ಮಲೈಮಹದೇಶ್ವರನದ ಹುಂಡಿಯಲ್ಲಿ 1.13 ಕೋಟಿ ರೂ ದೇಣಿಗೆ ಸಂಗ್ರಹ ..!

ಈ ಸುದ್ದಿಯನ್ನು ಶೇರ್ ಮಾಡಿ

MALEMAHADESHWARA
ಕೊಳ್ಳೇಗಾಲ, ಆ.30- ತಾಲ್ಲೂಕಿನ ಪ್ರಸಿದ್ಧ ಮಲೈಮಹದೇಶ್ವರ ಬೆಟ್ಟದ ಹುಂಡಿ ಎಣಿಕೆ ಕಾರ್ಯ ನಿನ್ನೆ ನಡೆದಿದ್ದು, 1,13,98,135ರೂ. ಸಂಗ್ರಹವಾಗಿದೆ.
ಸಾಲೂರುಮಠದ ಗುರುಸ್ವಾಮಿ ಅವರ ಸಮ್ಮುಖದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, 31 ಗ್ರಾಂ ಚಿನ್ನ ಹಾಗೂ 600 ಗ್ರಾಂ ಬೆಳ್ಳಿ ಸಹ ಸಂಗ್ರಹವಾಗಿದೆ.
ಮಲೈಮಹದೇಶ್ವರ ಬೆಟ್ಟದ ವಾಣೀಜ್ಯ ಸಂಕೀರ್ಣದಲ್ಲಿ ಹುಂಡು ಎಣಿಕೆ ಕಾರ್ಯ ನಡೆದ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಗಾಯತ್ರಿ, ಉಪ ಕಾರ್ಯದರ್ಶಿ ಬಸವರಾಜು, ಲೆಕ್ಕಾಧಿಕಾರಿ ಮಹದೇವಸ್ವಾಮಿ ಸ್ಥಳದಲ್ಲಿದ್ದರು. ಮಲೈಮಹದೇಶ್ವರ ಬೆಟ್ಟಕ್ಕೆ ಶ್ರಾವಣ ಮಾಸದ ಅಂಗವಾಗಿ ಭಕ್ತಾದಿಗಳು ಸಹಸ್ರಾರು ಸಂಖ್ಯೆಯಲ್ಲಿ ಬರುತ್ತಲೇ ಇದ್ದು, ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.

Facebook Comments

Sri Raghav

Admin