ಡ್ರಗ್ಸ್ ವಿಚಾರಣೆ : ದೀಪಿಕಾ ಪಡುಕೋಣೆಗೆ ಮತ್ತೆ ಕಂಟಕ..?

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, 28- ತಿಂಗಳ ಹಿಂದೆ ಡ್ರಗ್ಸ್ ಸಂಬಂಧ ಎನ್‍ಸಿಬಿ ವಿಚಾರಣೆ ಎದುರಿಸಿದ್ದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೆ ಮತ್ತೆ ಕಂಟಕ ಎದುರಾಗಿದೆ. ಎನ್‍ಸಿಬಿ ವಿಚಾರಣೆ ನಡೆಸಿ ತಿಂಗಳುಗಳೇ ಕಳೆದರೂ ಮತ್ತೊಮ್ಮೆ ವಿಚಾರಣೆಗೆ ಕರೆಯದ ಕಾರಣ ದೀಪಿಕಾಗೆ ಡ್ರಗ್ಸ್ ವಿಚಾರದಲ್ಲಿ ಕ್ಲೀನ್‍ಚೀಟ್ ದೊರೆಯಲಿದೆ ಎಂದು ಅಂದಾಜಿಸಲಾಗಿತ್ತಾದರೂ ದೀಪಿಕಾಳ ವ್ಯವಸ್ಥಾಪಕಿ ಕರಿಶ್ಮಾ ಮನೆಯಲ್ಲಿ ಡ್ರಗ್ಸ್ ಸಿಕ್ಕಿರುವುದರಿಂದ ಪ್ರಕರಣಕ್ಕೆ ಮತ್ತಷ್ಟು ಪುಷ್ಠಿ ಸಿಕ್ಕಂತಾಗಿದೆ.

ಈ ಹಿಂದೆ ದೀಪಿಕಾ ಪಡುಕೋಣೆಯ ವ್ಯವಸ್ಥಾಪಕಿ ಕರಿಶ್ಮಾಳನ್ನು ಎನ್‍ಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ನಿನ್ನೆ ಅವರ ಮನೆಯ ಮೇಲೆ ಮತ್ತೆ ಅಧಿಕಾರಿಗಳು ದಾಳಿ ನಡೆಸಿದಾಗ ಮಾದಕ ವಸ್ತುಗಳು ಪತ್ತೆಯಾಗಿರುವುದರಿಂದ ದೀಪಿಕಾಗೆ ಕ್ಲೀನ್ ಚಿಟ್ ಸಿಗುವುದು ಅನುಮಾನವಾಗಿದೆ.

ದಾಳಿಯ ವಿಷಯ ತಿಳಿದು ಕರಿಶ್ಮಾ ಪರಾರಿಯಾಗಿರುವುದರಿಂದ ಆಕೆಯ ಮನೆಯ ಬಾಗಿಲಿಗೆ ಸಮನ್ಸ್ ಅಂಟಿಸಲಾಗಿದ್ದು, ಇದಕ್ಕೆ ತಕ್ಕ ಉತ್ತರ ನೀಡದಿದ್ದರೆ ಬಂಧಿಸುವ ಸಾಧ್ಯತೆಗಳಿವೆ. ಈ ಹಿಂದೆ ದೀಪಿಕಾ ಪಡುಕೋಣೆಯನ್ನು ಡ್ರಗ್ಸ್ ಹಾಗೂ ಸುಶಾಂತ್ ಸಿಂಗ್ ರಜಪೂತ್ ಕೊಲೆ ಪ್ರಕರಣಗಳಲ್ಲಿ ಎನ್‍ಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು.

Facebook Comments