ಯುದ್ಧದಲ್ಲಿ ಮಡಿದ ಸೈನಿಕರ ಕುಟುಂಬಕ್ಕೆ ಹಣ ನೆರವು 4 ಪಟ್ಟು ಹೆಚ್ಚಳ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಅ.5- ಮಹತ್ವದ ನಿರ್ಧಾರವೊಂದರಲ್ಲಿ ಕೇಂದ್ರ ಸರ್ಕಾರ ಯುದ್ಧದಲ್ಲಿ ಮಡಿದ ಸೈನಿಕರ ಕುಟುಂಬಗಳಿಗೆ ಈವರೆಗೆ ನೀಡಲಾಗುತ್ತಿದ್ದ ಹಣಕಾಸು ನೆರವನ್ನು  ನಾಲ್ಕು ಪಟ್ಟು ಅಂದರೆ 8 ಲಕ್ಷ ರೂ.ಗಳಿಗೆ ಹೆಚ್ಚಿಸಿದೆ. ಈ ಕುರಿತು ರಕ್ಷಣಾ ಸಚಿವಾಲಯ ಸಲ್ಲಿಸಿದ್ದ ಪ್ರಸ್ತಾವನೆಗೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಅಂತಿಮ ಅನುಮೋದನೆ ನೀಡಿದ್ದಾರೆ.

ಇದರೊಂದಿಗೆ ಸೇನಾ ಕುಟುಂಬಗಳ ಬಹು ದಿನಗಳ ಬೇಡಿಕೆ ಈಡೇರಿದಂತಾಗಿದೆ. ಹಿಂದೆ ಯುದ್ಧದಲ್ಲಿ ಮಡಿದವರಿಗೆ ಮತ್ತು ಶೇ.60 ಕ್ಕಿಂತಲೂ ಹೆಚ್ಚು ಗಾಯಗೊಂಡವರಿಗೆ ಕೇಂದ್ರ ಸರ್ಕಾರದ ನಿಧಿಯಿಂದ 2 ಲಕ್ಷ ರೂ.ಗಳನ್ನು ನೀಡಲಾಗುತ್ತಿದೆ.

ಈಗ ಅದನ್ನು 4 ಪಟ್ಟು ಅಂದರೆ 8 ಲಕ್ಷ ರೂ.ಗಳಿಗೆ ಹೆಚ್ಚಿಸಲು ರಕ್ಷಣಾ ಸಚಿವರು ಅನುಮೋದನೆ ನೀಡಿದ್ದಾರೆ. ಇದಲ್ಲದೆ ಕೇಂದ್ರ ಸರ್ಕಾರ ಇಂತಹ ಸಂತ್ರಸ್ತ ಕುಟುಂಬಗಳಿಗೆ ಲಭಿಸಲಿರುವ ಇತರ ಸೌಲಭ್ಯ , ಸವಲತ್ತುಗಳು ಮುಂದುವರೆಯಲಿದೆ. ಯುದ್ಧ ಸಾವುಗಳ ಪರಿಹಾರಗಳ ನಿಧಿಯಲ್ಲಿ ಈ ಹೆಚ್ಚಳ ಮಾಡಲಾಗಿದೆ.

Facebook Comments