ಅಧಿಕಾರ ಕೊಟ್ಟು ದೇವರು ಪರೀಕ್ಷೆ ಮಾಡುತ್ತಿದ್ದಾನೆ : ದೇವೇಗೌಡರು

ಈ ಸುದ್ದಿಯನ್ನು ಶೇರ್ ಮಾಡಿ

HD-Devegowda
ಪಾವಗಡ,ಜೂ.18- ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ದೇವರು ಮುಖ್ಯಮಂತ್ರಿಯಾಗುವ ಅಧಿಕಾರ ಕೊಟ್ಟು ಸಾಕಷ್ಟು ಪರೀಕ್ಷೆ ಮಾಡುತ್ತಿದ್ದಾನೆ. ಈ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಹೋರಾಟ ಮಾಡಬೇಕಾಗಿದೆ ಎಂದು ಮಾಜಿ ಪ್ರಧಾನಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು ಹೇಳಿದ್ದಾರೆ.
ಪಾವಗಡ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಬೇಕು ಎಂಬ ಪ್ರಾರ್ಥನೆ ಈಡೇರಿದೆ. ಈ ಅಧಿಕಾರ ವನ್ನು ಕೊಟ್ಟ ದೇವರು ಹಲವು ಪರೀಕ್ಷೆಗಳನ್ನು ಒಡ್ಡಿದ್ದಾನೆ. ಅದರಲ್ಲಿ ಪಾಸಾಗಬೇಕಾಗಿದೆ ಎಂದರು.

37 ಸ್ಥಾನಗಳನ್ನು ಗೆದ್ದಿರುವ ಜೆಡಿಎಸ್ ಪಕ್ಷವನ್ನು 78 ಸ್ಥಾನ ಗೆದ್ದಿರುವ ರಾಷ್ಟ್ರೀಯ ಪಕ್ಷದವರು ಬಂದು ನೀವೇ ಮುಖ್ಯಮಂತ್ರಿಯಾಗಿ ಎಂದು ಹೇಳಿ ಅವಕಾಶ ಮಾಡಿಕೊಟ್ಟಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕೆಂದು ನೀವೇನು ಪ್ರಾರ್ಥೀಸಿದ್ದೀರೋ ಅದು ಈಡೇರಿದೆ ಎಂದು ಕಾರ್ಯಕರ್ತರನ್ನು ಉದ್ದೇಶಿಸಿ ಹೇಳಿದರು.
ಅಂಬೇಡ್ಕರ್ ಸಂವಿಧಾನ ಕೊಟ್ಟಿದ್ದಾರೆ, ಮಹಾತ್ಮಗಾಂ„ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಯಾರೂ ಯಾವುದೇ ಧರ್ಮವನ್ನು ವಿರೋದಿಸಬಾರದು ಎಲ್ಲರೂ ಎಲ್ಲ ಧರ್ಮವನ್ನು ಪರಸ್ಪರ ಗೌರವಿಸಬೇಕು. ಕೆಲವರು ಮಾನವೀಯ ಮೌಲ್ಯಗಳನ್ನು ಮರೆತು ಮತ್ತೊಂದು ಧರ್ಮ ವಿರೋಧ ಮಾಡುವುದೇ ನಮ್ಮ ಹೆಗ್ಗುರಿ ಎಂದು ಹೇಳುತ್ತಿದ್ದಾರೆ. ಅದು ಸರಿಯಲ್ಲ ಎಂದು ಪರೋಕ್ಷವಾಗಿ ಬಿಜೆಪಿಗೆ ಟಾಂಗ್ ನೀಡಿದರು.  ಈ ರಾಜ್ಯದ ಅಭಿವೃದ್ಧಿಗೆ ರಕ್ಷಣೆಗೆ ಪ್ರಾದೇಶಿಕ ಪಕ್ಷದಿಂದ ಮಾತ್ರ ಸಾಧ್ಯವೇ ಹೊರತು ರಾಷ್ಟ್ರೀಯ ಪಕ್ಷಗಳಿಂದ ಸಾಧ್ಯವಿಲ್ಲ ಎಂದು ಮೈತ್ರಿ ಪಕ್ಷದ ಕಾಂಗ್ರೆಸ್ ಪಕ್ಷಕ್ಕೂ ಟಾಂಗ್ ಕೊಟ್ಟು ಗೌಡರು ಅಚ್ಚರಿ ಮೂಡಿಸಿದರು.

Facebook Comments

Sri Raghav

Admin