ಕೋತಿಗಳಿಗೆ ಸಂತಾನಹರಣ ಮಾಡುವ ಯೋಜನೆ ಕೈಬಿಟ್ಟ ದೆಹಲಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ನ.25- ರಾಜಧಾನಿಯಲ್ಲಿ ಹೆಚ್ಚುತ್ತಿರುವ ಕೋತಿಗಳ ಸಂಖ್ಯೆ ನಿಯಂತ್ರಿಸಲು ಲ್ಯಾಪ್ರೋಸ್ಕೋಪಿಕ್ ಸ್ಟೆರಿಲೈಸೇಷನ್ ಕಾರ್ಯ ಆರಂಭಿಸಿದ ಮೂರು ವರ್ಷಗಳ ಬಳಿಕ ದೆಹಲಿ ಅರಣ್ಯ ಮತ್ತು ವನ್ಯಜೀವಿ ಇಲಾಖೆ ಈ ಯೋಜನೆಯನ್ನು ಕೈಬಿಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೋತಿಗಳಿಗೆ ಸಂತಾನಶಕ್ತಿಹರಣ ಮಾಡುವ ಇಮ್ಯೂನೋಕಾಂಟ್ರಾಸೆಪ್ಟಿವ್ ಲಸಿಕೆ ನೀಡುವ ಯೋಜನೆಯನ್ನು ಸಹ ಈಗ ಸ್ಥಗಿತಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಹೀಗಿದ್ದರೂ ಇಲಾಖೆಯ ವೈಲ್ಡ್‍ಲೈಫ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾದ ನೆರವಿನೊಂದಿಗೆ ಕೋತಿಗಳ ಗಣತಿ ನಡೆಸಲು ಪ್ರಸ್ತಾವನೆಯನ್ನು ಸಿದ್ಧಗೊಳಿಸಿದೆ ಮತ್ತು ಡೆಹ್ರಾಡೂನ್‍ನಲ್ಲಿ ಪೌರಸಂಸ್ಥೆಗಳಿಂದ ನೇಮಕಗೊಂಡ ಕೋತಿ ಹಿಡಿಯುವವರಿಗೆ ತರಬೇತಿ ನೀಡಲು ಉದ್ದೇಶಿಸಿದೆ.

ರಾಷ್ಟ್ರ ರಾಜಧಾನಿಯಲ್ಲಿ ಕೋತಿಗಳ ಉಪಟಳವನ್ನು ನಿಭಾಯಿಸಲು ದೆಹಲಿ ಹೈಕೋರ್ಟ್ ನೇಮಕ ಮಾಡಿದ್ದ ಜಾರಿ ಸಮಿತಿಯ ಸಭೆಯಲ್ಲಿ ಕಳೆದ ವಾರ ಈ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಡಬ್ಲ್ಯೂಐಐನಿಂದ ತಜ್ಞರು ಸಹ ಸಭೆಯಲ್ಲಿ ಉಪಸ್ಥಿತರಿದ್ದರು.

Facebook Comments