ಡಿಜೆ ಹಳ್ಳಿ ಗಲಭೆ ವೇಳೆ ಪೊಲೀಸರ ಕೈ ಕೈಕಟ್ಟಿಹಾಕಿತ್ತು ಕೊರೋನಾ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.14- ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆ ಪ್ರಕರಣ ಹತ್ತಿಕ್ಕುವಲ್ಲಿ ಪೊಲೀಸರು ಯಾವುದೇ ವಿಳಂಬ ಮಾಡಿಲ್ಲ. ಆದರೆ, ಸಕಾಲಕ್ಕೆ ಸೂಕ್ತ ಬಂದೋಬಸ್ತ್ ಮಾಡುವಲ್ಲಿ ಸ್ವಲ್ಪ ಏರುಪೇರಾಗಿರುವುದಕ್ಕೆ ಕೊರೊನಾವೇ ಕಾರಣ ಎಂಬ ಮಾಹಿತಿ ಹೊರಬಿದ್ದಿದೆ.

ಘಟನೆ ನಡೆದ ಆಗಸ್ಟ್ 11ರ ವೇಳೆಗೆ ಪೂರ್ವ ವಿಭಾಗದಲ್ಲಿ 41 ಪೊಲೀಸರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿತ್ತು. 120ಕ್ಕೂ ಹೆಚ್ಚು ಮಂದಿ ಪೊಲೀಸರು ಹೋಂ ಕ್ವಾರಂಟೈನ್‍ನಲ್ಲಿದ್ದರು.

50 ವರ್ಷಕ್ಕೂ ಮೇಲ್ಪಟ್ಟ ವಯಸ್ಸಿನ 120ಕ್ಕೂ ಹೆಚ್ಚು ಪೊಲೀಸರು ಮನೆಯಿಂದಲೇ ಕರ್ತವ್ಯ ನಿರ್ವಹಿಸುತ್ತಿದ್ದರು. ಗಲಭೆ ನಡೆದ ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿಯ ತಲಾ ಐವರು ಪೊಲೀಸರಿಗೆ ಕೊರೊನಾ ಸೋಂಕು ತಗುಲಿತ್ತು. ಆಗಸ್ಟ್ 11ರೊಳಗೆ ನಗರದ 1622 ಪೊಲೀಸರಿಗೆ ಪಾಸಿಟಿವ್ ಕಾಣಿಸಿಕೊಂಡಿದ್ದು, ಅವರು ಕರ್ತವ್ಯದಲ್ಲಿರಲಿಲ್ಲ.

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಠಾಣೆಗಳಲ್ಲೂ ಸಾಮಾಜಿಕ ಅಂತರ ಕಾಯ್ದುಕೊಂಡು ಕರ್ತವ್ಯ ನಿರ್ವಹಿಸುವ ಅನಿವಾರ್ಯತೆಯಲ್ಲಿದ್ದರು ಪೊಲೀಸರು.

ಠಾಣೆಗಳಿಗೆ ಗಲಭೆಕೋರರು ಮುತ್ತಿಗೆ ಹಾಕುವ ಸಂದರ್ಭ ಪೊಲೀಸರ ಪಾಳಿ ಬದಲಾವಣೆ ಸಮಯವಾಗಿತ್ತು. ಹಗಲು ಕರ್ತವ್ಯದಲ್ಲಿದ್ದ ಪೊಲೀಸರು ಮನೆಗೆ ತೆರಳುತ್ತಿದ್ದರು. ರಾತ್ರಿ ಪಾಳಿಯ ಪೆಪೊಲೀಸರು ಆಗಷ್ಟೇ ಕರ್ತವ್ಯಕ್ಕೆ ಬರುತ್ತಿದ್ದರು. ಅದರಲ್ಲೂ ಗಲಭೆಕೋರರು ಗಾಂಜಾ ಸೇವಿಸಿ ಠಾಣೆಗೆ ಮುತ್ತಿಗೆ ಹಾಕುತ್ತಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ.

ಕೊರೊನಾ ಕಾರಣದಿಂದಾಗಿ ಗಲಭೆ ಉಂಟಾದ ಸಂದರ್ಭದಲ್ಲಿ ಸಕಾಲಕ್ಕೆ ಪೆÇಲೀಸರು ಸನ್ನದ್ಧರಾಗಲು ಸಾಧ್ಯವಾಗಲಿಲ್ಲವೆ ಹೊರತು ಕರ್ತವ್ಯದಲ್ಲಿ ಯಾವುದೇ ವಿಳಂಬವಾಗಿರಲಿಲ್ಲ ಎಂದು ಹಿರಿಯ ಪೊಲೀಸ್ ಅಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಯಾವುದೇ ಗಲಭೆ ಕೈ ಮೀರಿದಾಗ ಪೊಲೀಸರು ಮೊದಲು ಲಾಠಿಚಾರ್ಜ್ ಮಾಡಬೇಕು. ಅದಕ್ಕೂ ಜಗ್ಗದಿದ್ದಾಗ ಅಶ್ರುವಾಯು ಪ್ರಯೋಗ ಮಾಡಿ ಗಲಭೆಕೋರರನ್ನು ಚದುರಿಸಬೇಕು. ಆದರೂ ದಾಂಧಲೆ ಹೆಚ್ಚಾಗಿ ಜೀವಹಾನಿ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾಗುವ ಸಾಧ್ಯತೆ ಇದ್ದಾಗ ಮಾತ್ರ ಪೆÇಲೀಸರಿಗೆ ಗುಂಡು ಹಾರಿಸಲು ಅವಕಾಶವಿದೆ.

ಕೊರೊನಾ ಕಾರಣದಿಂದಾಗಿ ಮೊದಲು ಪೊಲೀಸರು ಸಿದ್ಧತೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೂ ಎಚ್ಚೆತ್ತುಕೊಂಡ ಪೊಲೀಸರು ಅಕ್ಕಪಕ್ಕದ ಠಾಣೆಗಳ ಪೊಲೀಸರನ್ನೂ ಕರೆಸಿಕೊಂಡರು.

ಸ್ಥಳಕ್ಕೆ ಆಗಮಿಸಬೇಕಾದ ಕೆಎಸ್‍ಆರ್‍ಪಿ ತುಕಡಿಗಳನ್ನು ಹಾಗೂ ನಗರದ ವಿವಿಧ ವಿಭಾಗಗಳಿಂದ ಬರುತ್ತಿದ್ದ ಹಿರಿಯ-ಕಿರಿಯ ಅಕಾರಿಗಳು ಸ್ಥಳಕ್ಕೆ ಬಾರದಂತೆ ರಸ್ತೆಯನ್ನು ಕಿಡಿಗೇಡಿಗಳು ಬಂದ್ ಮಾಡಿದ್ದರು.

ಹೀಗಾಗಿ ಪರಿಸ್ಥಿತಿ ಕೈ ಮೀರುವಂತಾಯಿತೇ ಹೊರತು ಪೊಲೀಸರ ಕಾರ್ಯಾಚರಣೆಯಲ್ಲಿ ಯಾವುದೇ ವಿಳಂಬವಾಗಿಲ್ಲ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗಿದೆ.

Facebook Comments

Sri Raghav

Admin