ದೆಹಲಿಯಲ್ಲಿ ವೃದ್ಧ ದಂಪತಿ, ನರ್ಸ್ ಮುರ್ದಾರ್ ಕೇಸ್ : ಮಹಿಳೆ, ಪ್ರಿಯಕರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜೂ.26- ರಾಜಧಾನಿ ದೆಹಲಿಯ ಜನತೆಯನ್ನು ಬೆಚ್ಚಿಬೀಳಿಸಿದ್ದ ತ್ರಿವಳಿ ಕೊಲೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ.  ವಾಯುವ್ಯ ದೆಹಲಿಯಲ್ಲಿ ಕಳೆದ ವಾರ ವಿಷ್ಣು ಮಾಥುರ್(78) ಮತ್ತು ಅವರ ಪತ್ನಿ ಶಶಿ ಮಾಥುರ್(75) ಹಾಗೂ ವೃದ್ಧ ದಂಪತಿಗಳನ್ನು ನೋಡಿಕೊಳ್ಳುತ್ತಿದ್ದ ನರ್ಸ್ ಖುಷ್ಬು(24) ಈ ಮೂವರ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಲಾಗಿತ್ತು.

ಈ ಗಂಭೀರ ಪ್ರಕರಣದ ತನಿಖೆ ತೀವ್ರಗೊಳಿಸಿದ ದೆಹಲಿ ಪೊಲೀಸ್ ವಿಶೇಷ ದಳ ಪ್ರೀತಿ ಶರಾವತ್(42) ಮತ್ತು ಆಕೆಯ ಪ್ರಿಯಕರ ಮನೋಜ್‍ಭಟ್(30) ಎಂಬುವರನ್ನು ಬಂಧಿಸಿದ್ದಾರೆ.  ಇವರು ಮಾಥುರ್ ದಂಪತಿಗಳಿಗೆ ಮತ್ತು ನರ್ಸ್ ಖುಷ್ಬುಗೆ ಚಿರಪರಿಚಿತರು.

ಆಗಾಗ ಮನೆಗೆ ಬಂದುಹೋಗುತ್ತಿದ್ದ ಇವರು ವೃದ್ದ ದಂಪತಿಗಳನ್ನು ಕೊಂದು ಅವರ ಬಳಿ ಇದ್ದ ಹಣ ಆಭರಣಗಳನ್ನು ದರೋಡೆ ಮಾಡುವ ಉದ್ದೇಶ ಹೊಂದಿದ್ದರು. ಇದಕ್ಕಾಗಿಯೇ ಈ ಕೃತ್ಯ ಎಸಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಹಿಂದೆ ಖುಷ್ಬು ಸಂಬಂಧಿಕರೇ ಈ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿತ್ತು. ಪ್ರಕರಣದ ವಿಚಾರಣೆಯನ್ನು ತೀವ್ರಗೊಳಿಸಿದ ಪೊಲೀಸರು ಮತ್ತಷ್ಟು ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ