ದೇಶದಲ್ಲೇ ಅತ್ಯಂತ ಕಲುಷಿತ ನಗರ ಯಾವುದು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಮಾ.7-ದೇಶದಲ್ಲೇ ಅತ್ಯಂತ ಕಲುಷಿತ ನಗರವೆಂಬ ಅಪಖ್ಯಾತಿಗೆ ರಾಷ್ಟ್ರ ರಾಜಧಾನಿ ಒಳಗಾಗಿದೆ. ಅತ್ಯಂತ ವಿಷಕಾರಿ ಹಾಗೂ ಅಪಾಯಕಾರಿ ವಸ್ತುಗಳನ್ನು ಹೊಂದಿರುವ ಕಲುಷಿತ ನಗರಗಳಲ್ಲಿ ದೆಹಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ದೇಶದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 112 ಪ್ರದೇಶಗಳನ್ನು ಅತ್ಯಂತ ಕಲುಷಿತ ಪ್ರದೇಶಗಳೆಂದು ಗುರುತಿಸಲಾಗಿದೆ.

23 ಕಲುಷಿತ ಪ್ರದೇಶಗಳನ್ನು ಹೊಂದಿರುವ ಓಡಿಸ್ಸಾ ಮೊದಲನೆ ಸ್ಥಾನದಲ್ಲಿದ್ದರೆ, 21 ಕಲುಷಿತ ಪ್ರದೇಶ ಹೊಂದಿರುವ ಉತ್ತರ ಪ್ರದೇಶ ಎರಡನೆ ಸ್ಥಾನದಲ್ಲಿದ್ದರೆ 11 ಕಲುಷಿತ ಪ್ರದೇಶಗಳಿರುವ ದೆಹಲಿ ಮೂರನೆ ಸ್ಥಾನದಲ್ಲಿದೆ.

ರಾಷ್ಟ್ರ ರಾಜಧಾನಿಯ ಭಾಲ್ಸಾವಾ, ಘಾಜಿಪುರ್ ಲ್ಯಾಂಡ್‍ಪಿಲ್‍ಪ್ರದೇಶ, ಝಿಲ್‍ಮಿಲ್ ಕೈಗಾರಿಕಾ ಪ್ರದೇಶ, ವಾಜೀರ್‍ಪುರ್, ನ್ಯೂಫ್ರೆಂಡ್ಸ್ ಕಾಲನಿ, ದಿಲಷದ್ ಗಾರ್ಡನ್, ಲಾರೇನ್ಸ್ ರೋಡ್ ಸೇರಿದಂತೆ 11ಕ್ಕೂ ಹೆಚ್ಚು ಪ್ರದೇಶಗಳಲ್ಲಿ ವಿಷಕಾರಿ ಮತ್ತು ಅಪಾಯಕಾರಿ ವಸ್ತುಗಳು ಹೆಚ್ಚಾಗಿದ್ದು ಇಂತಹ ಪ್ರದೇಶಗಳಲ್ಲಿ ಜನ ವಾಸಿಸಲು ಯೋಗ್ಯವಿಲ್ಲ ಎಂದು ವರದಿಯಾಗಿದೆ.

ಕಲುಷಿತ ಪ್ರದೇಶಗಳಲ್ಲಿ ಭೂಮಿ, ಕುಡಿಯುವ ನೀರು, ಗಾಳಿ ಮಲಿನವಾಗಿದೆ. ಇಂತಹ ಪರಿಸ್ಥಿತಿಯನ್ನು ಸರಿಗೊಳಿಸದಿದ್ದರೆ ಭವಿಷ್ಯದಲ್ಲಿ ಭಾರಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕೇಂದ್ರ ಪರಿಸರ ಸಚಿವಾಲಯ ಎಚ್ಚರಿಕೆ ನೀಡಿದೆ.

ಕಲುಷಿತ ಪ್ರದೇಶಗಳನ್ನು ಸ್ವಚ್ಚಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳುವಂತೆ ರಾಷ್ಟ್ರಿಯ ಹಸಿರು ನ್ಯಾಯಾಲಯ ಸೂಚನೆ ನೀಡಿದ್ದು ಕೆಲವು ರಾಜ್ಯಗಳಲ್ಲಿ ಶುಚಿ ಕಾರ್ಯ ಆರಂಭಗೊಂಡಿದೆ.

Facebook Comments

Sri Raghav

Admin