ಡಿಜೆಹಳ್ಳಿ ಮತ್ತು ಕೆಜಿಹಳ್ಳಿ ಗಲಭೆ ಪ್ರಕರಣದಲ್ಲಿ ಈವರೆಗೆ 287 ಆರೋಪಿಗಳು ಅರೆಸ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.15- ಡಿಜೆಹಳ್ಳಿ ಮತ್ತು ಕೆಜಿಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಬೆಂಕಿ ಹಚ್ಚಿ ನಡೆಸಿದ ದಾಂಧಲೆಗೆ ಸಂಬಂಧಪಟ್ಟಂತೆ 42 ಎಫ್‍ಐಆರ್‍ಗಳು ದಾಖಲಾಗಿದ್ದು, ಒಟ್ಟು 287 ಆರೋಪಿಗಳನ್ನು ಬಂಧಿಸಲಾಗಿದೆ. ಕಳೆದ ರಾತ್ರಿ ಸಿಸಿಬಿ ಮತ್ತು ಪೂರ್ವ ವಿಭಾಗದ ವಿಶೇಷ ತಂಡಗಳು ಕಾರ್ಯಾಚರಣೆ ನಡೆಸಿ ಗಲ್ಲಿಗಲ್ಲಿಗಳಿಗೆ ನುಗ್ಗಿ 80 ಆರೋಪಿಗಳನ್ನು ಬಂಧಿಸಲಾಗಿದೆ. .

ಕಾರ್ಪೊರೇಟರ್ ಸತೀಶ್ ಸೇರಿದಂತೆ ನಿನ್ನೆಯವರೆಗೆ 207 ಮಂದಿಯನ್ನು ಬಂಸಲಾಗಿದೆ. ಗಲಭೆ ನಂತರ ನಗರದಿಂದ ಓಡಿಹೋಗಿ ತಲೆಮರೆಸಿಕೊಂಡಿರುವ ಗಲಭೆಕೋರರ ಬಂಧನಕ್ಕೆ ವಿಶೇಷ ತಂಡಗಳು ತೀವ್ರ ತನಿಖೆ ನಡೆಸುತ್ತಿವೆ.

ಬಂತ ಆರೋಪಿಗಳ ಮೊಬೈಲ್‍ಗಳನ್ನು ಪೊಲೀಸರು ಪರಿಶೀಲನೆ ಮಾಡಿದಾಗ ಮೊಬೈಲ್ ಕರೆಗಳ ಪಟ್ಟಿ ಮತ್ತು ಮೆಸೇಜ್‍ಗಳನ್ನು ಡಿಲೀಟ್ ಮಾಡಿರುವುದು ಕಂಡುಬಂದಿದೆ.

ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರು ನಿನ್ನೆ ಸಂಜೆ ದೂರು ನೀಡಿದ್ದು, ಒಟ್ಟು 42 ಎಫ್‍ಐಆರ್‍ಗಳು ದಾಖಲಾಗಿವೆ. ಅಖಂಡ ಶ್ರೀನಿವಾಸಮೂರ್ತಿ ಮತ್ತು ಅವರ ಸಂಬಂಕರ ಮನೆಯಲ್ಲಿ ಹಣ ಮತ್ತು ಆಭರಣ ದೋಚಿರುವ ಬಗ್ಗೆ ಅವರು ದೂರು ನೀಡಿದ್ದು, ಆ ಬಗ್ಗೆಯೂ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.

ಗಲಭೆಕೋರರು ಅಂದು ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿ ಹಚ್ಚಿದ್ದರು. ವಾಹನಗಳ ಮಾಲೀಕರು ಈ ಬಗ್ಗೆ ಕೆಜಿಹಳ್ಳಿ ಮತ್ತು ಡಿಜೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತಿದ್ದಾರೆ.

ಕಲ್ಲು ತೂರಾಟ ಮಾಡಿ ಬೆಂಕಿಹಚ್ಚಿ ಹಲವು ಮನೆಗಳಿಗೆ ಹಾನಿ ಆಗಿರುವ ಬಗ್ಗೆಯೂ ಮಾಲೀಕರು ಠಾಣೆಗಳಿಗೆ ತೆರಳಿ ದೂರು ನೀಡುತ್ತಿದ್ದು, ಕೆಜಿಹಳ್ಳಿ ಮತ್ತು ಡಿಜೆಹಳ್ಳಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.

Facebook Comments

Sri Raghav

Admin