ಸಹಜ ಸ್ಥಿತಿಯತ್ತ ಮರಳಿದ ಡಿಜೆ ಹಳ್ಳಿ- ಕೆಜಿ ಹಳ್ಳಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.21- ಗಲಭೆಗೆ ಒಳಗಾಗಿದ್ದ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪ್ರದೇಶಗಳಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಬರುತ್ತಿದೆ.ಈ ಪ್ರದೇಶಗಳಲ್ಲಿರುವ ಅಂಗಡಿಗಳು, ಹೊಟೇಲ್‍ಗಳ ಬಾಗಿಲು ತೆರೆದಿವೆ. ರಸ್ತೆಗಳಲ್ಲಿ ವಾಹನಗಳು ಸಂಚರಿಸುತ್ತಿವೆ.

ಕಳೆದ 11ರಂದು ರಾತ್ರಿ ಈ ಎರಡೂ ಪ್ರದೇಶಗಳಲ್ಲಿನ ಮನೆಗಳು, ವಾಹನಗಳು ಹಾಗೂ ಪೊಲೀಸ್ ಠಾಣೆಗಳಿಗೆ ಗಲಭೆಕೋರರು ಬೆಂಕಿ ಹಚ್ಚಿ ದಾಂಧಲೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಈ ಎರಡೂ ಪ್ರದೇಶಗಳಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗಿತ್ತು. ಗಲಭೆಕೋರರನ್ನು ಪೊಲೀಸರು ಬಂಸಿದ ಹಿನ್ನೆಲೆಯಲ್ಲಿ ಈಗ ಅಲ್ಲಿ ಪರಿಸ್ಥಿತಿ ತಿಳಿಯಾಗಿದೆ.

# ಬಂದೋಬಸ್ತ್:
ಸ್ಥಳೀಯ ಪೊಲೀಸರ ಜತೆಗೆ ಸಿಎಆರ್, ಕೆಎಸ್‍ಆರ್‍ಪಿ ತುಕಡಿಗಳನ್ನು ಹಾಗೂ ಅರೆಸೇನಾ ಪಡೆಯ ಮೂರು ಕಂಪೆನಿಗಳನ್ನು ಬಂದೋಬಸ್ತ್‍ಗಾಗಿ ನಿಯೋಜಿಸಲಾಗಿದೆ. ಬೀಟ್ ಪೊಲೀಸರಲ್ಲದೆ ಹಿರಿಯ, ಕಿರಿಯ ಅಕಾರಿಗಳು ಈ ಎರಡೂ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಗಸ್ತಿನಲ್ಲಿದ್ದಾರೆ.

ಎಫ್‍ಐಆರ್: ಗಲಭೆಗೆ ಸಂಬಂಸಿದಂತೆ ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಠಾಣೆಗಳಲ್ಲಿ ಇದುವರೆಗೂ 67 ಎಫ್‍ಐಆರ್‍ಗಳು ದಾಖಲಾಗಿವೆ.
ದಾಖಲಾಗಿರುವ ಪ್ರಕರಣಗಳ ತನಿಖೆಯನ್ನು ಪೆÇಲೀಸರು ಕೈಗೊಂಡಿ ದ್ದಾರೆ. ತನಿಖೆ ಪ್ರಗತಿಯಲ್ಲಿದೆ.

Facebook Comments

Sri Raghav

Admin