ಲಸಿಕೆ ಫಾರ್ಮೂಲಾ ಬೇರೆ ಸಂಸ್ಥೆಗಳಿಗೂ ಹಸ್ತಾಂತರಿಸಿ : ಕೇಜ್ರಿವಾಲ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಮೇ.11-ಕೊರೊನಾ ಲಸಿಕೆ ಉತ್ಪಾದನೆ ಹೆಚ್ಚಿಸಬೇಕಾದರೆ ಲಸಿಕೆಯ ಫಾರ್ಮೂಲಾವನ್ನು ಇತರ ಕಂಪನಿಗಳೊಂದಿಗೆ ಹಂಚಿಕೆ ಮಾಡಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ದೇಶದ್ಯಾಂತ ಈಗಾಗಲೇ ಲಸಿಕೆ ಆಭಾವ ತಲೆದೊರಿದೆ. ಇಂತಹ ಸಂದರ್ಭದಲ್ಲಿ ಸಮರೋಪಾದಿಯಲ್ಲಿ ಲಸಿಕೆ ಉತ್ಪಾದನೆ ಮಾಡುವ ಅವಶ್ಯಕತೆ ಇದೆ. ಹೀಗಾಗಿ ಕೇಂದ್ರ ಸರ್ಕಾರ ಲಸಿಕೆ ತಯಾರಿಸುವ ಹೊಣೆ ಹೊತ್ತಿರುವ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಸಂಸ್ಥೆಗಳ ಫಾರ್ಮೂಲಾವನ್ನು ಇತರ ಕಂಪನಿಗಳಿಗೂ ನೀಡುವ ಅವಶ್ಯಕತೆ ಇದೆ ಎಂದು ಅವರು ಹೇಳಿದ್ದಾರೆ.

ದೇಶದ ಇತರ ನಗರಗಳಲ್ಲೂ ಕೊರೊನಾ ಲಸಿಕೆ ಉತ್ಪಾದನಾ ಘಟಕಗಳನ್ನು ತೆರೆದು ಡೋಸ್ ತಯಾರಿಕೆಯನ್ನು ತ್ವರಿತಗೊಳಿಸಬೇಕು ಎಂದು ಕೇಜ್ರಿ ಆಗ್ರಹಿಸಿದ್ದಾರೆ. ತಮ್ಮ ಫಾರ್ಮೂಲಾ ಹಂಚಿಕೊಳ್ಳುವ ಎರಡು ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ರಾಯಲ್ಟಿ ನೀಡುವುದರಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಅವರು ಸಲಹೆ ನೀಡಿದ್ದಾರೆ.

ಕೊರೊನಾ ಸೋಂಕಿನ ಮೂರನೇ ಅಲೆ ಆರಂಭಗೊಳ್ಳುವ ಮುನ್ನ ಎಲ್ಲಾ ಭಾರತೀಯರಿಗೂ ಲಸಿಕೆ ನೀಡುವ ಅವಶ್ಯಕತೆ ಇರುವುದರಿಂದ ಕೇಂದ್ರ ಸರ್ಕಾರ ಇಂತಹ ಮಹತ್ವದ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Facebook Comments

Sri Raghav

Admin