ಡೆನ್ಮಾರ್ಕ್ ಓಪನ್ : ಕ್ವಾರ್ಟರ್‍ಫೈನಲ್‍ಗೆ ಸಮೀರ್ ಪ್ರವೇಶ

ಈ ಸುದ್ದಿಯನ್ನು ಶೇರ್ ಮಾಡಿ

ಒಡೆನ್ಸೆ, ಅ. 22- ಇಲ್ಲಿ ನಡೆಯುತ್ತಿರುವ ಡೆನ್ಮಾರ್ಕ್ ಓಪನ್‍ನಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆಯರು ಉತ್ತಮ ಪ್ರದರ್ಶನ ತೋರುತ್ತಿದ್ದು ಸಮೀರ್ ವರ್ಮಾ ಅವರು ವಿಶ್ವದ 3ನೆ ಅಗ್ರಶ್ರೇಯಾಂಕಿತ ಆಂಡ್ರೆಸ್ ಅಂಟೊನೋಸೆನ್ ವಿರುದ್ಧ ಗೆಲುವು ಸಾಸುವ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ವಿಶ್ವದ 28ನೆ ಶ್ರೇಯಾಂಕಿತ ಬ್ಯಾಡ್ಮಿಂಟನ್ ತಾರೆಯಾದ ಭಾರತದ ಸಮೀರ್ ವರ್ಮಾ ಹಾಗೂ ಆಂಡ್ರೆಸ್ ಅಂಟೊನೋಸೆನ್ ನಡುವೆ ನಡೆದ 50 ನಿಮಿಷಗಳ ಜಿದ್ದಾಜಿದ್ದಿನ ಹೋರಾಟದಲ್ಲಿ ಸಮೀರ್ 21-14,21-18 ನೇರ ಸೆಟ್‍ಗಳ ಮೂಲಗ ಗೆಲುವು ಸಾಸುವ ಮೂಲಕ ಕ್ವಾರ್ಟರ್‍ಫೈನಲ್‍ಗೆ ಲಗ್ಗೆ ಇಟ್ಟಿದ್ದಾರೆ.

2018ರಲ್ಲಿ ವಿಶ್ವ ಬ್ಯಾಡ್ಮಿಂಟನ್ ಫೈನಲ್ ಪ್ರವೇಶಿಸಿದ ನಂತರ ಉತ್ತಮ ಪ್ರದರ್ಶನ ತೋರುತ್ತಿರುವ ಸಮೀರ್ ಅನೇಕ ಪ್ರಶಸ್ತಿ ಗೆದ್ದು ದೇಶದ ಹೆಮ್ಮೆ ಹೆಚ್ಚಿಸಿದ್ದು ವಿಶ್ವದ 3ನೆ ಶ್ರೇಯಾಂಕಿತ ಆಟಗಾರ ಅಂಡ್ರೆಸ್‍ನನ್ನು ಸೋಲಿಸುವ ಮೂಲಕ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿರುವ ಸಮೀರ್ ಡೆನ್ಮಾರ್ಕ್ ಟ್ರೋಫಿಯನ್ನು ಗೆಲ್ಲುವ ಫೇವರೇಟ್ ಆಟಗಾರನಾಗಿ ಹೊರಹೊಮ್ಮಿದ್ದಾರೆ.

ಮಧ್ಯ ಪ್ರದೇಶದ ಸಮೀರ್ ವರ್ಮಾ ಕ್ವಾರ್ಟರ್‍ಫೈನಲ್‍ನಲ್ಲಿ 2014ರ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಕಂಚಿನ ಪದಕ ಗೆದ್ದಿರುವ ಟೋಮ್ಮಿ ಸುಗಿರ್‍ಟೋರ ಸವಾಲನ್ನು ಎದುರಿಸಲಿದ್ದಾರೆ. ನಿನ್ನೆ ನಡೆದ ಮಹಿಳೆಯರ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಟೊಕಿಯೋ ಒಲಿಂಪಿಕ್ಸ್‍ನ ಕಂಚಿನ ಪದಕ ವಿಜೇತ ಆಟಗಾರ್ತಿ ಪಿ.ವಿ.ಸಿಂಧು ಅವರು ಥೈಲ್ಯಾಂಡ್‍ನ ಬುಸನೆನ್ ವಿರುದ್ಧ 21-16, 12-21,21-15 ವಿರುದ್ಧ ಗೆಲುವು ಸಾಸುವ ಮೂಲಕ ಕ್ವಾರ್ಟರ್‍ಫೈನಲ್‍ಗೆ ಲಗ್ಗೆ ಇಟ್ಟಿದ್ದಾರೆ.

Facebook Comments