ದೆಹಲಿ ಉಪ ಮುಖ್ಯಮಂತ್ರಿ ಹಾಗೂ ಕೆಲವು ಶಾಸಕರಿಗೆ ಕೊರೊನಾ ಪಾಸಿಟಿವ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.15-ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಠಿಣ ಕ್ರಮಗಳ ನಡುವೆಯೂ ಡೆಡ್ಲಿ ಕೊರೊನಾ ವೈರಸ್ ಹಾವಳಿ ಮುಂದುವರಿದಿದೆ. ದೆಹಲಿ ವಿಧಾನಸಭೆಗೂ ಕೋವಿಡ್-19 ಸೋಂಕು ಆವರಿಸಿದೆ.

ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಆರ್‍ಕೆ ಪುರಂ ಶಾಸಕಿ ಪ್ರಮೀಶಾ ಟೋಕಾ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು. ಅವರು ಈಗ ಐಸೋಲೇಷನ್‍ನಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಧಾನಸಭೆ ಅವೇಶನದಲ್ಲಿ ಭಾಗವಹಿಸುವುದಕ್ಕೆ ಮುನ್ನ ಕೋವಿಡ್ ಸೋಂಕಿಗೆ ಪರೀಕ್ಷೆಗೆ ಒಳಗಾಗ ಸಿಸೋಡಿಯಾ ಮತ್ತು ಟೋಕಾ ಅವರಿಗೆ ವೈರಾಣು ತಗುಲಿರುವುದು ದೃಢಪಟ್ಟಿತು. ಅವೇಶನದಲ್ಲಿ ಭಾಗವಹಿಸಿದೇ ಅವರು ತಕ್ಷಣ ಹಿಂದಿರುಗಿ ಐಸೋಲೇಷನ್‍ನಲ್ಲಿ ಇದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ದೆಹಲಿ ಉಪ ಮುಖ್ಯಮಂತ್ರಿ ನನಗೆ ಅಲ್ಪ ಪ್ರಮಾಣದ ಜ್ವರ ಇತ್ತು. ನಾನು ತಪಾಸಣೆಗೆ ಒಳಪಟ್ಟಾಗ ನನಗೆ ಕೋವಿಡ್-19 ವೈರಾಣು ಸೋಂಕು ಇರುವುದು ದೃಢಪಟ್ಟಿತು ನಾನೀಗ ಐಸೋಲೇಷನ್‍ನಲ್ಲಿದ್ದು ವೈದ್ಯರ ಸಲಹೆ ಮೇರಗೆ ಚೀಕಿತ್ಸೆ ಪಡೆದಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.

Facebook Comments

Sri Raghav

Admin