ಶ್ರೇಷ್ಠ ಫ್ಯಾಷನ್ ಡಿಸೈನರ್ ವರ್ಜಿಲ್ ಅಬ್ಲಾಹ್ ವಿಧಿವಶ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ನ.29-ಫ್ಯಾಷನ್ ಡಿಸೈನಿಂಗ್ ಕ್ಷೇತ್ರದಲ್ಲಿ ಅತಿ ಶ್ರೇಷ್ಠ ರೆನಿಸಿದ್ದ ವರ್ಜಿಲ್ ಅಬ್ಲಾಹ್ ವರು ಕ್ಯಾನ್ಸರ್‍ನಿಂದ ವಿಧಿವಶರಾಗಿದ್ದಾರೆ. ಅವರಿಗೆ 41 ವರ್ಷ ವಯಸ್ಸಾಗಿತ್ತು.

ಸ್ಜಿಟ್‍ವೇರ್ ಮತ್ತು ಅತ್ಯುನ್ನತ ಸಂಸ್ಕೃತಿ ನಿರ್ಮಾಣಕ್ಕೆ ಅವರು ಹೆಸರಾಗಿದ್ದರು. ಅವರ ಗ್ರಾಹಕ-ಸ್ನೇಹಿ ಉಪಸ್ಥಿತಿ ವಿಶ್ವವ್ಯಾಪಿ ಮತ್ತು ಕ್ರಿಯಾತ್ಮಕವಾಗಿತ್ತು. ಕೆಲವರು ಅವರನ್ನು ಜೆಫ್ ಕೂನ್ಸ್ ಅವರಿಗೆ ಹೋಲಿಸಿದ್ದರು. ಇತರರು ವರ್ಜಿಲ್ ಅವರನ್ನು ಅವರ ಪೀಳಿಗೆಯ ಕಾರ್ಲ್ ಲ್ಯಾಗರ್‍ಫೆಲ್ಡ್ ಎಂದು ಶ್ಲಾಘಿಸಿದ್ದರು.

ಈ ಭಯಾನಕ ಸುದ್ದಿಯಿಂದ ನಾವು ಆಘಾತಗೊಂಡಿದ್ದೇವೆ. ಅವರು ಓರ್ವ ಶ್ರೇಷ್ಠ ವಿನ್ಯಾಸಕರಷ್ಟೇ ಅಲ್ಲ ಓರ್ವ ದಾರ್ಶನಿಕರೂ ಆಗಿದ್ದರು. ಅವರು ಸುಂದರ ಆತ್ಮ ಮತ್ತು ಮಹತ್ತರ ಜ್ಞಾನ ಹೊಂದಿದ್ದವರಾಗಿದ್ದರು ಎಂದು ಎಲ್‍ವಿಎಂಹೆಚ್‍ನ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬರ್ನಾರ್ಡ್ ಅರ್ನಾಲ್ಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಬ್ಲಾಹ್ ಅವರಿಗೆ ಎರಡು ವರ್ಷಗಳ ಹಿಂದೆ ಹೃದಯದಲ್ಲಿ ಗಡ್ಡೆ ಉಂಟಾಗುವ ಅಪರೂಪದ ಬಗೆಯ ಕಾರ್ಡಿಯಾಕ್ ಆಂಜಿಯೋಸರ್ಕೇವೂ ಎಂಬ ಕ್ಯಾನ್ಸರ್ ತಗುಲಿತ್ತು ಎಂದು ಅವರ ಕುಟುಂಬದವರ ಹೇಳಿಕೆ ತಿಳಿಸಿದೆ.

Facebook Comments

Sri Raghav

Admin