ಬೆಂಗಳೂರಿಗೆ ಬಂದಿಳಿದ ನವದಂಪತಿ, ನಾಳೆ ದೀಪ್-ವೀರ್ ಆರತಕ್ಷತೆ

ಈ ಸುದ್ದಿಯನ್ನು ಶೇರ್ ಮಾಡಿ

Deepika--01

ಬೆಂಗಳೂರು. ನ.20 : ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಬಾಲಿವುಡ್ ನ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಇಂದು ಬೆಂಗಳೂರಿಗೆ ಆಗಮಿಸಿದ್ದಾರೆ. ಮುಂಬೈನಿಂದ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಈ ಜೋಡಿಗೆ ಅಭಿಮಾನಿಗಳಿಂದ ಅದ್ದೂರಿ ಸ್ವಾಗತ ದೊರೆಯಿತು. ಏರ್ ಪೋರ್ಟ್ ನಲ್ಲಿ ನವದಂಪತಿ ಫೋಟೋಗಳಿಗೆ ಪೋಸ್ ಕೊಟ್ಟರು, ಬಿಳಿ ಬಣ್ಣದ ಅನಾರ್ಕಲಿಯಲ್ಲಿ ದೀಪಿಕಾ ಮಿಂಚಿದರೆ, ರಣವೀರ್ ಸಿಂಗ್ ಕೂಡ ಬಿಳಿ ಕುರ್ತಾ ಪೈಜಾಮಾಹಾಗೂ ನೆಹರೂ ಕೋಟ್ ನಲ್ಲಿ ಮಿಂಚುತ್ತಿದ್ದರು.

ಮೊನ್ನೆಯಷ್ಟೇ ಇಟಲಿಯಲ್ಲಿ ಮದುವೆಯಾಗಿದ್ದ ದೀಪಿಕಾ-ರಣವೀರ್ ಜೋಡಿ ವಿವಾಹವಾದ ನಂತರ ಮೊದಲ ಬಾರಿಗೆ ಬೆಂಗಳೂರಿಗೆ ನವದಂಪತಿಯನ್ನು ಕಣ್ತುಂಬಿಕೊಳ್ಳಲು ಅಭಿಮಾನಗಳ ದಂಡೇ ಕೆಐಎಎಲ್ ಗೆ ಆಗಮಿಸಿತ್ತು. ಸುಮಾರು 12ಗಂಟೆಗೆ ದೀಪಿಕಾ ಪಡುಕೋಣೆ ವಿಮಾನ ನಿಲ್ದಾಣಕ್ಕೆ ಕುಟುಂಬ ಸಮೇತ ಆಗಮಿಸಿದ್ದರು. ನಾಳೆ ಲೀಲಾ ಪ್ಯಾಲೇಸ್‍ನಲ್ಲಿ ನವದಂಪತಿಯ ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ನಿಗದಿಯಾಗಿದೆ. ಹೀಗಾಗಿ ನಾಳೆ ನಡೆಯಲಿರುವ ಆರತಕ್ಷತೆ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಸಿನಿ ತಾರೆಯರು ಹಾಗೂ ಗಣ್ಯಾತಿ ಗಣ್ಯರು ಭಾಗವಹಿಸಿಲಿದ್ದಾರೆ.

ನವೆಂಬರ್ 14 ಮತ್ತು 15ರಂದು ಇಟಲಿಯ ಕೊಮೊ ಸಿಟಿಯಲ್ಲಿ ದೀಪ್‍ವೀರ್ ಜೋಡಿ ಮದುವೆ ಆಗಿತ್ತು. ಖಾಸಗಿಯಾಗಿ ನಡೆದಿದ್ದ ಮದುವೆ ಕಾರ್ಯಕ್ರಮದಲ್ಲಿ ಎರಡು ಕುಟುಂಬಗಳ ಆಪ್ತರು ಮತ್ತು ಬಾಲಿವುಡ್ ತಾರೆಯರು ಮಾತ್ರ ಭಾಗಿಯಾಗಿದ್ದರು.

ನ. 14ರಂದು ಕೊಂಕಣಿ ಹಾಗೂ ನ. 15ರಂದು ಸಿಂಧ್ ಸಂಪ್ರದಾಯದಲ್ಲಿ ದೀಪ್‍ವೀರ್ ಮದುವೆಯಾದರು. ಮದುವೆಯಾದ ದೀಪ್‍ವೀರ್ ತಮ್ಮ ಮದುವೆಯ ಫೋಟೋವನ್ನು ರಿವೀಲ್ ಮಾಡಿರಲಿಲ್ಲ. ಬಳಿಕ ನ. 15ರ ಸಂಜೆ ದಿಪ್‍ವೀರ್ ತಮ್ಮ ಮದುವೆ ಫೋಟೋ ರಿವೀಲ್ ಮಾಡಿದರು.

WhatsApp Image 2018-11-20 at 12.32.40 PM WhatsApp Image 2018-11-20 at 12.32.41 PM WhatsApp Image 2018-11-20 at 12.32.42 PM Deep-02 Deep-01 Deep-02 Deep-01

Facebook Comments

Sri Raghav

Admin