1.78 ಲಕ್ಷ ಕೋಟಿ ರೂ.ಮೌಲ್ಯದ 111 ಸೇನಾ ಯೋಜನೆಗಳಿಗೆ ಅಸ್ತು

ಈ ಸುದ್ದಿಯನ್ನು ಶೇರ್ ಮಾಡಿ

Army

ನವದೆಹಲಿ, ಜ.1-ರಕ್ಷಣಾ ವಲಯದಲ್ಲಿ ಮೇಕ್ ಇನ್ ಇಂಡಿಯಾ ಅಡಿ ಮಿಲಿಟರಿ ಹಾರ್ಡ್‍ವೇರ್‍ಗಳನ್ನು ಉತ್ಪಾದಿಸಲು ಕಳೆದ ಮೂರು ವರ್ಷಗಳಲ್ಲಿ ರಕ್ಷಣಾ ಸಚಿವಾಲಯ 1.78 ಲಕ್ಷ ಕೋಟಿ ರೂ. ಮೌಲ್ಯದ 111 ಸೇನಾ ಯೋಜನೆಗಳಿಗೆ ಸಮ್ಮತಿ ನೀಡಿದೆ.

ಇದೇ ವೇಳೆ ರಕ್ಷಣಾ ಸಾಧನಗಳನ್ನು ಹೊಂದಲು ಭಾರತದ ವಿವಿಧ ಕಂಪನಿಗಳೊಂದಿಗೆ ಸರ್ಕಾರವು 65,471.28 ಕೋಟಿ ರೂ. ಮೌಲ್ಯದ 99 ಕರಾರು ಒಪ್ಪಂದಗಳಿಗೆ ಸಹಿ ಹಾಕಿದೆ.

ರಕ್ಷಣಾ ಖಾತೆ ರಾಜ್ಯ ಸಚಿವ ಸುಭಾಷ್ ಭಾಮ್ರೆ ಲೋಕಸಭೆಗೆ ಈ ಮಾಹಿತಿ ನೀಡಿದ್ದಾರೆ. 2015-16 ರಿಂದ 2017-18ರ ವಿತ್ತೀಯ ವರ್ಷದಲ್ಲಿ ಕೇಂದ್ರ ಸರ್ಕಾರವು 1,78,900 ಕೋಟಿ ರೂ.ಗಳ ಮೌಲ್ಯದ 111 ಯೋಜನೆಗಳಿಗೆ ಅಗತ್ಯ ಸಮ್ಮತಿ (ಅಕ್ಸೆಪ್ಟೆನ್ಸ್ ಆಫ್ ನೆಸೆಸ್ಸಿಟಿ(ಎಓಎನ್)ಗೆ ಒಪ್ಪಿಗೆ ನೀಡಿದೆ ಎಂದು ಸಚಿವರು ವಿವರಿಸಿದರು.

ರಕ್ಷಣಾ ಕ್ಷೇತ್ರದಲ್ಲಿ ಮೇಕ್ ಇನ್ ಇಂಡಿಯಾ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಹೆಲಿಕಾಪ್ಟರ್‍ಗಳು ಯುದ್ದ ವಿಮಾನಗಳು ಹಾಗೂ ಜಲಾಂತರ್ಗಾಮಿಗಳ ನಿರ್ಮಾಣದಂಥ ಅನೇಕ ಯೋಜನೆಗಳನ್ನು ಮುಂಬರುವ ವರ್ಷಗಳಲ್ಲಿ ಈ ಯೋಜನೆಯಡಿ ತಯಾರಿಸುವ ಗುರಿ ಹೊಂದಲಾಗಿದೆ.

ಭಾರತೀಯ ವಾಯುಪಡೆ(ಐಎಎಫ್)ಗೆ ಈವರೆಗೆ 10 ಹಗುರ ಯುದ್ಧ ವಿಮಾನಗಳನ್ನು ಎಚ್‍ಎಎಲ್‍ಗೆ ವಿತರಿಸಲಾಗಿದೆ. ಇವುಗಳು ಐಎಎಫ್‍ನ 45 ಸ್ಕ್ವಾಡ್ರನ್ ಜೊತೆ ಕಾರ್ಯನಿರ್ವಹಿಸುತ್ತಿದೆ. ಉಳಿದ 6 ಫೈಟರ್ ಜೆಟ್‍ಗಳನ್ನು 2019ರ ಮಾರ್ಚ್ ವೇಳೆಗೆ ಪೂರೈಸಲಾಗುವುದು ಎಂದು ಭಾಮ್ರೆ ತಿಳಿಸಿದರು.  ವಾಯುಪಡೆಯ 15 ಸ್ಕ್ವಾಡ್ರನ್‍ಗಳಿಗೆ ನಾಲ್ಕು ತರಬೇತಿ ವಿಮಾನಗಳನ್ನು ಪೂರೈಸಲಾಗಿದೆ ಎಂದು ಸಚಿವರ ಸದಸ್ಯರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin