ಡೆಲ್ಟಾ ಪ್ಲಸ್ ಕೊರೊನಾ ವೈರಸ್ ಕುರಿತ ಮಹತ್ವದ ಮಾಹಿತಿ ಬಿಚ್ಚಿಟ್ಟ ತಜ್ಞರು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜೂ.22- ಮಹಾರಾಷ್ಟ್ರದಲ್ಲಿ ಕಾಣಿಸಿ ಕೊಂಡಿರುವ ರೂಪಾಂತರಿ ಡೆಲ್ಟಾ ಪ್ಲಸ್ ಕೊರೊನಾ ವೈರಸ್ ಲಸಿಕೆ ಹಾಗೂ ಪ್ರತಿಕಾಯ ಶಕ್ತಿಯನ್ನು ಮೀರುವ ಸಾಮರ್ಥ್ಯ ಹೊಂದಿದೆ. ಆದರೆ ಅದು ಅಷ್ಟೇನು ಅಪಾಯಕಾರಿ ಎನಿಸುತ್ತಿಲ್ಲ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಐ ಎನ್ ಎಸ್ ಎ ಸಿ ಒ ಜಿ ಮಾಜಿ ಸದಸ್ಯರಾದ ಪ್ರೊ.ಶಹಿದ್ ಜಮೀಲ್ ಅವರ ಪ್ರಕಾರ, ಕೋವಿಡ್ ನಿಯಂತ್ರಣಕ್ಕೆ ನೀಡಲಾಗುತ್ತಿರುವ ಒಂದು ಮತ್ತು ಎರಡನೇ ಹಂತದ ಲಸಿಕೆಗಳನ್ನು ಮೀರಿ ಡೆಲ್ಟಾ ವೈರಸ್ ಕಾಡುವ ಸಾಧ್ಯತೆ ಇದೆ.

ದೇಶದಲ್ಲಿ ರೂಪಾಂತರ ವೈರಸ್ ನ 2500 ಮಾದರಿಗಳನ್ನು ಪತ್ತೆ ಹಚ್ಚಲಾಗಿದೆ. ಅದರಲ್ಲಿ ಬಹುತೇಕ ವೈರಸ್ ಗಳ ಸ್ವರೂಪ ಮತ್ತು ಮೂಲವನ್ನು ಪತ್ತೆ ಹಚ್ಚಲಾಗಿದೆ. ಆದರೆ 20 ವೈರಾಣುಗಳು ಏನು ಎಂದು ಖಚಿತವಾಗಿ ಹೇಳಲಾಗಿಲ್ಲ. ಬಹುಶಃ ಅವು ಬಿ 1.617.2 ಮಾದರಿಯವಾಗಿರಬಹುದು ಎಂದು ಹೇಳಿದ್ದಾರೆ.

ಎರಡನೇ ಕೋವಿಡ್ ವೈರಾಣುವಿನ ಸಾಮ್ಯತೆಗಿಂತಲೂ ಡೆಲ್ಟಾ ವೈರಸ್ ಭಿನ್ನವಾಗಿದೆ. ಪ್ರಸ್ತುತ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ರೂಪಾಂತರಿ ವೈರಸ್ ಕೆ 417 ಎನ್ ಹೆಚ್ಚು ಅಪಾಯಕಾರಿ ಎಂದು ಹೇಳಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಪತ್ತೆಯಾಗಿರುವ ಸೋಂಕು ಆರು ಮಂದಿಯ ಸಾವಿಗೆ ಕಾರಣವಾಗಿದೆ. ಅವರಲ್ಲಿ ಒಬ್ಬರು ಕೋವಿಡ್ ಎರಡು ಲಸಿಕೆಗಳನ್ನು ಪಡೆದಿದ್ದರು. ಒಬ್ಬರು ಒಂದು ಹಂತದ ಲಸಿಕೆ ಮಾತ್ರ ಪಡೆದಿದ್ದರು ಎಂದು ಶಹಿದ್ ಹೇಳಿದ್ಧಾರೆ.

ಭಾರತೀಯ ಜನಸಂಖ್ಯೆ ದೃಷ್ಟಿಯಿಂದ ಹೆಚ್ಚು ಕಾಳಜಿಯಿಂದ ಇರಬೇಕಾದದ್ದು ಅನಿವಾರ್ಯ. ಮೂರನೇ ಅಲೆ ಎಷ್ಟು ಅಪಾಯಕಾರಿ, ಅದು ಡೆಲ್ಟಾ ಮಾದರಿಯಲ್ಲೇ ಇರಲಿದೆಯೇ ಎಂಬ ಹಲವಾರು ಪ್ರಶ್ನೆಗಳಿಗೆ ಇನ್ನೂ ಉತರ ಹುಡುಕಲಾಗುತ್ತಿದೆ, ಸದ್ಯದ ಮಾಹಿತಿ ಪ್ರಕಾರ ಡೆಲ್ಟಾ ವೈಸರ್ ಹೆಚ್ಚು ಅಪಾಯಕಾರಿ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.

ಸರ್ಕಾರ ಮುಂಜಾಗ್ರತೆಯಾಗಿ ಹೊರಡಿಸುವ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿದರೆ ಭಾರತ ಕೊರೊನಾ ವಿರುದ್ಧ ಗೆಲ್ಲಲು ಸಾಧ್ಯವಿದೆ. ಮುಂದಿನ ಆರು ವಾರದಲ್ಲಿ ಮೂರನೇ ರೂಪಾಂತರಿ ಎದುರಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

Facebook Comments

Sri Raghav

Admin