ಮಗಳ ಮದುವೆ ಮುಂದೂಡಿ ಕೊರೋನಾದಿಂದ ಮೃತಪಟ್ಟವರ ಶವಸಂಸ್ಕಾರದಲ್ಲಿ ತೊಡಗಿದ ASI

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಮೇ.7-ಸಹಾಯ ಮಾಡುವುದು ಎಂದರೆ ಹೇಗೆ ಎಂಬುದಕ್ಕೆ ರಾಷ್ಟ್ರ ರಾಜಧಾನಿಯ ಎಎಸ್‍ಐ ಒಬ್ಬರು ಇಡಿ ದೇಶಕ್ಕೆ ಮಾದರಿಯಾಗಿದ್ದಾರೆ. ಹೌದು ದೆಹಲಿಯಲ್ಲಿ ಎಎಸ್‍ಐ ಆಗಿರುವ 56 ವರ್ಷ ವಯಸ್ಸಿನ ರಾಕೇಶ್ ಕುಮಾರ್ ಅವರು ತಮ್ಮ ಮಗಳ ಮದುವೆಯನ್ನು ಮುಂದೂಡಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಶವಸಂಸ್ಕಾರ ನೆರವೇರಿಸುವ ಮಹಾಕಾರ್ಯದಲ್ಲಿ ನಿರತರಾಗಿದ್ದಾರೆ.

ಇಂದು ಅವರ ಪುತ್ರಿಯ ವಿವಾಹ ನಡೆಯಬೇಕಿತ್ತು. ಆದರೆ, ಹೆಚ್ಚುತ್ತಿರುವ ಸೋಂಕಿನ ಹಿನ್ನಲೆಯಲ್ಲಿ ವಿವಾಹವನ್ನು ಮುಂದೂಡಿರುವ ಅವರು ಕಳೆದ 20 ದಿನಗಳಿಂದ ಶವಸಂಸ್ಕಾರ ಕಾರ್ಯ ನಡೆಸುತ್ತ ಬಂದಿದ್ದಾರೆ. ಇದುವರೆಗೂ 50 ಅನಾಥ ಶವಗಳಿಗೆ ಸಂಸ್ಕಾರ ನೆರವೇರಿಸುವ ಅವರು, 1100 ಕ್ಕೂ ಹೆಚ್ಚು ಶವಸಂಸ್ಕಾರಕ್ಕೆ ತಮ್ಮ ಕೈಲಾದ ನೆರವು ನೀಡುವ ಮೂಲಕ ಮಾನವಿಯತೆ ಮೆರೆದಿದ್ದಾರೆ.

ದೆಹಲಿಯ ಲೋಧಿ ರಸ್ತೆಯಲ್ಲಿರುವ ನಿಜಾಮುದ್ದಿನ್ ಬರಾಕ್‍ನಲ್ಲಿ ಎಎಸ್‍ಐ ಆಗಿರುವ ರಾಕೇಶ್‍ಕುಮಾರ್ ಅವರು ಕಳೆದ ಏ.13 ರಿಂದ ಇಲ್ಲಿಯವರೆಗೆ ಸ್ವತಃ 50 ಮೃತರ ಸಂಸ್ಕಾರ ನೆರವೇರಿಸಿದ್ದಾರೆ. ಜತೆಗೆ 1100 ಕ್ಕೂ ಹೆಚ್ಚು ಮಂದಿಯ ಸಂಸ್ಕಾರಕ್ಕೆ ನೆರವು ನೀಡಿದ್ದಾರೆ ಎಂದು ದೆಹಲಿ ಪೊಲೀಸ್ ಇಲಾಖೆ ಟ್ವಿಟ್ ಮಾಡಿದೆ.

ಜನಸೇವೆಯ ಜನಾರ್ಧನ ಸೇವೆ ಎನ್ನುವುದು ನನ್ನ ವಾದ. ಹೀಗಾಗಿ ಮಗಳ ಮದುವೆ ಮುಂದೂಡಿದ್ದೇನೆ. ನಾನು ಎರಡು ಡೋಸ್ ಲಸಿಕೆ ಪಡೆದು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ ಎನ್ನುತ್ತಾರೆ ರಾಕೇಶ್‍ಕುಮಾರ್. ಪೊಲೀಸಪ್ಪ ಈ ಸೇವೆ ಇದೀಗ ಎಲ್ಲೇಡೆ ಮನೆ ಮಾತಾಗಿದೆ.

Facebook Comments

Sri Raghav

Admin