‘ಅಗತ್ಯಕ್ಕಿಂತಲೂ 4 ಪಟ್ಟು ಹೆಚ್ಚು ಆಮ್ಲಜನಕಕ್ಕೆ ಬೇಡಿಕೆಯಿಟ್ಟಿತ್ತು ದೆಹಲಿ ಸರ್ಕಾರ’

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜೂ.25- ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸರ್ಕಾರ ಕೋವಿಡ್ ಎರಡನೆ ಅಲೆಯಲ್ಲಿ ಅಗತ್ಯಕ್ಕಿಂತಲೂ ನಾಲ್ಕು ಪಟ್ಟು ಹೆಚ್ಚು ಆಮ್ಲಜನಕಕ್ಕೆ ಬೇಡಿಕೆಯಿಟ್ಟಿತ್ತು ಎಂದು ಸುಪ್ರೀಂಕೋರ್ಟ್ ಗೆ ತಜ್ಞ ಸಮಿತಿ ವರದಿ ನೀಡಿದೆ. ಕೋವಿಡ್ ಸಂಕಷ್ಟ ಕಾಲದಲ್ಲಿ ಆಮ್ಲಜನಕದ ಬೇಡಿಕೆ ಹೆಚ್ಚಾಗಿತ್ತು. ಅದರಲ್ಲೂ ದೆಹಲಿ, ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಿಗೆ ಅಗತ್ಯದಷ್ಟು ಆಮ್ಲಜನಕ ಪೂರೈಕೆ ಮಾಡುವಂತೆ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಗಳು ಆದೇಶ ನೀಡಿದ್ದವು.

ಕೋವಿಡ್ ಎರಡನೆ ಅಲೆಯ ಬಳಿಕ ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿ ಚಂದ್ರಚೂಡ್ ಮತ್ತು ಎಂ.ಆರ್.ಶಾ ಅವರ ಪೀಠ, ಆಮ್ಲಜನಕದ ಆಡಿಟ್ ಮಾಡಲು 12 ಜನ ತಜ್ಞರ ಕಾರ್ಯಪಡೆಯೊಂದನ್ನು ರಚಿಸಿತ್ತು.

ಕಾರ್ಯಪಡೆ ಪರಿಶೀಲನೆ ನಡೆಸಿ ಸುಪ್ರೀಂಕೋರ್ಟ್ ಗೆ ಮಧ್ಯಂತ ವರದಿ ಸಲ್ಲಿಸಿದೆ. ದೆಹಲಿ ಸರ್ಕಾರದ ಅತಿರೇಕದ ಬೇಡಿಕೆಯಿಂದಾಗಿ ಇತರ ಹನ್ನೆರಡು ರಾಜ್ಯಗಳುಆಮ್ಲಜನಕದ ಕೊರತೆ ಅನಭವಿಸುವಂತಾಯಿತು ಎಂದು ವಿವರಿಸಿದೆ. ಎರಡನೇ ಅಲೆ ತೀವ್ರವಾಗಿದ್ದ ಸಂದರ್ಭ ಮೇ 13ರಂದು ಬಹಳಷ್ಟು ಆಸ್ಪತ್ರೆಗಳ ಆಕ್ಸಿಜನ್ ಟ್ಯಾಂಕರ್ ಗಳು ತುಂಬಿರುವುದನ್ನು ಕಾರ್ಯಪಡೆ ಗುರುತಿಸಿದೆ. ಸರ್ಕಾರದ ಆಸ್ಪತ್ರೆಗಳಾದ ಎಲ್ ಎನ್ ಜೆಪಿ, ಏಮ್ಸ್ ಸೇರಿ ಬಹುತೇಕ ಆಸ್ಪತ್ರೆಗಳಲ್ಲಿ ಶೇ.75ರಷ್ಟು ಆಮ್ಲಜನಕ ಭರ್ತಿ ಇತ್ತು ಎಂದು ಸ್ಪಷ್ಟವಾಗಿದೆ.

ಏಪ್ರಿಲ್ 29ರಿಂದ ಮೇ 10ರ ನಡುವೆ ದೆಹಲಿ ಸರ್ಕಾರ 1140 ಮೆಟ್ರಿಕ್ ಟನ್ ಆಮ್ಲಜನಕಕ್ಕೆ ಬೇಡಿಕೆ ಸಲ್ಲಿಸಿತ್ತು, ಅಂಕಿ ಅಂಶಗಳನ್ನು ಪರಿಶೀಲಿಸಿ ವಾಸ್ತವತೆ ಆಧಾರದಲ್ಲಿ ಅಂದಾಜು ಮಾಡಿದಾಗ 209 ಮೆಟ್ರಿಕ್ ಟನ್ ಆಮ್ಲಜನಕ ಸಾಕು ಎಂಬ ಅಂಶ ಸ್ಪಷ್ಟವಾಯಿತು ಎಂದು ಸಮಿತಿ ಪತ್ತೆ ಹಚ್ಚಿದೆ.

ಮುಂದುವರೆ ಶಿಫಾರಸ್ಸು ಮಾಡಿರುವ ಸಮಿತಿ ಕೋವಿಡ್ ಸೇರಿದಂತೆ ಇನ್ನಿತರ ಆರೋಗ್ಯದ ಸವಾಲನ್ನು ಎದುರಿಸಲು ಸ್ಥಳೀಯವಾಗಿ ಮತ್ತು ನೆರೆ ಹೊರೆಯಲ್ಲಿ ಆಮ್ಲಜನಕ ಉತ್ಪಾದನೆಯನ್ನು ಆರಂಭಿಸಲು ಸಲಹೆ ಮಾಡಿದೆ. ದೇಶದ 18 ಮೆಟ್ರೋ ನಗರಗಳಲ್ಲಿ ಶೇ.50ರಷ್ಟು ಆಮ್ಲಜನಕವನ್ನು ಸ್ಥಳೀಯವಾಗಿ ಉತ್ಪಾದಿಸುವ ವ್ಯವಸ್ಥೆಯಾಗಬೇಕು. ಅದರಲ್ಲಿ ದೆಹಲಿ, ಮುಂಬೈನಂತಹ ನಗರಗಳಲ್ಲಿ ಕನಿಷ್ಠ 100 ಮೆಟ್ರಿಕ್ ಟನ್ ಆಮ್ಲಜಕ ಉತ್ಪಾದನೆಗೆ ಆದ್ಯತೆ ನೀಡಬೇಕು ಎಂದು ಶಿಪಾರಸ್ಸು ಮಾಡಲಾಗಿದೆ.

Facebook Comments