ದೇವರಾಯನ ದುರ್ಗ ಬಗ್ಗೆ ನಿಮಗೆ ಗೊತ್ತಿರದ ಐತಿಹಾಸಿಕ, ರೋಚಕ ಮಾಹಿತಿ ಇಲ್ಲಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ದೇವರಾಯನದುರ್ಗ ಬೆಂಗಳೂರಿನಿಂದ 65 ಕಿ.ಮೀ. ಮತ್ತು ತುಮಕೂರಿನಿಂದ 16 ಕಿ.ಮೀ. ದೂರದಲ್ಲಿದೆ. ತುಮಕೂರಿನಿಂದ 10 ಕಿ.ಮೀ. ದಾಟಿದರೆ, ದೇವರಾಯನದುರ್ಗ ಕಾಡು ಗೋಚರಿಸುತ್ತದೆ. ಈ ಜಾಗ ಒಂದು ದಿನದ ಪ್ರವಾಸಕ್ಕೆ ಯೊಗ್ಯವಾದ ಸ್ಥಳ ಮತ್ತು ಪವಿತ್ರ ಸ್ಥಳ ಕೂಡ ಹೌದು. ಹತ್ತಿರದಲ್ಲೆ ದುರ್ಗದಹಳ್ಳಿ ಎಂಬ ಹಳ್ಳಿಯಲ್ಲಿ 8 ನೇ ಶತಮಾನದ ಶಂಕರಾಚಾರ್ಯರು ಕಟ್ಟಿರುವ ಸುಂದರವಾದ ದೇವಾಲಯವಿದೆ. ಹಾಗೆಯೇ ಸಮೀಪದಲ್ಲಿ “ನಾಯಕನ ಕೆರೆ” ಎಂಬ ಸುಂದರ ಮತ್ತು ಮನೋಹರವಾದ ಕೆರೆ ಇದೆ. ದೇವರಾಯನ ದುರ್ಗ ದೇವಾಲಯಗಳಿಗೆ ಮಾತ್ರವಲ್ಲದೆ ಬೇಸಿಗೆಯಲ್ಲೂ ತಂಪಾದ ಪರಿಸರಕ್ಕೆ ಜನಪ್ರಿಯವಾಗಿದೆ. ಯುದ್ಧದಲ್ಲಿ ಬೆಟ್ಟ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ವಶಪಡಿಸಿಕೊಂಡ ಮೈಸೂರು- ಚಿಕ್ಕ ದೇವರಾಯ ಒಡೆಯರ್ ಮಹಾರಾಜರಿಂದ ದೇವರಾಯನ ದುರ್ಗಕ್ಕೆ ಈ ಹೆಸರು ಬಂದಿದೆ.

ದ್ರಾವಿಡ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾದ ಈ ದೇವಸ್ಥಾನವು ಪೂರ್ವಕ್ಕೆ ಎದುರಾಗಿತ್ತು ಮತ್ತು ಇದನ್ನು ಮೈಸೂರು ರಾಜ ಕಾಂತಿರಾವ ನರಸರಾಜ ಅವರು ನಿರ್ಮಿಸಿದ್ದಾರೆ ಎಂದು ಹೇಳಲಾಗುತ್ತದೆ. ತುಮಕೂರು 41 ಮತ್ತು 42 ರ ಶಾಸನಗಳಲ್ಲಿ, ಆವರಣ ಮತ್ತು ಗೋಪುರವನ್ನು 1858 ರಲ್ಲಿ ಮೈಸೂರು ರಾಜ ಕೃಷ್ಣರಾಜ ಒಡೆಯರ್ ರವರು ದುರಸ್ತಿ ಮಾಡಿದ್ದಾರೆ ಎಂದು ನಾವು ತಿಳಿದುಕೊಳ್ಳುತ್ತೇವೆ.

ಇಲ್ಲಿನ ಬೆಟ್ಟದ ಮೇಲೆ ಯೋಗ ನರಸಿಂಹ ಮತ್ತು ಭೋಗ ನರಸಿಂಹರ ದೇವಾಲಯಗಳಿವೆ,ಹಳೆಯ ಕೋಟೆ, ಸೂರ್ಯಾಸ್ತ ನೋಡಲು ಸುಂದರಾವಾದ ಜಾಗ ಕೂಡ ಇದೆ. ದೇವರಾಯನದುರ್ಗದ ಸಮೀಪವಿರುವ ನಾಮದ ಚಿಲುಮೆ ಒಂದು ಪ್ರೇಕ್ಷಣೀಯ ಸ್ಥಳವಾಗಿದೆ. ದೇವರಾಯನ ದುರ್ಗದ ಕಾಡಿನಲ್ಲಿ ಚಿರತೆ, ಕಾಡು ಹಂದಿ, ಮುಳ್ಳು ಹಂದಿ, ಜಿಂಕೆ ಮುಂತಾದ ಪ್ರಾಣಿಗಳು ಕಂಡು ಬರುತ್ತವೆ. ಆದರೆ ಇದು ಅಭಯಾರಣ್ಯವಲ್ಲದಿದ್ದರಿಂದ ಕಾಣಲು ಸಿಗುವುದು ಅಪರೂಪ. ಇತ್ತೀಚಿನ ವರದಿ ಪ್ರಕಾರ ದೇವರಾಯನದುರ್ಗದಲ್ಲಿ ಹುಲಿ ಕೂಡ ಪತ್ತೆಯಾಗಿದೆ.

ದುರ್ಗದ ಮೇಲೆ ಸರ್ಕಾರದ ಪ್ರವಾಸಿ ಬಂಗಲೆಗಳಿವೆ. ಜಿಲ್ಲೆಯ ಪೋಲಿಸ್ ನಿಸ್ತಂತು ಜಾಲದ ನಿಯಂತ್ರಣ ಕೇಂದ್ರವೂ ಸಹ ಇದೆ. ಬೆಟ್ಟದ ತುದಿಯಿಂದ ನಿಂತು ನೋಡಿದರೆ ಸುಮಾರು 25 ಕಿ.ಮೀ. ದೂರದಲ್ಲಿರುವ ಶಿವಗಂಗೆ ಬೆಟ್ಟ ಕಾಣುತ್ತದೆ. ಸುತ್ತಲೂ ಹತ್ತಾರು ಕೆರೆಗಳು ನೀರಿನಿಂದ ತುಂಬಿರುವುದೂ ಸಹ ಗೋಚರಿಸುತ್ತದೆ.

ಇಲ್ಲಿನ ನರಸಿಂಹ ದೇವರ ಜಾತ್ರೆಯು ಬಹಳ ಪ್ರಸಿದ್ದ. ಪ್ರತಿ ವರ್ಷವೂ ಇಲ್ಲಿ ನೆಡೆಯುವ ಜಾತ್ರೆಗೆ ಸಾವಿರಾರು ಜನರು ಸೇರುತ್ತಾರೆ. ಹತ್ತಿರದಲ್ಲಿರುವ ದುರ್ಗದ ಹಳ್ಳಿಯಲ್ಲಿರುವ ಶ್ರೀ ವಿದ್ಯಾಶಂಕರ ಸ್ವಾಮಿಯ ದೇವಾಲಯವೂ ಬಹಳ ಸುಂದರವಾಗಿದೆ. ಈ ದೇವಾಲಯವು ನೂರಾರು ವರ್ಷಗಳ ಇತಿಹಾಸವನ್ನು ಹೊಂದಿದೆ, ಇದು ದೇವರಾಯನ ದುರ್ಗಕ್ಕೆ ಹೋಗುವ ದಾರಿಯಲ್ಲಿರುವ ನಾಮದ ಚಿಲುಮೆಗೆ ಕೇವಲ 3 ಕಿ.ಮೀ ದೂರದಲ್ಲಿದೆ.

# ದೇವರಾಯನ ದುರ್ಗದಲ್ಲಿ ಏನೆಲ್ಲಾ ನೋಡಬಹುದು:
ಭೋಗ ನರಸಿಂಹ ದೇವಸ್ಥಾನ ಬೆಟ್ಟದ ಬುಡದಲ್ಲಿ ದೇವರಾಯನ ದುರ್ಗದಲ್ಲಿರುವ ಮೊದಲ ದೇವಸ್ಥಾನವಾಗಿದೆ. ಯೋಗ ನರಸಿಂಹ ದೇವಸ್ಥಾನ ದೇವರಾಯದುರ್ಗದಲ್ಲಿರುವ ಎರಡನೆಯ ಪ್ರಮುಖ ದೇವಸ್ಥಾನವಾಗಿದೆ. ದ್ರಾವಿಡ ಶೈಲಿಯ ವಾಸ್ತುಶಿಲ್ಪದಲ್ಲಿ ಯೋಗ ನರಸಿಂಹ ದೇವಾಲಯವು ಭೋಗ ನರಸಿಂಹದಿಂದ ಸ್ವಲ್ಪ ಎತ್ತರ ಮತ್ತು ಇನ್ನೂ ಅಂತರದಲ್ಲಿದೆ.

# ಪವಿತ್ರ ಕೊಳಗಳು:
ದೇವರಾಯನ ದುರ್ಗ ದೇವಾಲಯ ಸಂಕೀರ್ಣದಲ್ಲಿ ನರಸಿಂಹ ತೀರ್ಥ, ಪರಾಶರ ತೀರ್ಥ ಮತ್ತು ಪಾದ ತೀರ್ಥವೆಂಬ ಮೂರು ಕೊಳಗಳಿವೆ. ನಾಮದ ಚಿಲುಮೆ: ದೇವರಾಯನ ದುರ್ಗದಿಂದ 6 ಕಿಮಿ ದೂರದಲ್ಲಿರುವ ಭೇಟಿ ನೀಡಲೇಬೇಕಾದ ಸ್ಥಳವಾಗಿದೆ. ಬಂಡೆಯ ಹಾಸಿನಿಂದ ನೀರು ಚಿಮ್ಮುತ್ತದೆ.

ದೇವರಾಯನ ದುರ್ಗದ ಹತ್ತಿರ ಭೇಟಿ ನೀಡುವ ಸ್ಥಳಗಳು: ಶಿವಗಂಗೆ (30 ಕಿಮಿ), ಮಂಡರಗಿ (19 ಕಿಮಿ) ಮಧುಗಿರಿ ಕೋಟೆ (45 ಕಿಮಿ), ಮೈದಾನ ಹಳ್ಳಿ ಬ್ಲ್ಯಾಕ್‌ಬಕ್ ಕೈದಾಲ ಚೆನ್ನಕೇಶವ ದೇವಸ್ಥಾನ (27 ಕಿ.ಮೀ) ದೇವರಾಯನ ದುರ್ಗದೊಂದಿಗೆ ಭೇಟಿ ನೀಡುವ ಕೆಲವು ಆಕರ್ಷಣೀಯ ಸ್ಥಳಗಳಾಗಿವೆ.

Facebook Comments

Sri Raghav

Admin