ದೆಹಲಿಯಲ್ಲಿ ಮಿತಿಮೀರಿದ ವಾಯುಮಾಲಿನ್ಯ,ಶಾಲೆಗಳು ಬಂದ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ನ.17- ವಾಯು ಗುಣಮಟ್ಟ ನಿರ್ವಹಣಾ ಆಯೋಗ (ಸಿಎಕ್ಯೂಎಂ)ವು ರಾಷ್ಟ್ರ ರಾಜಧಾನಿ ದೆಹಲಿ (ಎನ್‍ಸಿಆರ್)ಯಲ್ಲಿ ಮುಂದಿನ ಆದೇಶದವರೆಗೆ ಶಾಲಾ-ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೇಗಳನ್ನು ಬಂದ್ ಮಾಡುವಂತೆ ನಿನ್ನೆ ತಡರಾತ್ರಿ ನಿರ್ದೇಶನ ನೀಡಿದೆ.ಆನ್‍ಲೈನ್ ವಿಧಾನದ ಶಿಕ್ಷಣಕ್ಕೆ ಮಾತ್ರ ಅದು ಅನುಮತಿ ನೀಡಿದೆ.

ದೆಹಲಿಯ 300ಕಿಮೀ ವ್ಯಾಪ್ತಿಯ ಒಳಗೆ ಇರುವ ಎನ್‍ಟಿಪಿಸಿ, ಝಜ್ಜರ್, ಮಹಾತ್ಮಗಾಂಧಿ ಟಿಪಿಎಸ್, ಸಿಎಲ್‍ಪಿ ಝಜ್ಜರ್,
ಪಾಣಿಪತ್ ಟಿಪಿಎಸ್, ಹೆಚ್‍ಪಿಜಿಸಿಎಲ್, ನಭಾ ಪವರ್ ಲಿಮಿಟೆಡ್ ಟಿಪಿಎಸ್, ರಾಜ್‍ಪುರ ಮತ್ತು ತಾಳ್ವಾಂಡಿ ಸಬೋ ಟಿಪಿಎಸ್, ಮನ್ಸಾ- ಈ ಐದು ಶಾಖೋತ್ಪನ್ನ ವಿದ್ಯುಚ್ಛಕ್ತಿ ಸ್ಥಾವರಗಳು (11 ಸ್ಥಾವರಗಳ ಪೈಕಿ) ಮಾತ್ರ ನ.30ರ ವರೆಗೆ ಕಾರ್ಯನಿರ್ವಹಿಸಬಹುದು ಎಂದೂ ಅದು ಹೇಳಿದೆ.

ಆಯೋಗವು ದೆಹಲಿ ಮತ್ತು ಎನ್‍ಸಿಆರ್ ರಾಜ್ಯಗಳಿಗೆ ನ.21ರ ವರೆಗೆ ಕಟ್ಟಡ ನಿರ್ಮಾಣ ಮತ್ತು ನೆಲಸಮ ಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತೆ ನಿರ್ದೇಶಿಸಿದೆ.

ರೈಲ್ವೆ ಸೇವೆಗಳು/ ರೈಲು ನಿಲ್ದಾಣಗಳು, ಮೆಟ್ರೋ ರೈಲು ನಿಗಮ ಸೇವೆಗಳು, ವಿಮಾನ ನಿಲ್ದಾಣಗಳು, ಅಂತಾರಾಜ್ಯ ಬಸ್ ನಿಲ್ದಾಣಗಳು (ಐಎಸ್‍ಬಿಟಿಎಸ್) ಮತ್ತು ರಾಷ್ಟ್ರೀಯ ಭದ್ರತಾ/ರಕ್ಷಣಾ ಸಂಬಂಧಿ ಚಟುವಟಿಕೆಗಳು/ ರಾಷ್ಟ್ರ ಪ್ರಾಮುಖ್ಯವಿರುವ ಯೋಜನೆಗಳು ಮಾತ್ರ ಸಿ ಮತ್ತು ಡಿ ತ್ಯಾಜ್ಯ ನಿರ್ವಹಣಾ ನಿಯಮಗಳು ಮತ್ತು ಧೂಳು ನಿಯಂತ್ರಣ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಮೂಲಕ ಕಾರ್ಯಾಚರಣೆ ಮಾಡುವುದು ಎಂದೂ ಆಯೋಗವು ನಿರ್ದೇಶನ ನೀಡಿದೆ.

Facebook Comments

Sri Raghav

Admin