ಶಾಕಿಂಗ್ : ಡಿ.ಜೆ.ಹಳ್ಳಿ ಗಲಭೆ ಕುರಿತು ಭಯಾನಕ ಸತ್ಯಗಳನ್ನು ಬಿಚ್ಚಿಟ್ಟ ವರದಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.13- ನಗರದ ಕಾಡುಗೊಂಡನಹಳ್ಳಿ ಮತ್ತು ದೇವರಜೀವನಹಳ್ಳಿಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೊಡ್ಡ ಮಟ್ಟದಲ್ಲಿ ಕೋಮುಗಲಭೆ ನಡೆಸಲು ಹಲವು ದಿನಗಳಿಂದ ಸಂಘಟನೆಗಳು ಪೂರ್ವ ತಯಾರಿ ನಡೆಸಿರುವುದು ಬೆಳಕಿಗೆ ಬಂದಿದೆ.

ಘಟನೆ ಸಂಬಂಧ ಹಿರಿಯ ಪೊಲೀಸ್ ಅಕಾರಿಯೊಬ್ಬರು ಗೃಹ ಸಚಿವರಿಗೆ ವಿಸ್ತೃತ ವರದಿಯೊಂದನ್ನು ನೀಡಿದ್ದು, ಕೆಲವು ಭಯಾನಕ ಸತ್ಯಗಳನ್ನು ಹೊರಹಾಕಿದ್ದಾರೆ.

ಈ ಹಿಂದೆ ಮಂಗಳೂರು, ಮೈಸೂರು, ಮಡಿಕೇರಿ, ಬೆಳಗಾವಿ, ಹುಬಳ್ಳಿ, ಧಾರವಾಡ, ಶಿವಮೊಗ್ಗ ಸೇರಿದಂತೆ ರಾಜ್ಯದ ನಾನಾ ಕಡೆ ನಡೆದ ಕೋಮುಗಲಭೆಯಲ್ಲಿ ಶಾಮೀಲಾಗಿದ್ದ ಸಂಘಟನೆಯ ಮುಖಂಡರು ಈ ಗಲಭೆಯಲ್ಲೂ ಶಾಮೀಲಾಗಿರುವುದು ಸ್ಪಷ್ಟವಾಗಿದೆ.

ಕಳೆದ ಹಲವು ದಿನಗಳಿಂದ ಬೆಂಗಳೂರಿನಲ್ಲಿ ಈ ಸಂಘಟನೆಯ ಮುಖಂಡರು ಕೋಮುಗಲಭೆ ಸೃಷ್ಟಿಸಲು ಕಾರಣಗಳನ್ನು ಹುಡುಕುತ್ತಿದ್ದರು. ಜಮ್ಮುಕಾಶ್ಮೀರಕ್ಕೆ ನೀಡಿದ್ದ 370ನೇ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ಹಿಂಪಡೆದಿದ್ದು, ತ್ರಿವಳಿ ತಲಾಕ್ ರದ್ದತಿ, ಅಯೋಧ್ಯೆಯ ವಿವಾದತ್ಮಕ ಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮುಂದಾಗಿರುವುದು ಈ ಸಂಘಟನೆಗಳ ಕೆಂಗೆಣ್ಣಿಗೆ ಗುರಿಯಾಗಿತ್ತು.

ಹೀಗಾಗಿ ಕಾಸ್ಮೋ ಪಾಲಿಟಿನ್ ಖ್ಯಾತಿಯ ಬೆಂಗಳೂರಿನಲ್ಲಿ ಕೋಮುಗಲಭೆ ನಡೆಸಿದರೆ ಸಹಜವಾಗಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತದೆ ಎಂಬ ಕಾರಣಕ್ಕಾಗಿ ಸಂಘಟನೆಯ ಮುಖಂಡರು ವ್ಯವಸ್ಥಿತವಾಗಿ ಜಾಲ ರೂಪಿಸಿದ್ದರು.

ಮುಸ್ಲಿಮರ ಧಾರ್ಮಿಕ ಮುಖಂಡ ಮೊಹಮ್ಮದ್ ಪೈಗಂಬರ್‍ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡಲಾಗಿದೆ ಎಂಬುದು ಕೇವಲ ನೆಪವಷ್ಟೇ. ಗಲಭೆಗೆ ಕಾರಣ ಬೇಕಿತ್ತು. ಇದೇ ಸಮಯಕ್ಕೆ ಕಾಯುತ್ತಿದ್ದ ಸಂಘಟನೆಗಳು ಮಂಗಳವಾರ ವ್ಯವಸ್ಥಿತವಾಗಿ ತಾವು ಅಂದುಕೊಂಡಂತೆ ಗಲಭೆ ಎಬ್ಬಿಸಿದ್ದಾರೆ.

ಕಣಿವೆ ರಾಜ್ಯ ಜಮ್ಮುಕಾಶ್ಮೀರದಲ್ಲಿ ಭಯೋತ್ಪಾದಕ ಸಂಘಟನೆಗಳು, ಭದ್ರತಾ ಪಡೆ ಮತ್ತು ಪೊಲೀಸರ ಮೇಲೆ ಸಾಮಾನ್ಯವಾಗಿ ರಾತ್ರಿ ಇಲ್ಲವೇ ಮುಂಜಾನೆ ವೇಳೆ ದಾಳಿ ನಡೆಸುತ್ತಾರೆ. ಇದೇ ಮಾದರಿಯನ್ನು ಅನುಸರಿಸಿರುವ ದುಷ್ಕರ್ಮಿಗಳು ಪೊಲೀಸ್ ಠಾಣೆ ಮೇಲೆಯೇ ಸಂಚು ರೂಪಿಸಿ ದಾಳಿ ನಡೆಸಿದ್ದಾರೆ.

# ಪೊಲೀಸರನ್ನೇ ಕೊಲ್ಲಿ:
ಮೂಲಗಳ ಪ್ರಕಾರ ಕೇರಳದಿಂದ ಬೆಂಗಳೂರಿಗೆ ಆಗಮಿಸಿದ್ದ ಸಂಘಟನೆಗಳ ಕಾರ್ಯಕರ್ತರು ಎಲ್ಲಿ ಗಲಭೆ ನಡೆಸಬೇಕೆಂಬುದನ್ನು ಮೊದಲೇ ತೀರ್ಮಾನಿಸಿದ್ದರು.

ತಮ್ಮ ಸಮುದಾಯ ಹೆಚ್ಚಾಗಿರುವ ಕಡೆ ಗಲಭೆ ಸೃಷ್ಟಿಸಿದರೆ ಬೆಂಬಲ ಸಿಗುತ್ತದೆ ಎಂಬ ಕಾರಣಕ್ಕಾಗಿಯೇ ಮುಸ್ಲಿಂ ಬಾಹುಳ್ಯವಿರುವ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯನ್ನೇ ಆಯ್ದುಕೊಂಡಿದ್ದಾರೆ.

ಸಂಘಟನೆಯ ಕೆಲವು ಮುಖಂಡರು ವಾಟ್ಸಪ್ ಮೂಲಕ ಮಾಹಿತಿ ವಿನಿಮಯ ಮಾಡಿಕೊಂಡು ಮಂಗಳವಾರ ರಾತ್ರಿಯೇ ಗಲಭೆ ನಡೆಸಲೇಬೇಕೆಂದು ತೀರ್ಮಾನಕ್ಕೆ ಬಂದಿದ್ದರು.

ಪೆÇಲೀಸರು ಗುಂಡು ಹಾರಿಸಿದರೂ ಸರಿಯೇ ಪ್ರಾಣಕ್ಕೆ ಅಂಜದೇ ಮುನ್ನುಗ್ಗಿ ಠಾಣಾಕಾರಿಗಳ ಮೇಲೆಯೇ ಹಲ್ಲೆ ನಡೆಸಬೇಕೆಂದು ಸಂಘಟನೆಯ ಮುಖಂಡರು ಸೂಚಿಸಿದ್ದರು ಎನ್ನಲಾಗಿದೆ.

ಸುಮಾರು 3000ಕ್ಕೂ ಹೆಚ್ಚು ಕಾರ್ಯಕರ್ತರು ಒಂದೆಡೆ ಸೇರಿ ಮಾರಕಾಸ್ತ್ರಗಳಿಂದ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಸಾರ್ವಜನಿಕರ ಆಸ್ತಿಪಾಸ್ತಿ, ವಾಹನಗಳಿಗೆ ಬೆಂಕಿ ಹಚ್ಚಿದ್ದಲ್ಲದೆ ಠಾಣೆಗೆ ನುಗ್ಗಿ ಶಸ್ತ್ರಾಸ್ತ್ರಗಳನ್ನು ಅಪಹರಿಸಲು ಸಂಚು ರೂಪಿಸಿದ್ದರು.

ದುಷ್ಕರ್ಮಿಗಳು ಠಾಣೆಗೆ ನುಗ್ಗುತ್ತಿದ್ದಂತೆ ಆತ್ಮರಕ್ಷಣೆಗಾಗಿ ಪೊಲೀಸರು ಗಾಳಿ ಗುಂಡು ಹಾರಿಸಿದರು. ಇಷ್ಟಕ್ಕೂ ಜಗ್ಗದಿದ್ದಾಗ ಅನಿವಾರ್ಯವಾಗಿ ಗೋಲಿಬಾರ್ ಮಾಡಿದ್ದರಿಂದ ಹೆದರಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಒಂದು ವೇಳೆ ಪೊಲೀಸರು ಸಮಯಪ್ರಜ್ಞೆ ತೋರದಿದ್ದರೆ ಬೆಂಗಳೂರು ಹಿಂದೆಂದೂ ಕಾಣದ ಕೋಮುಗಲಭೆಗೆ ಸಾಕ್ಷಿಯಾಗುತ್ತಿತ್ತು ಎಂದು ತಿಳಿದುಬಂದಿದೆ.

ದುಷ್ಕರ್ಮಿಗಳು ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸುವ ದುರುದ್ದೇಶದಿಂದಲೇ ಕೈಯಲ್ಲಿ ದೊಣ್ಣೆ, ಬಡಗಿ, ಹಾಕಿ ಸ್ಟಿಕ್, ಪೆಟ್ರೋಲ್‍ಬಾಂಬ್ ಹಾಗು ಮಾರಕಾಸ್ತ್ರಗಳನ್ನು ಹಿಡಿದುಕೊಂಡೇ ದಾಳಿಗೆ ನುಗ್ಗಿದ್ದರು.

ಇತ್ತ ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತಿದ್ದಂತೆ ಮತ್ತೊಂದು ಗುಂಪು ಶಾಸಕ ಅಖಂಡ ಶ್ರೀನಿವಾಸ್ ಅವರ ಮನೆ, ಸಹೋದರಿ ನಿವಾಸ ಮತ್ತು ಸಂಬಂ ನವೀನ್ ಅವರನ್ನು ಮುಗಿಸಲೇಬೇಕೆಂಬ ತೀರ್ಮಾನಕ್ಕೆ ಬಂದಿತ್ತು.

ಒಂದು ವೇಳೆ ಅಖಂಡ ಶ್ರೀನಿವಾಸ್‍ಮೂರ್ತಿ ಏನಾದರೂ ತಕ್ಷಣವೇ ಅವರ ಕುಟುಂಬದವರನ್ನು ಮನೆಯಿಂದ ಆಚೆ ಹೋಗದಿದ್ದಿದ್ದರೆ ಜೀವಂತವಾಗಿ ಸುಟ್ಟು ಹೋಗುವ ಸಾಧ್ಯತೆಯೂ ಇತ್ತು.

ಪೊಲೀಸರ ಬಿಗಿಭದ್ರತೆಯಲ್ಲಿ ಮನೆಯಿಂದ ಆಚೆ ಬಂದ ಪರಿಣಾಮ ಅನಾಹುತದಿಂದ ಪಾರಾಗಿದ್ದಾರೆ. ಈ ಎಲ್ಲ ಘಟನೆಗೂ ಮೂರು ಸಂಘಟನೆಗಳು, ಅದರ ಮುಖಂಡರು ಮತ್ತು ಕೆಲವು ಬಿಬಿಎಂಪಿ ಸದಸ್ಯರ ಕುಮ್ಮಕ್ಕೇ ಕಾರಣ ಎಂದು ಅನುಮಾನ ವ್ಯಕ್ತವಾಗಿದೆ.

Facebook Comments

Sri Raghav

Admin