ದೇವೇಗೌಡರ ಅನುಭವ, ಸಲಹೆ ಸಹಕಾರ ಈ ನಾಡಿಗೆ ಅಗತ್ಯ: ಡಿಕೆಶಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.1- ದೇವೇಗೌಡರು ಹೋರಾಟದ ಮೂಲಕವೇ ಪ್ರಧಾನಿಯಂತರ ಉನ್ನತ ಹುದ್ದೆಗೇರಿದವರು. ಪಕ್ಷಾತೀತವಾಗಿ ಅವರನ್ನು ಎಲ್ಲರೂ ಅಭಿನಂದಿಸುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ದೇವೇಗೌಡರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿ 25ನೇ ವರ್ಷಾಚರಣೆಯ ಕರಿತು ಪ್ರತಿಕ್ರಿಯಿಸಿರುವ ಅವರು, ದೇವೇಗೌಡರ ಅನುಭವ, ಸಲಹೆ ಸಹಕಾರ ಈ ನಾಡಿಗೆ ಅಗತ್ಯ ಇದೆ ಎಂದರು.

ದೇವೇಗೌಡರನ್ನು ಹೊರತು ಪಡೆಸಿ ಮತ್ತೊಬ್ಬರಿಗೆ ಪ್ರಧಾನಿಯಾಗುವ ಅವಕಾಶ ಬಂದಿಲ್ಲ. ಉತ್ತರ ಭಾರತೀಯರ ರಾಜಕೀಯ ಪ್ರಭಾವದ ನಡುವೆಯೂ ದೇವೇಗೌಡರು ಪ್ರಧಾನಿಯಾಗಿದ್ದ ಹೆಮ್ಮೆ ಪಡುವ ಸಾಧನೆ ಎಂದು ಕೊಂಡಾಡಿದರು.

Facebook Comments