ಡಿಜೆಹಳ್ಳಿ ಗಲಭೆ : ಬಿಬಿಎಂಪಿ ಸದಸ್ಯೆಯೊಬ್ಬರ ಪತಿ ಬಂಧನ, ಕಾಂಗ್ರೆಸ್ ಮೇಲೆ ಬಿಜೆಪಿ ಟ್ವೀಟ್ ಅಟ್ಯಾಕ್
ಬೆಂಗಳೂರು,ಆ.14-ಡಿಜೆಹಳ್ಳಿ ಮತ್ತು ಕೆಜಿಹಳ್ಳಿಯಲ್ಲಿ ನಡೆದಿರುವ ಕೋಮುಗಲಭೆ ಸಂಬಂಧ ಬಿಬಿಎಂಪಿ ಸದಸ್ಯೆಯೊಬ್ಬರ ಪತಿಯನ್ನು ಪೆÇಲೀಸರು ಬಂಸುತ್ತಿದ್ದಂತೆ ಕಾಂಗ್ರೆಸ್ ವಿರುದ್ಧ ಬಿಜೆಪಿ ಮತ್ತೆ ಮುಗಿಬಿದ್ದಿದೆ.
ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರು ಸರಣಿ ಟ್ವೀಟ್ಗಳನ್ನು ಮಾಡಿದ್ದಾರೆ.
ಪ್ರಕರಣದಲ್ಲಿ ಬಿಬಿಎಂಪಿ ಸದಸ್ಯರ ಪತಿಯನ್ನು ಬಂಸಿದ್ದು, ಈಗ ನಿಮ್ಮ ಪಕ್ಷದ ನಿಲುವೇನು ಎಂದು ಸಚಿವರಾದಿಯಾಗಿ ಬಿಜೆಪಿ ಮುಖಂಡರು ಸಾಲು ಸಾಲು ಪ್ರಶ್ನೆ ಮಾಡಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಟ್ವೀಟ್ ಮಾಡಿದ್ದು, ಗಲಭೆ ಸಂಬಂಧ ಕಾಂಗ್ರೆಸ್ ಪಕ್ಷದ ಮಹಿಳಾ ಬಿಬಿಎಂಪಿ ಸದಸ್ಯರ ಪತಿ ಖಲೀಂ ಪಾಷಾ ಹಾಗೂ ಎಸ್ಡಿಪಿಐನ ನಾಲ್ವರು ಪದಾಕಾರಿಗಳನ್ನು ಬಂಸಲಾಗಿದೆ. ಈವರೆಗೂ ಕಾಂಗ್ರೆಸ್ ಈ ಪ್ರಕರಣವನ್ನು ವಿಷಯಾಂತರ ಮಾಡಲು ಪ್ರಯತ್ನಿಸುತ್ತಿದೆ ವಿನಃ ಘಟನೆಯನ್ನು ಖಂಡಿಸುತ್ತಿಲ್ಲ.
ಮುಂಬರುವ ಬಿಬಿಎಂಪಿ ಚುನಾವಣೆ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದೆ. ಹೀಗಾಗಿ ಖಂಡಿಸುತ್ತಿಲ್ಲ. ಕಾಂಗ್ರೆಸ್ ಮತ್ತೊಮ್ಮೆ ದಲಿತ ವಿರೋ ಎಂಬುದು ಸಾಬೀತಾಗಿದೆ ಎಂದು ಬರೆದಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ ಗಲಭೆಯನ್ನು ಕಾಂಗ್ರೆಸ್ ಖಂಡಿಸುತ್ತಿಲ್ಲ. ತನ್ನದೇ ಪಕ್ಷದ ದಲಿತ ಶಾಸಕನ ಮೇಲೆ ಹಲ್ಲೆ ನಡೆದಿದ್ದರೂ ಘಟನೆಯನ್ನು ಖಂಡಿಸಿಲ್ಲ. ಆದಿ ಶಂಕರಚಾರ್ಯರ ಪ್ರತಿಮೆಯನ್ನು ವಿರೂಪಗೊಳಿಸಿದ್ದರೂ ಖಂಡಿಸುತ್ತಿಲ್ಲ.
ಕರ್ನಾಟಕ ಕಾಂಗ್ರೆಸ್ ಓಲೈಕೆ ರಾಜಕಾರಣ ಮಾಡುವ ತನ್ನ ಹಳೆಯ ಪ್ರವೃತ್ತಿಯನ್ನು ಮುಂದುವರೆಸಿದೆ. ಈಗಲೂ ಅದು ತನ್ನ ದಲಿತ ವಿರೋ ನೀತಿಯನ್ನು ಮುಂದುವರೆಸಿದೆ ಎಂದು ಟ್ವಿಟರ್ನಲ್ಲಿ ಆಪಾದಿಸಿದ್ದಾರೆ.
ಉನ್ನತ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕೂಡ ಟ್ವಿಟ್ ಮಾಡಿದ್ದು, ಡಿಜೆಹಳ್ಳಿ, ಕೆಜಿಹಳ್ಳಿ ಗಲಭೆಯಲ್ಲಿಕಾಂಗ್ರೆಸ್ ಪಕ್ಷದ ಮುಖವಾಡ ಕಳಚಿದೆ. ಕ್ರೌರ್ಯದ ಮನಃಸ್ಥಿತಿಯ ದ್ಯೋತಕವಾಗಿ ಪುಂಡಾಟಿಕೆ ಮೆರೆದಿದ್ದ ಬಿಬಿಎಂಪಿ ಸದಸ್ಯೆ ಇರ್ಷಾದ್ ಬೇಗಂ ಪತಿ ಕಲೀಂಪಾಷರನ್ನುಸಿಸಿಬಿ ಪೊಲೀಸರು ಬಂಸಿದ್ದಾರೆ. ಕೀಚಕರ ಹೆಡೆಮುರಿಕಟ್ಟುವಲ್ಲಿ ನಮ್ಮಸರ್ಕಾರ ಸಮರ್ಥವಿದೆ. ಕಾಂಗ್ರೆಸ್ನವರಿಗೆ ಈಗಲಾದರೂ ಸತ್ಯದ ಅರಿವಾಯಿತೇ ಎಂದು ಪ್ರಶ್ನಿಸಿದ್ದಾರೆ.