ರಾಜಧಾನಿ ರಿಸಲ್ಟ್ : ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ (Live Updates)

ಈ ಸುದ್ದಿಯನ್ನು ಶೇರ್ ಮಾಡಿ

ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ : ಒಟ್ಟು ಕ್ಷೇತ್ರಗಳು : 70 / ಮ್ಯಾಜಿಕ್ ನಂಬರ್ : 36
ಎಎಪಿ : 51
ಬಿಜೆಪಿ :  19
ಕಾಂಗ್ರೆಸ್ : 00
ಇತರೆ : 00

ರಾಷ್ಟ್ರ ರಾಜಧಾನಿಯಲ್ಲಿ ಆಮ್ ಆದ್ಮಿ ಪಾರ್ಟಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ದಿಲ್ಲಿಯಲ್ಲಿ ಮತ್ತೆ ಕೇಜ್ರಿ ದರ್ಬಾರ್ ಶುರುವಾಗಿದೆ. ನವದೆಹಲಿಯ ಒಟ್ಟು 70 ವಿಧಾನಸಭಾ ಕ್ಷೇತ್ರಗಳ ಪೈಕಿ 40ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಆಪ್ ಅಭ್ಯರ್ಥಿಗಳು ಗೆಲುವು ಸಾಧಿಸುವ ಸಾಧ್ಯತೆ ಇದ್ದು, ಬಿಜೆಪಿ 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸುವುದು ಖಚಿತಪಟ್ಟಿದ್ದು, ಕಾಂಗ್ರೆಸ್ ಖಾತೆ ತೆರೆಯದೆ ತೀವ್ರ ಮುಖಭಂಗಕ್ಕೆ ಒಳಗಾಗಿದೆ.

2015ರ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಎಎಪಿ ಗೆದ್ದಿದ್ದ ಕ್ಷೇತ್ರಗಳಲ್ಲಿ ಇಳಿಕೆಯಾಗಿದ್ದು, ಕೇವಲ ಮೂರು ಸ್ಥಾನಕ್ಕೆ ಕುಸಿದಿದ್ದ ಬಿಜೆಪಿ ಈ ಬಾರಿ ಎರಡಂಕಿ ದಾಟುವ ಮೂಲಕ ಉತ್ತಮ ಪ್ರದರ್ಶನ ನೀಡಿದೆ.ಚುನಾವಣೆಗೂ ಮುನ್ನವೇ ನಾಯಕರಿಲ್ಲದೆ ಸೋತು ಸೊರಗಿ ಯುದ್ದಕ್ಕೂ ಮುನ್ನವೇ ಶಸ್ತ್ರ ತ್ಯಾಗ ಮಾಡಿದ್ದ ಕಾಂಗ್ರೆಸ್‍ಗೆ 2015ರ ಫಲಿತಾಂಶವೇ ಪುನಾವರ್ತನೆಯಾಗಿದೆ.

2019ರ ಲೋಕಸಭೆ ಚುನಾವಣೆಯಲ್ಲಿ ದೆಹಲಿಯ 7ಕ್ಕೆ ಏಳು ಕ್ಷೇತ್ರಗಳನ್ನು ಗೆದ್ದಿದ್ದ ಬಿಜೆಪಿ ಈ ಬಾರಿ ಶತಾಯಗತಾಯ ಗೆಲ್ಲಲು ನಡೆಸಿದ ಪ್ರಯತ್ನಗಳಿಗೆ ಮತದಾರ ಸೊಪ್ಪು ಹಾಕಿಲ್ಲ.
ಬದಲಿಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸ್ವಚ್ಛ ಆಡಳಿತ, ಅಭಿವೃದ್ಧಿ, ಮೂಲಭೂತ ಸೌಕರ್ಯಗಳಿಗೆ ಒತ್ತು, ಸರ್ಕಾರಿ ಶಾಲೆಗಳ ಸುಧಾರಣೆ, ಸಾರಿಗೆ ಮತ್ತು ಸಂಚಾರ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳು, ಮಹಿಳೆಯ ಸುರಕ್ಷತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಾಡಿದ ಸುಧಾರಣೆಗಳು ಮತದಾರನ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

ವಿಶೇಷವೆಂದರೆ ದೇಶಾದ್ಯಂತ ಭಾರೀ ಕೋಲಾಹಲವನ್ನೇ ಸೃಷ್ಟಿಸಿರುವ ಕೇಂದ್ರ ಸರ್ಕಾರದ ಉದ್ದೇಶಿತ ಪೌರತ್ವ ತಿದ್ದುಪಡಿ ಕಾಯ್ದೆಬಂದ ನಂತರ ಈ ಚುನಾವಣೆ ನಡೆದಿತ್ತು.
ಕಾಯ್ದೆಯನ್ನು ವಿರೋಧಿಸಿ ದೆಹಲಿಯಲ್ಲಿ ನಡೆದ ಪ್ರತಿಭಟನೆಗೆ ಪಕ್ಷ ಇಲ್ಲವೇ ಅರವಿಂದ್ ಕೇಜ್ರಿವಾಲ್ ವಿರೋಧ ಮಾಡದೆಯೂ ಇಲ್ಲವೇ ಬೆಂಬಲವನ್ನೂ ನೀಡದೆ ಅಂತರವನ್ನು ಕಾಪಾಡಿಕೊಂಡಿದ್ದರು.

ಚುನಾವಣಾ ಪ್ರಚಾರದಲ್ಲಿ ಐದು ವರ್ಷಗಳ ಹಿಂದೆ ಎಎಪಿ ಮಾಡಿರುವ ಸಾಧನೆಗಳು, ಮುಂದೆ ಪಕ್ಷ ಅಧಿಕಾರಕ್ಕೆ ಬಂದರೆ ಕೈಗೊಳ್ಳಲಿರುವ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ದೆಹಲಿಯಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ, ನೀರು, ಸಾರಿಗೆ, ಶಿಕ್ಷಣ ಕ್ಷೇತ್ರದಲ್ಲಿ ಅರವಿಂದ್ ಕೇಜ್ರಿವಾಲ್ ಸರ್ಕಾರ ಬೆರಳು ತೋರಿಸದಂತೆ ಕೆಲಸ ಮಾಡಿದೆ.

ಮೊದಲ ಎರಡು ವರ್ಷಗಳ ಕಾಲ ಮೋದಿಯನ್ನು ಟೀಕಿಸುತ್ತಿದ್ದ ಅರವಿಂದ್ ಕೇಜ್ರಿವಾಲ್ ದೆಹಲಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಆ ಬಳಿಕ ಜನರಿಂದ ದೂರವಾಗುತ್ತಿರುವ ಸುಳಿವು ಕಂಡುಕೊಂಡ ಅರವಿಂದ್ ಕೇಜ್ರಿವಾಲ್, ತಾನು ಮಾತನಾಡುವುದಕ್ಕಿಂತ ಕೆಲಸ ಮಾಡುವುದು ಸೂಕ್ತವೆಂದು ಕೇವಲ ಕೆಲಸಕ್ಕಷ್ಟೇ ಆದ್ಯತೆ ನೀಡುತ್ತಾ ಸಾಗಿದರು. ಅರವಿಂದ್ ಕೇಜ್ರಿವಾಲ್ ಮಾಡಿದ ಈ ತಂತ್ರಗಾರಿಗೆ ದೆಹಲಿ ಜನರ ಮನಸ್ಸು ಸೆಳೆದಿರುವುದು ಫಲಿತಾಂಶದಿಂದ ಸ್ಪಷ್ಟವಾಗಿದೆ.

ಬಿಜೆಪಿಯು ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ಪಶ್ಚಿಮ ಬಂಗಾಳದಿಂದ ಆಗಮಿಸಿರುವ ಜನರನ್ನು ಜನರನ್ನು ಸೆಳೆಯಲು ಏನೆಲ್ಲಾ ಕಸರತ್ತು ನಡೆಸಬೇಕೋ ಅಷ್ಟೆಲ್ಲವನ್ನೂ ಮಾಡಿದರೂ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿದೆ.ಬಿಜೆಪಿ ಅಭಿವೃದ್ದಿಗಿಂತ ರಾಷ್ಟ್ರೀಯ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸಿತ್ತು. ಸಿಎಎ ವಿರೋಧಿಸುವವರನ್ನು ಗುಂಡಿಕ್ಕಿ ಕೊಲ್ಲಿ ಎಂದಿದ್ದು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಅವಲಂಬಿತವಾಗಿದ್ದು, ಸೂಕ್ತ ಅಭ್ಯರ್ಥಿ ಸಿಗದಿರುವುದು ಸೋಲಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಇನ್ನು ಅರವಿಂದ್ ಕೇಜ್ರಿವಾಲ್ ಅವರನ್ನು ಭಯೋತ್ಪಾದಕ ಎಂದು ಹೇಳಿದ್ದು, ಪ್ರಚೋದನಾಕಾರಿ ಭಾಷಣ ಮಾಡಿ ಚುನಾವಣಾ ಆಯೋಗದಿಂದ ನಿಷೇಧಕ್ಕೊಳಗಾದ ಕೇಂದ್ರ ಹಣಕಾಸು ರಾಜ್ಯ ಸಚಿವ ಅನುರಾಗ್ ಠಾಕೂರ್, ಶಾಹಿನ್ ಬಾಗ್ ಮಹಿಳೆಯರು ನಿಮ್ಮ ಮನೆಗಳಿಗೆ ನುಗ್ಗಿ ನಿಮ್ಮ ಮಕ್ಕಳನ್ನು ರೇಪ್ ಮಾಡಬಹುದು ಎನ್ನುವ ಆಘಾತಕಾರಿ ಹೇಳಿಕೆ ನೀಡಿದ್ದು ಬಿಜೆಪಿಗೆ ಮುಳುವಾಗಿದೆ.ಬಿಜೆಪಿ ಸಂಸದ ಪರ್ವೇಶ್ ವರ್ಮಾ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅರವಿಂದ್ ಕೇಜ್ರಿವಾಲ್ ಅವರು ಶಾಹೀನ್ ಬಾಗ್ ಗೆ ಬಿರಿಯಾನಿ ಪೂರೈಸುತ್ತಾರೆ ಎನ್ನುವ ಮೂಲಕ ವಿವಾದ ಎಬ್ಬಿಸಿ ಮತ ಧ್ರುವೀಕರಿಸಲು ನಡೆಸಿದ ಯತ್ನ ಸಂಪೂರ್ಣವಾಗಿ ವಿಫಲವಾಗಿದೆ.

ಹಿಂದೆಂದೂ ಕಂಡಿರದಷ್ಟು ಕೋಮು ಪ್ರಚೋದನೆ, ದ್ವೇಷ ಭಾಷೆಗೆ ಸಾಕ್ಷಿಯಾದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಬಿಜೆಪಿಯ ಅಭಿವೃದ್ಧಿಯಿಂದ ವಿಮುಖಚುನಾವಣಾ ಪ್ರಚಾರವನ್ನು ತಿರಸ್ಕರಿಸಿದ್ದಾರೆ.

ಅಭಿವೃದ್ಧಿಯ ವಿಚಾರಗಳಿಂದ ವಿಮುಖವಾಗಿರುವ ಕೇಂದ್ರದ ಬಿಜೆಪಿ ಸರ್ಕಾರವು ದೇಶದ ಆರ್ಥಿಕತೆಯನ್ನು ಕೆಟ್ಟ ಸ್ಥಿತಿಗೆ ಕೊಂಡೊಯ್ದಿದೆ. ಇವುಗಳು ಅದರ ಚುನಾವಣಾ ಗೆಲುವಿನ ಸಾಧ್ಯತೆಗೆ ಕೊಡಲಿ ಏಟು ನೀಡುವುದು ನಿಶ್ಚಿತ ಎಂಬುದನ್ನು ಪ್ರಜ್ಞಾವಂತ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿರುವ ದೆಹಲಿ ಚುನಾವಣೆ ಸ್ಪಷ್ಟಗೊಳಿಸಿದೆ.

# ದೆಹಲಿಯಲ್ಲಿ ಬಿಜೆಪಿ – ಕಾಂಗ್ರೆಸ್‌ನ್ನು ಗುಡಿಸಿ ಹಾಕಿದ ಆಮ್ ಆದ್ಮಿ..!
ನವದೆಹಲಿ,ಫೆ.11- ನಿರೀಕ್ಷೆಯಂತೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಪೊರಕೆ ಗುಡಿಸಿ ಹಾಕಿದೆ.

ನವದೆಹಲಿಯ ಒಟ್ಟು 70 ವಿಧಾನಸಭಾ ಕ್ಷೇತ್ರಗಳ ಪೈಕಿ ಎಎಪಿ 52, ಬಿಜೆಪಿ 18 ಕ್ಷೇತ್ರಗಳಲ್ಲಿ ಹಾಗೂ ಕಾಂಗ್ರೆಸ್ ಖಾತೆಯನ್ನು ತೆರೆಯುವ ಲಕ್ಷಣಗಳು ಕಂಡುಬಂದಿಲ್ಲ. 2015ರ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಎಎಪಿ ಗೆದ್ದಿದ್ದ ಕ್ಷೇತ್ರಗಳಲ್ಲಿ ಇಳಿಕೆಯಾಗಿದ್ದು, ಕೇವಲ ಮೂರು ಸ್ಥಾನಕ್ಕೆ ಕುಸಿದಿದ್ದ ಬಿಜೆಪಿ ಈ ಬಾರಿ ಎರಡಂಕಿ ದಾಟುವ ಮೂಲಕ ಉತ್ತಮ ಪ್ರದರ್ಶನ ನೀಡಿದೆ.

ಚುನಾವಣೆಗೂ ಮುನ್ನವೇ ನಾಯಕರಿಲ್ಲದೆ ಸೋತು ಸೊರಗಿ ಯುದ್ದಕ್ಕೂ ಮುನ್ನವೇ ಶಸ್ತ್ರ ತ್ಯಾಗ ಮಾಡಿದ್ದ ಕಾಂಗ್ರೆಸ್‍ಗೆ 2015ರ ಫಲಿತಾಂಶವೇ ಪುನಾವರ್ತನೆಯಾಗಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ದೆಹಲಿಯ 7ಕ್ಕೂ ಏಳು ಕ್ಷೇತ್ರಗಳನ್ನು ಗೆದ್ದಿದ್ದ ಬಿಜೆಪಿ ಈ ಬಾರಿ ಶತಾಯಗತಾಯ ಗೆಲ್ಲಲು ನಡೆಸಿದ ಪ್ರಯತ್ನಗಳಿಗೆ ಮತದಾರ ಸೊಪ್ಪು ಹಾಕಿಲ್ಲ.

ಬದಲಿಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸ್ವಚ್ಛ ಆಡಳಿತ, ಅಭಿವೃದ್ಧಿ, ಮೂಲಭೂತ ಸೌಕರ್ಯಗಳಿಗೆ ಒತ್ತು, ಸರ್ಕಾರಿ ಶಾಲೆಗಳ ಸುಧಾರಣೆ, ಸಾರಿಗೆ ಮತ್ತು ಸಂಚಾರ ನಿಯಂತ್ರಣಕ್ಕೆ ಗಮನಹರಿಸಿದ್ದು, ಮಹಿಳೆಯ ಸುರಕ್ಷತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಾಡಿದ ಸುಧಾರಣೆಗಳು ಮತದಾರನ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ವಿಶೇಷವೆಂದರೆ ದೇಶಾದ್ಯಂತ ಭಾರೀ ಕೋಲಾಹಲವನ್ನೇ ಸೃಷ್ಟಿಸಿರುವ ಕೇಂದ್ರ ಸರ್ಕಾರದ ಪೌರತ್ವ

# ಆಮ್ ಆದ್ಮಿ ಮುನ್ನಡೆ : ವಿಧಾನಸಭಾ ಚುನಾವಣೆಯ ಫಲಿತಾಂಶದ ಮತ ಎಣಿಕೆ ಕಾರ್ಯ ಆರಂಭವಾಗಿದ್ದು ಮೊದಲ ಹಂತದಲ್ಲಿ ಆಪ್ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿ ಮತ್ತು ಆಪ್ ನಡುವೆ ನೇರ ಹಣಾಹಣಿಯಿದ್ದು ಕಾಂಗ್ರೆಸ್ ಈ ರೇಸ್ ನಿಂದ ಬಹುತೇಹ ಹೊರ ಉಳಿದಿದೆ. ಚುನಾವಣೋತ್ತರ ಸಮೀಕ್ಷೆ ಆಪ್ ಪರವಿದ್ದು ಆಪ್ ಸರಕಾರ ರಚಿಸುವ ಸಾಧ್ಯತೆ ಹೆಚ್ಚು. ಮೊದಲ ಹಂತದಲ್ಲಿ ಆಪ್ 52 ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ.

ಭಾರಿ ಕುತೂಹಲ ಕೆರಳಿಸಿರುವ ದೆಹಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ಬೆಳಗ್ಗೆ 8 ಗಂಟೆಗೆ ಆರಂಭವಾಗಿದೆ. ಫೆಬ್ರವರಿ 8ರಂದು ದೆಹಲಿ ವಿಧಾನಸಭೆಯ 70 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಒಟ್ಟು ಮತದಾನ ಪ್ರಮಾಣ ಶೇಕಡ 62.59 ಆಗಿತ್ತು.

ವಿಧಾನಸಭೆಯ 70 ಕ್ಷೇತ್ರಗಳ ಮತ ಎಣಕೆ 11 ಜಿಲ್ಲೆಗಳ ಒಟ್ಟು 21 ಕೇಂದ್ರಗಳಲ್ಲಿ ಬಿಗಿ ಬಂದೋಬಸ್ತ್ ನಡುವೆ ನಡೆಯುತ್ತಿದೆ. ಆರಂಭದಲ್ಲಿ ಅಂಚೆ ಮತಗಳ ಎಣಿಕೆ ನಡೆದು, ಬಳಿಕ ಇವಿಎಂ ಮತ ಎಣಿಕೆ ಶುರುವಾಗಿದೆ. ಚುನಾವಣೆ ನೇರವಾಗಿ ಆಮ್​ ಆದ್ಮಿ ಪಾರ್ಟಿ ಮತ್ತು ಬಿಜೆಪಿ ನಡುವಿನ ಹಣಾಹಣಿಯಾಗಿ ಬಿಂಬಿಸಲ್ಪಟ್ಟಿದೆ. ಕಣದಲ್ಲಿ 672 ಅಭ್ಯರ್ಥಿಗಳಿದ್ದು, ಈ ಪೈಕಿ 593 ಪುರುಷರು, 79 ಮಹಿಳೆಯರಿದ್ದಾರೆ.

ಶನಿವಾರ 13,780 ಮತಗಟ್ಟೆಗಳಲ್ಲಿ ಮತದಾನ ನಡೆದಿದ್ದು, ಶೇಕಡ 62.59 ಮತದಾನವಾಗಿತ್ತು. 2015ರಲ್ಲಿ ಶೇಕಡ 67.47 ಮತದಾನ ಪ್ರಮಾಣವಿತ್ತು. ಈ ಸಲ ಮತದಾರರ ಸಂಖ್ಯೆ 1.47ಕ್ಕೂ ಹೆಚ್ಚಿತ್ತು. ಈ ಪೈಕಿ 2.33 ಲಕ್ಷ ಮತದಾರರು 18-19ರ ವಯೋಮಾನದವರಾಗಿದ್ದರು.

ಐದು ವರ್ಷಗಳ ಹಿಂದೆ ಬರೋಬ್ಬರಿ 67 ಸೀಟುಗಳನ್ನು ಗೆದ್ದು ಅಭೂತಪೂರ್ವ ಗೆಲುವು ಸಾಧಿಸಿದ್ದ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಹುತೇಕ ಎಲ್ಲಾ ಚುನಾವಣಾ ಸಮೀಕ್ಷೆಗಳು ಹೇಳುತ್ತಿವೆ.

# ಮತ ಎಣಿಕೆ ಹಿನ್ನೆಲೆಯಲ್ಲಿ ದೆಹಲಿ ಉಪ ಮುಖ್ಯಮಂತ್ರಿ ಹಾಗೂ ಎಎಪಿ ಮುಖಂಡ ಮನೀಶ್ ಸಿಸೊಡಿಯಾ ತಮ್ಮ ಮನೆಯಲ್ಲಿಂದು ವಿಶೇಷ ಪೂಜೆ ನೆರವೇರಿಸಿದರು. ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಕಚೇರಿ ಬಳಿ ನೆರೆದಿದ್ದಾರೆ.

Facebook Comments

Sri Raghav

Admin