ಮಂತ್ರಿಯವರ ಸ್ಥಳೀಯ ಉತ್ಪನ್ನ ಗಳಿಗೆ ದನಿಯಾಗಿ ಎಂಬ ಕರೆಯಿಂದ ಪ್ರೇರಿತರಾಗಿ ರಾಜಸ್ಥಾನದಲ್ಲಿ ನೂರಾರು ಮಹಿಳೆಯರು ಗೋಮಯದಿಂದ ರೀತಿಯ ದೀಪಗಳನ್ನು ತಯಾರಿಸಿ ಸ್ವಾವಲಂಬನೆಯತ್ತ ದಾಪುಗಾಲಿ ಟ್ಟಿರುವುದಲ್ಲದೆ, ನಮ್ಮದೇ ಉತ್ಪನ್ನಗಳೊಂದಿಗೆ ಸಾಂಪ್ರದಾಯಿಕ ಬದ್ದವಾಗಿ ಬೆಳಕಿನ ಹಬ್ಬ ಆಚರಿಸುವ ಸಂಭ್ರಮಕ್ಕೆ ಸಾಕ್ಷಿಯಾಗುವಂತಾಗಿದ್ದಾರೆ.

ಇದೇ ರೀತಿ ದೇಶಾದ್ಯಂತ ಹಲವೆಡೆ ಗೋಮಯ ದಿಂದ ತಯಾರಿಸಿದ ದೀಪಗಳು ಲಭ್ಯವಾಗುತ್ತಿದೆ. ರಾಜ್ಯದ ಸಾಂಸ್ಕøತಿಕ ನಗರ ಎಂದೇ ಖ್ಯಾತಿ ಗಳಿಸಿದ ಮೈಸೂರಿನಲ್ಲಿ ಇಂತಹ ದೀಪಗಳನ್ನು ತಯಾರಿಸಿ ಮಾರಾಟಕ್ಕೆ ಇಟ್ಟಿದ್ದಾರೆ.

ಇನ್ನು ಶತ ಶತಮಾನ ಇತಿಹಾಸವಿರುವ ಮಣ್ಣಿನ ಹಣತೆಗೆ ಇದರಿಂದ ಮತ್ತಷ್ಟು ಮೆರುಗು ಬಂದಿ ರುವುದಂತೂ ಸುಳ್ಳಲ್ಲ. ಅದು ಪ್ರತಿ ಮನೆಯಲ್ಲೂ ಬೆಳಕಾಗಲಿ, ಬರೀ ಕತ್ತಲು ನೀಗುವ ಬೆಳಕಲ್ಲ. ಮನದ ಎಲ್ಲಾ ಕ್ಲೇಶೆಗಳನ್ನು ನಿವಾರಿಸುವ ತೇಜಸ್ಸಿನ ಚಕ್ಷು ವಾಗಲಿ ಎಂಬ ಆಶಯ ಈ ವಿಚಾರದ ಹಿಂದಿದೆ.

ಈ ಸದಾಶಯಕ್ಕೆ ಮತ್ತೊಂದು ಸುಸಂದರ್ಭವೂ ಒದಗಿ ಬಂದಿದೆ. ಅದು ಸರ್ಕಾರವೂ ಈ ಬಾರಿ ಹಸಿರು ಪಟಾಕಿಗೆ ಮಾತ್ರ ಆದ್ಯತೆ ನೀಡಿದ್ದು, ಪರಿಸರಕ್ಕೆ ಹಾನಿಯಾಗದಂತಹ ಕೆಲವೇ ಕೆಲವು ರಾಸಾಯನಿಕ ಮಿಶ್ರಿತವಾದ ಪಟಾಕಿಗಳನ್ನು ಹಚ್ಚಲು ಅನುಮತಿಸಲಾಗಿದೆ. ಈ ಬಾರಿ ಹೆಚ್ಚಿನ ಶಬ್ದ, ಪಟಾಕಿಯಂತಹ ಹೊಗೆಯಂತಹ ಮಾಲಿನ್ಯದಿಂದ ಹೊರತಾಗಿ ಹಣತೆಯ ಒನಪಿನೊಂದಿಗೆ ದೀಪೆÇೀತ್ಸವದ ಹಬ್ಬ ದೀಪಾವಳಿ ಆಚರಿಸಿ, ಸಂಭ್ರಮಿಸೋಣ.

Facebook Comments