ಡೆಲ್ಟಾ ಪ್ಲಸ್‍ಗೆ ಕೊವ್ಯಾಕ್ಸಿನ್ ಪರಿಣಾಮಕಾರಿ

ಈ ಸುದ್ದಿಯನ್ನು ಶೇರ್ ಮಾಡಿ

ಹೈದ್ರಾಬಾದ್, ಜು.3- ಕೊರೊನಾ ಸೋಂಕಿನ ವಿರುದ್ಧ ಶೇ.77.8ರಷ್ಟು ಪರಿಣಾಮಕಾರಿಯಾಗಿರುವ ಕೊವ್ಯಾಕ್ಸಿನ್ ಲಸಿಕೆ ಡೆಲ್ಟಾ ಪ್ಲಸ್ ಮಾದರಿಗೂ ಶೇ.65.2 ರಷ್ಟು ಪರಿಣಾಮಕಾರಿ ಎಂದು ಭಾರತ್ ಬಯೋಟೆಕ್ ಸಂಸ್ಥೆ ತಿಳಿಸಿದೆ. ಕೊರೊನಾ ಸೋಂಕಿನ ಲಕ್ಷಣಗಳಿಗೆ ಕೊವ್ಯಾಕ್ಸಿನ್ ಶೇ.93.4ರಷ್ಟು ಪರಿಣಾಮಕಾರಿಯಾಗಿದೆ. ಇದರ ಜತೆಗೆ ಡೆಲ್ಟಾ ಪ್ಲಸ್ ಮಾದರಿಗೂ ಪರಿಣಾಮಕಾರಿಯಾಗಲಿದೆ ಎನ್ನುವುದು ಮೂರನೆ ಪರೀಕ್ಷೆ ಪ್ರಯೋಗದಲ್ಲಿ ತಿಳಿದುಬಂದಿದೆ ಎಂದು ಸಂಸ್ಥೆ ತಿಳಿಸಿದೆ.

ದೇಶದ 25ಕ್ಕೂ ಹೆಚ್ಚು ಸ್ಥಳಗಳಲ್ಲಿ ಎರಡನೆ ಡೋಸ್ ಲಸಿಕೆ ಪಡೆದ ಎರಡು ವಾರಗಳ ನಂತರ 130ಕ್ಕೂ ಹೆಚ್ಚು ಸೋಂಕಿತರ ಮೇಲೆ ನಡೆಸಲಾದ ಕ್ಲಿನಿಕಲ್ ಪ್ರಯೋಗದಲ್ಲಿ ಡೆಲ್ಟಾ ಪ್ಲಸ್‍ಗೆ ಕೊವ್ಯಾಕ್ಸಿನ್ ಪರಿಣಾಮಕಾರಿ ಎನ್ನುವುದು ಪತ್ತೆಯಾಗಿದೆ.

Facebook Comments