ಸ್ವಿಟ್ಜರ್ಲ್ಯಾಂಡ್ ಮೂಲದ ಫಿಲಾಟಸ್ ವಿಮಾನ ಸಂಸ್ಥೆ ಮೇಲೆ ನಿಷೇಧ ಹೇರಿದ ಭಾರತ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜು.16-ಭಾರೀ ಭ್ರಷ್ಟಾಚಾರ ಮತ್ತು ಕಮಿಷನ್ ವಹಿವಾಟಿನಲ್ಲಿ ತೊಡಗುವ ವಿದೇಶಿ ಸಂಸ್ಥೆಗಳ ವಿರುದ್ಧ ಭಾರತದ ಕಠಿಣ ಕ್ರಮ ಮುಂದುವರೆದಿದೆ.ಮಹತ್ವದ ಬೆಳವಣಿಗೆಯಲ್ಲಿ ಭಾರತೀಯ ರಕ್ಷಣಾ ಸಚಿವಾಲಯ ಸ್ವಿರ್ಜಲ್ಯಾಂಡ್‍ನ ಮೂಲದ ಪಿಲಾಟಸ್ ವಿಮಾನ ಸಂಸ್ಥೆ ಮೇಲೆ ನಿಷೇಧ ಹೇರಿದೆ.

ಭಾರತೀಯ ವಾಯು ಸೇನೆ ಸೇರಿದಂತೆ ದೇಶಕ್ಕೆ ತರಬೇತಿ ವಿಮಾನಗಳ ಮಾರಾಟ ಮಾಡುತ್ತಿದ್ದ ಸ್ವಿಸ್ ಮೂಲದ ಪಿಲಾಟಸ್ ವಿಮಾನ ಸಂಸ್ಥೆ ಮೇಲೆ ಭಾರತೀಯ ರಕ್ಷಣಾ ಸಚಿವಾಲಯ ಒಂದು ವರ್ಷ ಕಾಲ ನಿಷೇಧ ಹೇರಿದೆ.

ಪಿಲಾಟಸ್ ವಿಮಾನ ಸಂಸ್ಛೆ ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರದ ಆರೋಪವನ್ನು ಭಾರತ ಗಂಭೀರವಾಗಿ ಪರಿಗಣಿಸಿದ್ದು, ಇದೇ ಕಾರಣಕ್ಕೆ ಆ ಸಂಸ್ಥೆ ವಿರುದ್ಧ ನಿಷೇಧ ಜಾರಿ ಮಾಡಿದೆ ಎನ್ನಲಾಗಿದೆ. ಕೇಂದ್ರೀಯ ತನಿಖಾ ದಳ (ಸಿಬಿಐ) ಪಿಲಾಟಸ್ ವಿಮಾನ ಸಂಸ್ಛೆಯ ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರ ಆರೋಪವನ್ನು ತನಿಖೆ ನಡೆಸುತ್ತಿದೆ.

2012ರಲ್ಲಿ ಭಾರತಕ್ಕೆ ತರಬೇತಿ ವಿಮಾನ ನೀಡುವ ಒಪ್ಪಂದ ಮಾಡಿಕೊಳ್ಳಲು ಆ ಸಂಸ್ಥೆಯ ಭಾರತೀಯ ಅಧಿಕಾರಿಗಳಿಗೆ ಲಂಚ ನೀಡಿತ್ತು ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಹೀಗಾಗಿ ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ರಕ್ಷಣಾ ಸಚಿವಾಲಯ ಪಿಲಾಟಸ್ ವಿಮಾನ ಸಂಸ್ಥೆ ಮೇಲೆ ಒಂದು ವರ್ಷಗಳ ಕಾಲ ನಿಷೇಧ ಹೇರಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin