ಕಲ್ಲಿಕೋಟೆ ಏರ್ ಪೋರ್ಟ್‍ಗೆ ಅಗಲ ದೇಹದ ವಿಮಾನಗಳ ನಿರ್ಬಂಧ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ :  ಹದಿನೆಂಟು ಮಂದಿ ಸಾವಿಗೀಡಾಗಿ ಅನೇಕರು ಗಾಯಗೊಂಡ ಕೇರಳದ ಕಲ್ಲಿಕೋಟೆ (ಕೋಳಿಕ್ಕೋಡ್) ಏರ್ ಪೋರ್ಟ್‍ ಗೆ ಮುಂಗಾರು ಋತುವಿನಲ್ಲಿ ಅಗಲ ದೇಹದ ವಿಮಾನಗಳ ಆಗಮನ ಮತ್ತು ನಿರ್ಗಮನವನ್ನು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ನಿಷೇಸಿದೆ.

ಇದೇ ವೇಳೆ ಮಳೆಗಾಲದಲ್ಲಿ ವಿಮಾನ ಆಗಮನ ಮತ್ತು ನಿರ್ಗಮನಕ್ಕೆ ಅಪಾಯ ಎದುರಾಗಬಹುದಾದ ದೇಶದ ಇತರ ಏರ್ ಪೋರ್ಟ್‍ ಳ ಸ್ಥಿತಿಗತಿಗಳ ಬಗ್ಗೆಯೂ ಅಧ್ಯಯನ ನಡೆಸುವಂತೆ ಅಕಾರಿಗಳಿಗೆ ನಿರ್ದೇಶನಾಲಯ ಸೂಚನೆ ನೀಡಿದೆ.

ಈ ಮಧ್ಯೆ ವಿಮಾನ ಅಪಘಾತ ತನಿಖಾ ಮಂಡಳಿ (ಎಎಐಬಿ) ಕೋಳಿಕ್ಕೋಡ್ ವಿಮಾನ ದುರ್ಘಟನೆ ಬಗ್ಗೆ ತನಿಖೆ ತೀವ್ರಗೊಳಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಎಎಐಬಿ ಮುಖ್ಯಸ್ಥ ಅರಬಿಂದೋ ಅಂಡಾ ತನಿಖೆ ಪ್ರಗತಿಯಲ್ಲಿದೆ.

ದುರಂತದ ಬಗ್ಗೆ ಈಗಲೇ ಹೇಳಿಕೆ ನೀಡುವುದು ಅಪಕ್ವವಾಗುತ್ತದೆ. ತನಿಖೆ ಪೂರ್ಣಗೊಂಡ ನಂತರ ನಿಖರ ಕಾರಣ ತಿಳಿದುಬರಲಿದೆ ಎಂದರು.

ಏತನ್ಮಧ್ಯೆ ಕ್ಯಾಲಿಕಟ್ ಏರ್ ಪೋರ್ಟ್ ನಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಗಾಯಗೊಂಡಿದ್ದ 85 ಜನರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಏರ್ ಇಂಡಿಯಾ ಎಕ್ಸ್‍ಪ್ರೆಸ್ ಅಕಾರಿಗಳು ತಿಳಿಸಿದ್ದಾರೆ.

Facebook Comments

Sri Raghav

Admin