ನಟಿ ದೀಪಿಕಾ ಪಡುಕೋಣೆಗೆ ಎನ್‍ಸಿಬಿ ಕಂಟಕ..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಸೆ.22- ಬಾಲಿವುಡ್ ನಟ ಸುಶಾಂತ್ ಸಿಂಗ್‍ಸಾವು ಪ್ರಕರಣದ ತನಿಖೆ ತೀವ್ರಗೊಂಡಷ್ಟು ಹೊಸ ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಡ್ರಗ್ಸ್ ಬಳಕೆ ಜಾಲದಲ್ಲಿ ಇದೀಗ ಬಿಟೌನ್ ಪ್ರಸಿದ್ಧ ನಟಿ ದೀಪಿಕಾ ಪಡುಕೋಣೆ ಹೆಸರು ಕೇಳಿ ಬಂದಿದ್ದು, ಪದ್ಮಾವತ್ ಖ್ಯಾತಿಯ ನಟಿಗೆ ಸಮನ್ಸ್ ನೀಡಲು ಮಾದಕ ವಸ್ತು ನಿಯಂತ್ರಣ ಮಂಡಳಿ ಸಜ್ಜಾಗಿದೆ.

ದೀಪಿಕಾ ತನ್ನ ವ್ಯವಸ್ಥಾಪಕಿ ಕರಿಷ್ಮಾ ಜತೆ ವ್ಯಾಟ್ಸ್ ಅಪ್‍ನಲ್ಲಿ ಮಾದಕ ವಸ್ತುಗಳ ಬಗ್ಗೆ ರಹಸ್ಯ ಸಂಕೇತದಲ್ಲಿ ಸಂಭಾಷಣೆ ನಡೆಸಿದ ಹೆಚ್ಚಿನ ವಿವರಗಳು ಎನ್‍ಸಿಬಿಗೆ ಲಭ್ಯವಾಗಿದ್ದು , ತನಿಖೆ ತೀವ್ರಗೊಂಡಿದೆ. ಇದೇ ವೇಳೆ ಬಾಲಿವುಡ್‍ನ ನಟಿಯರಾದ ಸಾರಾ ಅಲಿಖಾನ್, ಶ್ರದ್ಧಾ ಕಪೂರ್, ರಾಕುಲ್ ಪ್ರೀತ್ , ಫ್ಯಾಷನ್ ಡಿಸೈನರ್ ಸೈಮೋನ್ ಕಂಬಾಟಾ ಅವರಿಗೂ ಎನ್‍ಸಿಬಿ ಸಮನ್ಸ್ ಜಾರಿಗೊಳಿಸಲಿದೆ.

Facebook Comments