ಡೆಲ್ಟಾ+ ವೈರಸ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ : ರಾಹುಲ್‍ಗಾಂಧಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜೂ.25-ದೇಶದಲ್ಲಿ ಡೆಲ್ಟಾ ಪ್ಲಸ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದರೂ ಕೇಂದ್ರ ಸರ್ಕಾರ ಯಾಕೆ ಮಾಸ್ ಟೆಸ್ಟ್ ಮಾಡಲು ಹಾಗೂ ಸೋಂಕು ನಿಯಂತ್ರಿಸಲು ಮುಂದಾಗುತ್ತಿಲ್ಲ ಎಂದು ರಾಹುಲ್‍ಗಾಂಧಿ ಪ್ರಶ್ನಿಸಿದ್ದಾರೆ. ತಜ್ಞರು ಡೆಲ್ಟಾ ಪ್ಲಸ್ ಅತ್ಯಂತ ವೇಗವಾಗಿ ಹರಡುವ ಸಾಮಥ್ರ್ಯ ಹೊಂದಿದೆ.

ಈ ಸೋಂಕಿನಿಂದಲೇ ದೇಶದಲ್ಲಿ ಮೂರನೆ ಅಲೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದರೂ ಕೇಂದ್ರ ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ. ಡೆಲ್ಟಾ ಪ್ಲಸ್ ಸೋಂಕು ಪತ್ತೆಗೆ ಕ್ರಮ ಏಕೆ ಕೈಗೊಂಡಿಲ್ಲ. ಈಗ ಪಡೆದಿರುವ ಲಸಿಕೆ ಡೆಲ್ಟಾ ಪ್ಲಸ್‍ಗೆ ಪರಿಣಾಮಕಾರಿಯೇ ಎಂಬ ಬಗ್ಗೆ ಯಾವಾಗ ಮಾಹಿತಿ ನೀಡುತ್ತಿರಾ ಎಂದು ಅವರು ಟ್ವಿಟ್ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಈಗಾಗಲೇ ಎರಡನೆ ಅಲೆಯಲ್ಲಿ ದೇಶದಲ್ಲಿ ಅಪಾರ ಸಾವು-ನೋವು ಸಂಭವಿಸಿದೆ. ಈ ಮಧ್ಯೆ ಎರಡನೆ ಅಲೆ ಕಡಿಮೆಯಾಗುತ್ತಿದೆ. ಇದೀಗ ಮೂರನೆ ಅಲೆ ಹಾಗೂ ಡೆಲ್ಟಾ ಪ್ಲಸ್ ಸೋಂಕಿನ ಬಗ್ಗೆ ಜಾಗೃತಿ ವಹಿಸಬೇಕಾದ ಸಂದರ್ಭದಲ್ಲೇ ರಾಹುಲ್ ಟ್ವಿಟ್ ಮೂಲಕ ಕೇಂದ್ರ ಸರ್ಕಾರವನ್ನು ಎಚ್ಚರಿಸಿದ್ದಾರೆ.

Facebook Comments