169 ದಿನಗಳ ನಂತರ ದೆಹಲಿ ಮೆಟ್ರೋ ಪುನರಾರಂಭ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.7-ಡೆಡ್ಲಿ ಕೊರೊನಾ ವೈರಸ್ ಹಾವಳಿಯಿಂದ ರಾಜಧಾನಿ ದೆಹಲಿಯಲ್ಲಿ ಸ್ಥಗಿತಗೊಂಡಿದ್ದ ಮೆಟ್ರೋ ರೈಲು ಸಂಚಾರ 169 ದಿನಗಳ ನಂತರ ಪುನಾರಂಭಗೊಂಡಿದೆ. ನಿಲ್ದಾಣಗಳು ಮತ್ತು ಮೆಟ್ರೋ ರೈಲುಗಳಲ್ಲಿ ಕಡ್ಡಾಯ ಸಾಮಾಜಿಕ ಅಂತರ, ಸ್ಕ್ರೀನಿಂಗ್, ಮಾಸ್ಕ್ ಬಳಕೆ, ಸೀಮಿತ ಸಂಖ್ಯೆ ಪ್ರಯಾಣಿಕರಿಗೆ ಅವಕಾಶ ಸೇರಿದಂತೆ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದೆ.

ಇಂದು ಬೆಳಗ್ಗೆಯಿಂದಲೇ ದೆಹಲಿಯಲ್ಲಿ ಮೆಟ್ರೋ ರೈಲು ಸಂಚಾರ ಮರು ಆರಂಭಗೊಂಡಿದ್ದು ಪ್ರಯಾಣಿಕರು ಸಂತಸಗೊಂಡಿದ್ದಾರೆ. ಆದರೆ ಮೆಟ್ರೋ ನಿಲ್ದಾಣಗಳಲ್ಲಿ ಆಗಮನ ಮತ್ತು ನಿರ್ಗಮನದ ಪ್ರಮುಖ ದ್ವಾರಗಳನ್ನು ಬಂದ್ ಮಾಡಿರುವುದರಿಂದ ಪ್ರಯಾಣಿಕರಿಗೆ ವಿಳಂಬ ಮತ್ತು ಅನಾನೂಕೂಲವಾಗುತ್ತಿದೆ. ಈ ಬಗ್ಗೆ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Facebook Comments