ವಿಶ್ವಕ್ಕೆ ಮಾರಕವಾಗಲಿದೆ ಡೆಲ್ಟಾ ರೂಪಾಂತರಿ ವೈರಸ್..!

ಈ ಸುದ್ದಿಯನ್ನು ಶೇರ್ ಮಾಡಿ

ವಿಶ್ವಸಂಸ್ಥೆ,ಜೂ.24-ಅತಿ ವೇಗವಾಗಿ ಹರಡಬಲ್ಲ ಸಾಮಥ್ರ್ಯ ಹೊಂದಿರುವ ಡೆಲ್ಟಾ ರೂಪಾಂತರಿ ವೈರಸ್ ಈಗಾಗಲೇ 85 ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿದ್ದು, ಕೆಲವೇ ದಿನಗಳಲ್ಲಿ ಮತ್ತಷ್ಟು ರಾಷ್ಟ್ರಗಳಿಗೆ ಹರಡುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ಅಲ್ಫಾ ರೂಪಾಂತರಿ 170, ಬೀಟಾ 118, ಗಾಮಾ 71 ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿದ್ದವು, ಇದೀಗ ಅತ್ಯಂತ ಮಾರಕ ವೈರಾಣು ಆಗಿರುವ ಡೆಲ್ಟಾ 85 ರಾಷ್ಟ್ರಗಳಲ್ಲಿ ತನ್ನ ಕಬಂಧ ಬಾಹು ಚಾಚಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿಯಲ್ಲಿ ಬಹಿರಂಗಗೊಂಡಿದೆ.

85 ರಾಷ್ಟ್ರಗಳ ಮೇಲೆ ವಕ್ರದೃಷ್ಟಿ ಬೀರಿರುವ ಡೆಲ್ಟಾ ಕಳೆದ ಎರಡು ವಾರಗಳಲ್ಲಿ ಇತರ 11 ರಾಷ್ಟ್ರಗಳಿಗೆ ಹಬ್ಬಿರುವ ಸಾಧ್ಯತೆ ಇದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ರಾಷ್ಟ್ರಗಳಿಗೆ ವಿಸ್ತರಣೆಗೊಳ್ಳುವುದು ನಿಶ್ಚಿತ ಎಂದು ವರದಿಯಲ್ಲಿ ಹೇಳಲಾಗಿದೆ.

ನಾಲ್ಕು ಮಾದರಿಯ ವೈರಾಣುಗಳಲ್ಲಿ ಡೆಲ್ಟಾ ಅತ್ಯಂತ ವೇಗವಾಗಿ ಹರಡುವ ಸಾಮಥ್ರ್ಯ ಹೊಂದಿರುವ ಪ್ರಬಲ ವಂಶಾವಳಿಯಾಗಿ ಪರಿವರ್ತನೆಗೊಂಡಿದೆ ಎಂದು ಉಲ್ಲೇಖಿಸಲಾಗಿದೆ.

Facebook Comments