ಶಸ್ತ್ರಾಸ್ತ್ರ ಸಹಿತ ಪ್ರಯಾಣ ಮಾಡಿದರೆ ವಿರುದ್ಧ ಕಠಿಣ : ದೆಹಲಿ ಪೊಲೀಸರ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಫೆ.7- ಮದ್ದು -ಗುಂಡು ಹಾಗೂ ಶಸ್ತ್ರಾಸ್ತ್ರಗಳ ಜತೆ ಪ್ರಯಾಣ ಮಾಡುವ ಪ್ರಯಾಣಿಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ದೆಹಲಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ನಿನ್ನೆ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-3ರ ತಪಾಸಣೆ ನಡೆಸಿದಾಗ 32 ಬೋರ್ ಬಂದೂಕಿಗೆ ಬಳಸುವ ಜೀವಂತ ಗುಂಡುಗಳ 11 ಕಾರ್ಟಿಡ್ಜ್‍ಗಳು ಪತ್ತೆಯಾಗಿದ್ದವು.

ಹೀಗಾಗಿ ಎಚ್ಚೆತ್ತುಕೊಂಡ ದೆಹಲಿ ಪೊಲೀಸರು ಸದರಿ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿದಾಗ ಆತ ಮಾಲ್ಡೀವ್ಸ್‍ಗೆ ಪ್ರಯಾಣ ಮಾಡುತ್ತಿದ್ದು , ಪರವಾನಗಿ ಪಡೆದ ಬಂದೂಕು ಹೊಂದಿರುವುದಾಗಿ ತಿಳಿಸಿದ್ದಾರೆ.
ಕೂಡಲೇ ಬಂದೂಕು ಮತ್ತು ಕಾರ್ಟಿಡ್ಜ್ ಅನ್ನು ಜಪ್ತಿ ಮಾಡಿದ್ದಾರೆ. ಸಂಬಂಧಪಟ್ಟ ದಾಖಲಾತಿಗಳನ್ನು ಹಾಜರುಪಡಿಸುವಂತೆ ಸೂಚನೆ ನೀಡಿದ್ದಾರೆ.

ಇದರ ಬೆನ್ನಲ್ಲೇ ಕಠಿಣ ಎಚ್ಚರಿಕೆಯನ್ನು ರವಾನಿಸಿ ರುವ ದೆಹಲಿ ಪೆÇಲೀಸರು ಇನ್ನು ಮುಂದೆ ವಿಮಾನ ಪ್ರಯಾ ಣದ ವೇಳೆ ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡುಗಳನ್ನು ತೆಗೆದುಕೊಂಡು ಹೋಗುವವರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಅಡಿ ಪ್ರಕರಣ ದಾಖಲಿಸುವುದಾಗಿ ದೆಹಲಿ ಹೆಚ್ಚುವರಿ ಪೊಲೀಸ್ ಆಯುಕ್ತ ರಾಜೀವ್ ರಂಜನ್ ಸೂಚನೆ ನೀಡಿದ್ದಾರೆ.

ವಿಮಾನ ನಿಲ್ದಾಣಗಳಿಗೆ ಶಸ್ತ್ರಾಸ್ತ್ರ ತರುವುದು ಜಾಮೀನು ರಹಿತ ಅಪರಾಧವಾಗಿದೆ. ಇತ್ತೀಚಿನ ದಿನಗಳಲ್ಲಿ ಈ ಪ್ರಕರಣಗಳು ಹೆಚ್ಚಾಗಿದ್ದು, ಕೆಲವು ದಿನಗಳ ಹಿಂದೆಯಷ್ಟೇ ಮಹಿಳೆಯೊಬ್ಬರು ಅನಕೃತವಾಗಿ ಪಿಸ್ತೂಲನ್ನು ತಮ್ಮೊಂದಿಗೆ ತಂದಿದ್ದರು. ಕಳೆದ ವರ್ಷ ವಿಮಾನ ನಿಲ್ದಾಣಗಳಲ್ಲಿ ಈ ರೀತಿಯ 66 ಪ್ರಕರಣಗಳು ಪತ್ತೆಯಾಗಿದ್ದು, ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Facebook Comments

Sri Raghav

Admin