ಬೈಕ್ ಸ್ಟಂಟ್ ಮಾಡಬೇಡಿ ಎಂದ ವ್ಯಕ್ತಿಯನ್ನು ನಡುಬೀದಿಯಲ್ಲಿ ಹತ್ಯೆ ಮಾಡಿದ ಬಾಲಕರು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜು.14- ಬೈಕ್ ಸ್ಟಂಟ್ ಮಾಡಲು ಆಕ್ಷೇಪ ವ್ಯಕ್ತಪಡಿಸಿದ ವ್ಯಕ್ತಿಯನ್ನು ಮೂವರು ಅಪ್ರಾಪ್ತ ಬಾಲಕರು ನಡುಬೀದಿಯಲ್ಲಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿಯ ರಘುಬೀರ್ ನಗರದಲ್ಲಿ ನಡೆದಿದೆ.

ಮೃತ ಯುವಕನನ್ನು ಮನೀಶ್(25) ಎಂದು ಗುರುತಿಸಲಾಗಿದ್ದು ಈತ ಖಾಸಗಿ ಕಾರು ಚಾಲಕನಾಗಿದ್ದ. ಈತನನ್ನು ಕೊಂದ ಮೂವರು ಹುಡುಗರು 16-17 ವರ್ಷದವರಾಗಿದ್ದು ರಿಮಾಂಡ್ ಹೋಮ್‍ಗೆ ಕಳುಹಿಸಲಾಗಿದೆ.

ಮೊನ್ನೆ ಜುಲೈ 8ರಂದು ಈ ಘಟನೆ ನಡೆದಿದ್ದು, ಮೂವರೂ ಮನೀಶ್ ನನ್ನು ಮನಸೋ ಇಚ್ಛೆ ರಘುವಿರ್ ನಗರದ ರಸ್ತೆಯಲ್ಲಿ ಥಳಿಸುವುದು ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ.ಬಾಲಾಪರಾಧಿಗಳ ವಿರುದ್ಧ ಕೊಲೆ ಕೇಸು ದಾಖಲಿಸಲಾಗಿದೆ ಎಂದು ಕ್ಯಾಲ ಪೊಲೀಸ್ ಠಾಣೆಯ ಉಪ ಆಯುಕ್ತ ದೀಪಕ್ ಪುರೋಹಿತ್ ತಿಳಿಸಿದ್ದಾರೆ.

ಮನೀಶ್ ವಾಸವಿದ್ದ ಏರಿಯಾದಲ್ಲಿ ದಿನ ಮೂವರು ಅಪ್ರಾಪ್ತ ಬಾಲಕರು ಬೈಕ್ ರೈಸ್ ಮಾಡುವುದು ಮತ್ತು ಜನರು ಓಡಾಡುವ ರಸ್ತೆಯಲ್ಲಿ ಬೈಕ್ ಸ್ಟಂಟ್ ಮಾಡುತ್ತಿದ್ದರು. ಇದರಿಂದ ಕಿರಿಕಿರಿಗೊಂಡು ಮನೀಶ್ ಇಲ್ಲಿ ಬೈಕ್ ರೇಸ್ ಮಾಡಬೇಡಿ ಎಂದು ಆಕ್ಷೇಪ ವ್ಯಕ್ತಪಡಿಸಿದ್ದ.

ಸ್ಥಳೀಯರು ನೀಡಿದ ಮಾಹಿತಿ ಮತ್ತು ಸಿಸಿಟಿವಿ ದೃಶ್ಯಾವಳಿ ಮೇರೆಗೆ ಮೂವರು ಬಾಲಾಪರಾಧಿಗಳನ್ನು ಬಂಧಿಸಲಾಗಿದ್ದು ಕೃತ್ಯಕ್ಕೆ ಬಳಸಿದ್ದ ಸಾಧನಗಳನ್ನು ಪೆಪೊಲೀಸರು ವಶಪಡಿಸಿಕೊಂಡಿದ್ದಾರೆ.

ಚಾಕುವಿನಿಂದ 28 ಬಾರಿ ಇರಿದು ಮನೀಶ್ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದೊಂದು ಆಘಾತಕಾರಿ ಸಂಗತಿ. ಮನೀಶ್ ಕೊಲೆಯಾಗುವ ವೇಳೆ ರಸ್ತೆಯಲ್ಲಿ ನೂರಾರು ಜನರು ಓಡಾಡುತ್ತಿದ್ದರು.

ಆದರೆ ಯಾರೂ ಕೂಡ ಮನೀಶ್ ಸಹಾಯಕ್ಕೆ ಬಂದಿಲ್ಲ. ವಾಹನ ಸವಾರರು, ದಾರಿಹೋಕರು ಎಲ್ಲರೂ ಮನೀಶ್ ಸಾಯುವುದನ್ನು ನೋಡುತ್ತಾ ಮುಂದೆ ಹೋಗಿದ್ದಾರೆ.

ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಸ್ಥಳೀಯ ಪೊಲೀಸರು, ಮನೀಶ್‍ನನ್ನು ಆಸ್ಪತ್ರೆಗೆ ತೆಗೆದುಕೊಂಡು ಬರಲಾಗಿದೆ. ಆದರೆ ಆತ ಆಸ್ಪತ್ರೆಗೆ ತರುವ ಮುನ್ನವೇ ಮೃತಪಟ್ಟಿದ್ದ ಎಂದು ಹೇಳಿದ್ದಾರೆ.

Facebook Comments

Sri Raghav

Admin