ಚೀನಾ ವಿರೋಧದ ನಡುವೆ ಚೆಕ್ ಗಣರಾಜ್ಯದ ಅಧ್ಯಕ್ಷ ತೈಪೆ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

ತೈಪೆ, ಆ.30- ಚೀನಾದ ವಿರೋಧದ ನಡುವೆಯೂ ಚೆಕ್ ಗಣರಾಜ್ಯದ ಅಧ್ಯಕ್ಷರ ನೇತೃತ್ವದಲ್ಲಿ ಸಂಸದರ ನಿಯೋಗ 7 ದಿನಗಳ ಭೇಟಿಗಾಗಿ ಥೈಪೆಗೆ ಆಗಮಿಸಿದೆ.

ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚೆಕ್ ಅಧ್ಯಕ್ಷ ಮಿಲಿಯೋಸ್ ಅವರೊಂದಿಗೆ ಉನ್ನತ ಮಟ್ಟದ ನಿಯೋಗ ವಾಣಿಜ್ಯ ವ್ಯವಹಾರಗಳ ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ಇಲ್ಲಿಗೆ ಭೇಟಿ ನೀಡಿದ್ದು, ಉಭಯ ದೇಶಗಳ ನಡುವಿನ ರಾಜ ತಾಂತ್ರಿಕ ಸಂಬಂಧಗಳ ವೃದ್ಧಿಗೆ ಇದು ಸಹಕಾರಿ ಇದೆ ಎಂದು ಹೇಳಲಾಗಿದೆ.

ಆದರೆ ಚೀನಾ ಈ ದ್ವೀಪ ರಾಷ್ಟ್ರದ ನೀತಿಯನ್ನು ಕಟುವಾಗಿ ಟೀಕಿಸಿದ್ದು , ತನ್ನ ಪ್ರಾಂತ್ಯದಲ್ಲೇ ಒಳಪಡುವ ತೈಪೆ ಸಂಬಂಧವನ್ನು ಹಾಳುಗೆಡುವುತ್ತಿದೆ ಎಂದು ಹೇಳುತ್ತಿದೆ.

ತೈವಾನ್‍ನ ವಿದೇಶಾಂಗ ಸಚಿವ ಜೋಸೆಫ್.ಯು ಅವರು ನಿಯೋಗವನ್ನು ಸ್ವಾಗತ ನೀಡಿದ್ದು ವಿಶೇಷವೆಂದರೆ ಚೀನಾದ ವಿಮಾನ ಯಾನ ಸಂಸ್ಥೆಯೊಂದು ತೈಪೆಯ ಧ್ವಜಗಳನ್ನು ಹಿಡಿದು ಆಗಮಿಸಿದ್ದು ತಯೂನನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕುತೂಹಲ ಕೆರಳಿಸಿತ್ತು.

Facebook Comments

Sri Raghav

Admin