ಡಿಜೆ ಹಳ್ಳಿ ಗಲಭೆ : ಬಂಧಿತರಲ್ಲಿ 84 ಪುಂಡರು ಬಳ್ಳಾರಿ ಜೈಲಿಗೆ ಶಿಫ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.14- ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆಯಲ್ಲಿ ಬಂತರಾದ 84 ಜನ ಆರೋಪಿಗಳನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ.

ಇಂದು ಮುಂಜಾನೆ ಮೂರು ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲಿ ಸಿಎಆರ್ ಸಿಬ್ಬಂದಿಗಳ ಭಾರೀ ಬಂದೋಬಸ್ತ್ ನಡುವೆ ಬೆಂಗಳೂರು ಪೊಲೀಸರು ಬಳ್ಳಾರಿ ಕಾರಾಗೃಹಕ್ಕೆ ಕರೆತಂದರು.

ಹಲಸೂರು ಠಾಣೆ ಸಿಪಿಐ ನೇತೃತ್ವದಲ್ಲಿ ಎರಡು ಭದ್ರತಾ ವಾಹನಗಳ ಜತೆ ಮೂರು ಬಸ್‍ಗಳಲ್ಲಿ ಎಲ್ಲ 84 ಆರೋಪಿಗಳನ್ನು ಬಳ್ಳಾರಿ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಯಿತು.

ಜೈಲು ಅಕಾರಿಗಳಿಗೆ ಮಾಹಿತಿ ಇಲ್ಲದ ಕಾರಣ ಜೈಲು ಒಳಗಡೆ ಇವರನ್ನು ಅಡ್ಮಿಷನ್ ಮಾಡಿಕೊಳ್ಳುವುದು ಕೊಂಚ ವಿಳಂಬವಾಯಿತು. ವೈದ್ಯಕೀಯ ಪರೀಕ್ಷೆ ಮತ್ತು ಕೋವಿಡ್ ಟೆಸ್ಟ್ ನಂತರವಷ್ಟೇ ಈ ಆರೋಪಿಗಳನ್ನು ಜೈಲಿನೊಳಗೆ ಬಿಟ್ಟುಕೊಳ್ಳಲಾಯಿತು.

Facebook Comments

Sri Raghav

Admin