ಮಹಾರಾಷ್ಟ್ರ, ದೆಹಲಿಯಲ್ಲಿ ಕೊರೊನಾ ಆರ್ಭಟ ಅತಿ ಭಯಂಕರ..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ/ನವದೆಹಲಿ, ಜೂ.10- ದೇಶದಲ್ಲೇ ಅತ್ಯಧಿಕ ಕೊರೊನಾ ಸೋಂಕು ಮತ್ತು ಸಾವು ಪ್ರಕರಣಗಳು ದಾಖಲಾಗಿರುವ ಮಹಾರಾಷ್ಟ್ರದಲ್ಲಿ ದಿನೇ ದಿನೇ ಆತಂಕಕಾರಿ ಮಟ್ಟದಲ್ಲಿ ಸಾಂಕ್ರಾಮಿಕ ರೋಗ ಮತ್ತು ಮರಣಗಳು ಉಲ್ಬಣಗೊಳ್ಳುತ್ತಿದೆ.

ಇದೇ ವೇಳೆ ದೇಶದರಾಜಧಾನಿ ನವದೆಹಲಿಯಲ್ಲಿಯೂ ಪರಿಸ್ಥಿತಿ ಶೋಚನೀಯವಾಗಿದೆ. ಸೋಂಕು ಪ್ರಕರಣದಲ್ಲಿ ಈಗಾಗಲೇ ಕೊರೊನಾ ಉಗಮ ದೇಶಚೀನಾವನ್ನು ಮಹಾರಾಷ್ಟ್ರ ಹಿಂದಿಕ್ಕಿದೆ. ರಾಜ್ಯದಲ್ಲಿಇಂದು ಬೆಳಗಿನ ವರದಿ ಪ್ರಕಾರ 89,500ಕ್ಕೂ ಅಧಿಕ ಮಂದಿ ರೋಗ ಪೀಡಿತರಾಗಿದ್ದಾರೆ.

ಚೀನಾದಲ್ಲಿಈವರೆಗೆದಾಖಲಾಗಿರುವ ಸೋಂಕು ಪ್ರಮಾಣ 83,040. ಭಾರತದ ರಾಜ್ಯವೊಂದು ಇಡೀ ಚೀನಾದ ಪಾಸಿಟಿವ್ ಪ್ರಕರಣವನ್ನು ಹಿಂದಿಕ್ಕಿರುವುದು ಆತಂಕದ ಸಂಗತಿಯಾಗಿದೆ.

ಅಲ್ಲದೇ ಪರಿಸ್ಥಿತಿ ಇದೇರೀತಿ ಮುಂದುವರಿಸಿದರೆ ಸಾವಿನ ಸಂಖ್ಯೆಯಲ್ಲಿಯೂ ಮಹಾರಾಷ್ಟ್ರ ಚೀನಾವನ್ನು ಹಿಂದಿಕ್ಕಲ್ಲಿದೆ. ಚೀನಾದಲ್ಲಿ ಈವರೆಗೆ 4,634 ರೋಗಿಗಳು ಮೃತಪಟ್ಟಿದ್ದು, ಮಹಾರಾಷ್ಟ್ರದಲ್ಲಿ ಸಾವಿನ ಸಂಖ್ಯೆ 3,289ಕ್ಕೇರಿದೆ. ಮಹಾರಾಷ್ಟ್ರದಲ್ಲಿ ಪ್ರತಿದಿನ ಸರಾಸರಿ 100 ಮಂದಿಯನ್ನುಕೊರೊನಾ ಬಲಿ ತೆಗೆದುಕೊಳ್ಳುತ್ತಿದ್ದು, ಇನ್ನು 14 ದಿನಗಳಲ್ಲಿ ಚೀನಾವನ್ನು ಮೀರಿಸಲಿದೆಎಂದುಆರೋಗ್ಯತಜ್ಞರುಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕೆಲವೇ ವಿನಗಳಲ್ಲಿ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 1 ಲಕ್ಷ ಮೀರುವ ಅಪಾಯವೂ ಇದೆ.

# ಮಹಾರಾಷ್ಟ್ರ ನಂ.1 :

ಈವರೆಗೆ ಸಂಭವಿಸಿರುವ 7,745 ಸಾವು ಪ್ರಕರಣಗಳಲ್ಲಿ, ಮಹಾರಾಷ್ಟ್ರ ಎಂದಿನಂತೆ ಪ್ರಥಮ ಸ್ಥಾನದಲ್ಲಿಯೇ ಮುಂದುವರಿದಿದ್ದು, ಅಲ್ಲಿಈವರೆಗೆ3,289ಮಂದಿ ಸಾವಿಗೀಡಾಗಿದ್ದಾರೆಎಂದುಕೇಂದ್ರಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಮಹಾರಾಷ್ಟ್ರದಂತೆ ರಾಜಧಾನಿ ದೆಹಲಿಯಲ್ಲಿಯೂ ಸೋಂಕು ಮತ್ತು ಸಾವಿನ ಸಂಖ್ಯೆ ಗಮನಾರ್ಹವಾಗಿ ಏರುತ್ತಲೇ ಇದೆ. ಜುಲೈನಲ್ಲಿ ದೆಹಲಿಯಲ್ಲಿ 5.5 ಲಕ್ಷ ಸೋಂಕು ಪ್ರಕರಣಗಳು ಹೆಚ್ಚಾಗಿಲಿವೆ ಎಂದು ಸರ್ಕಾರವೇ ಹೇಳಿರುವುದು ಪರಿಸ್ಥಿತಿಯ ವಾಸ್ತವತೆಗೆ ಸಾಕ್ಷಿಯಾಗಿದೆ.

ಸಾವು ಪ್ರಕರಣದಲ್ಲಿ ಎರಡನೇ ಸ್ಥಾನದಲ್ಲಿರುವ ಗುಜರಾತ್‍ನಲ್ಲಿ 1,313 ಸಾವುಗಳು ಸಂಭವಿಸಿವೆ. ನಂತರದ ಸ್ಥಾನಗಳಲ್ಲಿ ದೆಹಲಿ (905), ಮಧ್ಯಪ್ರದೇಶ (420), ಪಶ್ಚಿಮ ಬಂಗಾಳ (475), ತಮಿಳುನಾಡು (307), ಉತ್ತರಪ್ರದೇಶ (302), ರಾಜಸ್ಥಾನ (255), ತೆಲಂಗಾಣ (148), ಆಂಧ್ರಪ್ರದೇಶ (77), ಕರ್ನಾಟಕ(66), ಹಾಗೂ ಪಂಜಬ್ (51) ರಾಜ್ಯಗಳಿವೆ.

ಜಮ್ಮು-ಕಾಶ್ಮೀರ 48, ಹರಿಯಾಣ 45, ಬಿಹಾರ 32, ಹರಿಯಾಣ 28, ಕೇರಳ 16, ಉತ್ತರಾಖಂಡ 13, ಒಡಿಶಾ 9, ಜÁರ್ಖಂಡ್ 8, ಹಿಮಾಚಲ ಪ್ರದೇಶ ಮತ್ತುಚಂಡೀಗಢತಲಾ 5, ಅಸ್ಸಾಂ ಮತ್ತುಛತ್ತೀಸ್‍ಗಢತಲಾ 4 ಹಾಗೂ ತ್ರಿಪುರ, ಪುದುಚೇರಿ, ಲಡಾಕ್ ಮತ್ತು ಮೇಘಾಲಯ ರಾಜ್ಯಗಳಲ್ಲಿ ತಲಾಒಂದೊಂದು ಸಾವುಗಳು ವರದಿಯಾಗಿವೆ.

Facebook Comments