ಬೆಂಗಳೂರಿಗೆ ಬೆಂಕಿಯಿಟ್ಟು ಆಂಧ್ರದಲ್ಲಿ ಅಡಗಿ ಕುಳಿತ ಡಿಜೆಹಳ್ಳಿ ಪುಂಡರು..!?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.21- ನಗರದ ಕೆಜಿಹಳ್ಳಿ ಮತ್ತು ಡಿಜೆಹಳ್ಳಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮನೆಗಳು, ವಾಹನಗಳು, ಠಾಣೆಗಳ ಮೇಲೆ ಕಲ್ಲು ತೂರಾಟ ನಡೆಸಿ ಬೆಂಕಿ ಹಚ್ಚಿ ದಾಂದಲೆ ನಡೆಸಿರುವ ಗಲಭೆಕೋರರು ಕೇರಳ ಅಲ್ಲದೆ ಆಂಧ್ರಪ್ರದೇಶದಲ್ಲೂ ತಲೆ ಮರೆಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ನಗರದ ವಿಶೇಷ ಪೊಲೀಸ್ ತಂಡ ಗಳು ಆರೋಪಿಗಳಿಗಾಗಿ ವ್ಯಾಪಕ ಶೋಧ ನಡೆಸುತ್ತಿವೆ. ಈ ಗಲಭೆ ಆದ ನಂತರ ಕೆಲವರು ಕೇರಳಕ್ಕೆ ಹೋಗಿ ತಲೆ ಮರೆಸಿಕೊಂಡಿದ್ದಾರೆ.

ಇನ್ನು ಕೆಲವರು ನಮ್ಮ ರಾಜ್ಯದ ಗಡಿ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬಳ್ಳಾರಿ ಮುಂತಾದ ಜಿಲ್ಲೆಗಳಲ್ಲಿ ತಮ್ಮ ಸಂಬಂಕರ ಮನೆಗಳಲ್ಲಿ ತಲೆ ಮರೆಸಿಕೊಂಡಿದ್ದಾರೆ ಎಂದು ಗೊತ್ತಾಗಿದೆ.

ಈ ಹಿನ್ನೆಲೆಯಲ್ಲಿ ಪೊಲೀಸರ ತಂಡಗಳು ಆಂಧ್ರಪ್ರದೇಶ ಮತ್ತು ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಆರೋಪಿಗಳ ಬಂಧನಕ್ಕೆ ತೆರಳಿವೆ. ಈಗಾಗಲೇ ಕೇರಳಕ್ಕೆ ತೆರಳಿರುವ ತಂಡಗಳು ತಲೆ ಮರೆಸಿಕೊಂಡಿರುವ ಗಲಭೆಕೋರರ ಬಂಧನಕ್ಕಾಗಿ ತೀವ್ರ ಶೋಧ ನಡೆಸುತ್ತಿವೆ.

ಸಿಸಿಬಿ ಪೊಲೀಸರು ಹಾಗೂ ಪೂರ್ವ ವಿಭಾಗದ ಪೊಲೀಸರ ತಂಡಗಳು ಗಲಭೆಗಳಲ್ಲಿ ಭಾಗವಹಿಸಿರುವ ಆರೋಪಿಗಳ ಪಟ್ಟಿ ಸಿದ್ಧಪಡಿಸಿಕೊಂಡು ಹಗಲು-ರಾತ್ರಿ ಎನ್ನದೆ ಶೋಧ ಕಾರ್ಯ ನಡೆಸುತ್ತಿವೆ.

ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ತಂಡಗಳು ಶೋಧ ಕಾರ್ಯದಲ್ಲಿ ನಿರತವಾಗಿದ್ದರೆ, ಇನ್ನು ಕೆಲವು ತಂಡಗಳು ಕೆಜಿಹಳ್ಳಿ, ಡಿಜೆಹಳ್ಳಿ ಠಾಣೆ ವ್ಯಾಪ್ತಿಯಲ್ಲಿನ ಆರೋಪಿಗಳ ಮನೆ ಬಳಿ ತೆರಳಿ ಅವರಿಗಾಗಿ ಶೋಧ ಕಾರ್ಯ ನಡೆಸುತ್ತಿವೆ.

ಪೊಲೀಸರ ತಂಡಗಳು ಆರೋಪಿಗಳನ್ನು ಬಂಸಲು ಹೋದಾಗ ಕೆಲ ಮನೆಗಳಿಗೆ ಬೀಗ ಹಾಕಿರುವುದು ಕಂಡು ಬಂದಿದೆ. ಇನ್ನು ಕೆಲವು ಮನೆಗಳವರು ಆರೋಪಿಗಳು ಮನೆಯಲ್ಲಿ ಇಲ್ಲ. ಎಲ್ಲೋ ಹೊರ ಹೋಗಿದ್ದಾರೆ ಎಂದು ಹೇಳುತ್ತಿರುವುದು ಕಂಡುಬಂದಿದೆ. ಹಾಗಾಗಿ ಪೆÇಲೀಸ್ ತಂಡಗಳು ಆರೋಪಿಗಳಿಗಾಗಿ ವ್ಯಾಪಕ ಶೋಧ ಕಾರ್ಯ ನಡೆಸುತ್ತಿವೆ.

Facebook Comments

Sri Raghav

Admin