ಸಿದ್ದು ಟೀಕೆಗೆ ತಲೆಕೆಡಿಸಿಕೊಳ್ಳದ ದೇವೇಗೌಡರು, ಪಕ್ಷ ಸಂಘಟನೆಯತ್ತ ಒಲವು

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ: ಸಿದ್ದರಾಮಯ್ಯ ಅವರ ಹೇಳಿಕೆಗೆ ಹೆಚ್ಚು ಮಹತ್ವ ನೀಡುವ ಅವಶ್ಯಕತೆ ನನಗಿಲ್ಲಾ… ನಾನು ರಾಜಕೀಯ ಪ್ರಾರಂಭಿಸಿದಾಗಿನಿಂದಲೂ ನನ್ನ ಪಕ್ಷ ಸಂಘಟನೆ ಹೇಗೆ ಮಾಡಿದ್ದೇನೆ ; ಎಷ್ಟು ಪೆಟ್ಟು ತಿಂದಿದ್ದೇನೆ ನನಗೆ ಗೊತ್ತು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಪ್ರತಿಕ್ರಿಯಿಸಿದರು.

ಹೊಳೆನರಸೀಪುರದಲ್ಲಿನ ರಂಗನಾಥ ಸ್ವಾಮಿ‌ ಹಾಗೂ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನ ದಲ್ಲಿ ಶ್ರಾವಣ ಮಾಸದ ಕೊನೆ ಶನಿವಾರವಾದ ಇಂದು ಪೂಜೆ ನೆರವೇರಿಸಿದ ಬಳಿಕ ಎಚ್.ಡಿ.ರೇವಣ್ಣ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇಂದು ಸಿದ್ದರಾಮಯ್ಯ ಅವರ ಹೇಳಿಕೆಗೆ ನಾನು ಉತ್ತರಿಸುವುದಿಲ್ಲಾ ಜನರೇ ಇದಕ್ಕೆ ಉತ್ತರಿಸಲಿದ್ದಾರೆ.

ಮುಂದಿನ ಚುನಾವಣೆಗೆ ಜೆಡಿಎಸ್ ಪ್ರಾದೇಶಿಕ ಪಕ್ಷವನ್ನು ತಳಮಟ್ಟದಿಂದ ಕಟ್ಟಿ ಬೆಳಸುವುದೇ ನನ್ನ ಗುರಿ ಎಂದರು. ಇದೇ ವೇಳೆ ಮಹಾಭಾರತದ ಕಥಾ ಪ್ರಸಂಗಗಳಲ್ಲಿನ ಧರ್ಮರಾಯ, ದುರ್ಯೋಧನ, ಧೃಥರಾಷ್ಟ್ರ ಅವರ ಪರಿಸ್ಥಿತಿ ಹಾಗೂ ಲೋಕಸಭಾ ಚುನಾವಣಾ ಸ್ಪರ್ಧೆ ಮಾಡಿದ ಸಂದರ್ಭಕ್ಕೆ ಹೋಲಿಸಿ ವಿವರಿಸಿದರು‌.

ಪ್ರಾದೇಶಿಕ ಪಕ್ಷ‌‌ ಸಂಘಟನೆ ಸುಲಭದ ಮಾತಲ್ಲಾ ಹಿಂದಿನಿಂದಲೂ ನಾನು ಎಷ್ಟು ಪೆಟ್ಟನ್ನು ತಿಂದು ಬಂದಿದ್ದೇನೆ ನನಗೆ ಗೊತ್ತು ಕಾಲವೇ ಹಲವರಿಗೆ ಉತ್ತರ ನೀಡಲಿದೆ ಎಂದು ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು.

ಹಿಂದೆ‌ ಇದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಕಾರಣಾಂತರದಿಂದ‌ ನಮ್ಮ‌ ಪಕ್ಷ ಬಿಟ್ಟಿ ಹೋದರು ಎಚ್.ಕೆ.ಕುಮಾರಸ್ವಾಮಿ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ ಮಾಜಿ ಮಂತ್ರಿ ಕೂಡ ಹೌದು‌ ಕಳೆದ ಬಾರಿಯ ಸರ್ಕಾರದಲ್ಲಿ ಅವರಿಗೆ ಮಂತ್ರಿ ಸ್ಥಾನ ಸಿಗಲಿಲ್ಲಾ ಇದಕ್ಕೆ‌ ಬೇಸರ ವಿದೆ; ಅವರ ನಾಯಕತ್ವದಲ್ಲಿ ಜೆಡಿಎಸ್ ಪಕ್ಷ ಉತ್ತಮ ಕೆಲಸ ಮಾಡಲಿದೆ ಎಂದು ದೇವೇಗೌಡರು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಇನ್ನು 3ವರ್ಷ 8 ತಿಂಗಳು ನಡೆಯಬಹುದು ಎಂದು ಭವಿಷ್ಯ ನುಡಿದ ಅವರು‌ ಈ ಸರ್ಕಾರದ ಒಳ್ಳೆಕೆಲಸಕ್ಕೆ ನಮ್ಮ ಬೆಂಬಲವಿದೆ .ರಾಜ್ಯದ ಸಮಸ್ಯೆ ಗಳಿಗೆ ಸ್ಪಂದನೆ ಅಗತ್ಯ ಸರಿಯಾಗಿ ನೆರೆ ಪರಿಸ್ಥಿತಿ ನಿಭಾಯಿಸದಿದ್ದರೆ ಪಕ್ಷದಿಂದ ಹೋರಾಟ ಮಾಡುತ್ತೇನೆ.

ರಾಜ್ಯ ಹಾಗೂ ಕೇಂದ್ರದಲ್ಲಿ‌ ಬಿಜೆಪಿ ಅಧಿಕಾರದಲ್ಲಿ ಇದೆ ಹಾಗೂ ರಾಜ್ಯ ಸರ್ಕಾರ ಉತ್ತಮ‌ ಕೆಲಸ ಮಾಡುವಲ್ಲಿ ಸಮರ್ಥವಾಗಿದೆ ಕೇಂದ್ರದಿಂದ ಸಾಕಷ್ಟು ಹಣ ಬರುವ ನಿರೀಕ್ಷೆ ಇದೆ ರೈತರ ಸಮಸ್ಯೆ ಗೆ ರಾಜ್ಯ ಸರ್ಕಾರ ಹೆಚ್ಚು ಸ್ಪಂದಿಸಬೇಕಿದೆ ತೆಂಗು ಬೆಳೆ ನಾಶವಾದಾಗ 2500 ರೈತರನ್ನು ದೆಹಲಿಗೆ ಪ್ರತಿಭಟನೆಗೆ ಕೊಂಡೋದೆ.ಎಂದು ರೈತರ ಸಮಸ್ಯೆಗೆ ತವು ಸ್ಪಂದಿಸಿದ ರೀತಿಯನ್ನು ದೇವೇಗೌಡರು ಸ್ಮರಿಸಿದರು.

ರಾಷ್ಟ್ರ‌ಮಟ್ಟದಲ್ಲಿ ರಾಜಕೀಯಕ್ಕೆ ಸಮಯವಿಲ್ಲಾ. ರಾಜ್ಯದಲ್ಲಿಯೇ ಜೆಡಿ ಎಸ್ ಪಕ್ಷ ‌ಸಂಘಟನೆಗೆ ಹೆಚ್ಚು ಒತ್ತು ನೀಡಲಿದ್ದೇನೆ. ವಿರೋಧ‌ ಪಕ್ಷದ ನಾಯಕನಾಗಿ ಕೆಲಸ ಮಾಡಿದ್ದೇನೆ. ಎಲ್ಲದಕ್ಕೂ ದೇವರ ಅನುಗ್ರಹ ಬೇಕು ದೇವರಲ್ಲಿ ಹೆಚ್ಚು ನಂಬಿಕೆ ಇದೆ.ಅದ್ದರಿಂದ ಪ್ರತಿವರ್ಷ ಮನೆ ದೇವರಿಗೆ ಬರುತ್ತೇನೆ ಎಂದು ಇದೇ ವೇಳೆ ಹೇಳಿದರು‌.

# ಜನರೇ ಜನಾರ್ಧನರು;
ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನೆಡೆಯಬಹುದು- ನಡೆಯದೆಯೇ ಇರಬಹುದು.‌ಇದಕ್ಕೆ ನಮ್ಮ ಪಕ್ಷ ಸರ್ವಸನ್ನದ್ದವಾಗಿದೆ ಜನರೇ ನನ್ನ ಕೈಹಿಡಿದು ನಡೆಸಲಿದ್ದಾರೆ. ಜನರೇ ಜನಾರ್ದನ ಎಂದು ನಂಬಿಕೊಂಡು ರಾಜಕೀಯಕ್ಕೆ‌ ಬಂದವನು ನಾನು ಅವರು ಎಂದು‌ ನನ್ನ ಪಕ್ಷವನ್ನು ಕೈಬಿಡಲಾರಾರು ಎಂದು ಪ್ರತಿಕ್ರಿಯಿಸಿದರು.

ಕಾಂಗ್ರೆಸ್ ಜೊತೆಗೆ ಮರು ಮೈತ್ರಿ ವಿಚಾರವಾಗಿ ಸೋನಿಯ ಗಾಂಧಿ ಹೊಸ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂಬ ವಿಶ್ವಾಸ ವಿದೆ. ಅವರದು ರಾಷ್ಟ್ರೀಯ ಪಕ್ಷ ಅವರು ಕರೆದು ಹೀಗೆ ಮಾಡಿ ಎಂದು ಹೇಳಿದರೆ ವಿಚಾರಮಾಡಲಾಗುವುದು ಎಂದರು.

# ಜನರ‌ನ್ನು ವಿಶ್ವಾಸಕ್ಕೆ ಪಡೆಯ ಬೇಕಿತ್ತು;
ಜಮ್ಮು ಕಾಶ್ಮೀರ ಕಣಿವೆ ರಾಜ್ಯದಲ್ಲಿ ಶಾಂತಿ ನೆಲಸಲು ಅಲ್ಲಿಯ ಜನರನ್ನು ಕೇಂದ್ರ ಸರ್ಕಾರ ವಿಶ್ವಾಸಕ್ಕೆ ಪಡೆಯಬೇಕು ಹಾಗೂ ಆರ್ಟಿಕಲ್ 370 ತೆರವು ಮಾಡುವ ಮುನ್ನ ಅಲ್ಲಿಯ ಜನರನ್ನು ವಿಶ್ವಾಸಕ್ಕೆ ಪಡೆದಿದ್ದರೆ ಇಂದು ಅಲ್ಲಿ ಸಮಸ್ಯೆ ಉಲ್ಬಣವಾಗುತ್ತಿರಲಿಲ್ಲಾ ಎಂದು‌ ನನ್ನ ಭಾವನೆ .ಅಲ್ಲಿಯ ಹಲವು ನಾಯಕರನ್ನು ಗೃಹ ಬಂಧನದಲ್ಲಿ ಇಡಲಾಗಿದೆ ಅಲ್ಲದೆ ರಾಜ್ಯದಲ್ಲಿ ಸಾವಿರಾರು ಸೈನಿಕರನ್ನು ಇರಿಸಲಾಗಿದೆ ಇದು ಉತ್ತಮ ಬೆಳವಣಿಗೆಯಲ್ಲಾ. ನಾನು ಪ್ರಧಾನ ಮಂತ್ರಿಯಾಗಿದ್ದ 10 ತಿಂಗಳ‌ ಅವಧಿಯಲ್ಲಿ ಕಾಶ್ಮೀರ ದಲ್ಲಿ ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡಿರಲಿಲ್ಲಾ ಎಂದು ಅವರು‌ ಹೇಳಿದರು‌ .ಆ ರಾಜ್ಯದಲ್ಲಿ ಶಾಂತಿ ನೆಲೆಸಲು ಅಲ್ಲಿನ ಜನರನ್ನು ವಿಶ್ವಾಸಕ್ಕೆ ಪಡೆದು ವರ್ತಿಸುವುದೆ ಹೆಚ್ಚು ಅವಶ್ಯಕ ವಾಗಿದೆ ಎಂದರು‌

# ವಿಷಾದ;
ದೇಶ ಕಂಡ ಮಹಾನ್ ಮುತ್ಸದ್ದಿ ನಾಯಕರಾದ ಅರುಣ್ ಜೇಟ್ಲಿ ಸಾವು ದೇಶಕ್ಕೆ ತುಂಬಲಾರದ ನಷ್ಟ ಲವಾಗಿದೆ ಅವರು ಗೃಹಮಂತ್ರಿಯಾಗಿ, ಹಣಕಾಸು ಸಚಿವರಾಗಿ ಸಾಕಷ್ಟು ಉತ್ತಮ‌ ಸೇವೆ ಮಾಡಿದ್ದಾರೆ ಎಂದ ದೇವೇಗೌಡರು ವಿಷಾದ ವ್ಯಕ್ತಪಡಿಸಿದರು.

Facebook Comments

Sri Raghav

Admin