ಧೋನಿ ನಂ.7 ಜೆರ್ಸಿ ಸೀಕ್ರೆಟ್ ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

ಪ್ರತಿಯೊಬ್ಬ ಕ್ರೀಡಾಪಟುಗಳನ್ನು ಗುರುತಿಸಲೆಂದೇ ಅವರು ಧರಿಸುವ ಜೆರ್ಸಿ ಮೇಲೆ ನಂಬರ್‍ಗಳಿರುತ್ತದೆ, ಈ ನಂಬರ್‍ಗಳು ಆಯಾಯಾ ಆಟಗಾರರನ್ನು ಸೂಚಿಸುತ್ತದೆ, ಆದರೆ ಕೆಲವು ಆಟಗಾರರು ತಾವು ಕ್ರೀಡಾ ಲೋಕಕ್ಕೆ ಪಾರ್ದಾಪಣೆ ಮಾಡಿದ ದಿನವನ್ನು ಸೂಚಿಸಲೆಂದೋ, ಜಾತಕದ ಪ್ರಕಾರವೋ, ಅವರು ಗಳಿಸಿದ ಗರಿಷ್ಠ ರನ್‍ಗಳ ಸೂಚಕವನ್ನೂ ಕೂಡ ಆ ಜೆರ್ಸಿ ನಂಬರ್‍ಗಳು ಸೂಚಿಸುತ್ತದೆ.

ಕ್ರೀಡಾ ಲೋಕದಲ್ಲಿ ಜೆರ್ಸಿ ನಂ. 99, 45, 18, 10, 7 ಅಂಕಿಗಳು ವಿಶಿಷ್ಟ ಸಾಲಿನಲ್ಲಿ ನಿಲ್ಲುತ್ತದೆ ಅದಕ್ಕೆ ಆ ಆಟಗಾರರು ಮಾಡಿರುವ ಸಾಧನೆಯೇ ಸಾಕ್ಷಿ. ಈಗ ನಿವೃತ್ತಿ ಹೊಂದಿರುವ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರಸಿಂಗ್ ಹಾಗೂ ಸೋಟಕ ಆಟಗಾರ ಸುರೇಶ್‍ರೈನಾ ಧರಿಸುತ್ತಿದ್ದ ಜೆರ್ಸಿಗಳ ಹಿಂದೆಯೂ ಇಂತಹದೇ ಒಂದು ದಾಖಲೆಗಳು ಅಡಗಿವೆ.

ಮಹೇಂದ್ರಸಿಂಗ್ ಧೋನಿ ಧರಿಸುತ್ತಿದ್ದ ಜೆರ್ಸಿ ನಂ.7 ಅನ್ನು ಫುಟ್ಬಾಲ್ ಮಾಂತ್ರಿಕರಾದ ಕ್ರಿಸ್ಟಿಯಾನೋ ರೊನಾಲ್ಡೊ, ಡೇವಿಡ್ ಬೆಕ್ಯಾಂ, ಅವರು ಧರಿಸುತ್ತಿದ್ದರು. ಧೋನಿ, ರೊನಾಲ್ಡೊರ ಅಪ್ಪಟ ಅಭಿಮಾನಿಯಾಗಿದ್ದರಿಂದ ತಾವು ಕ್ರಿಕೆಟ್ ಅಂಗಳಕ್ಕೆ ಧುಮುಕಿದಾಗ ತಮ್ಮ ಜೆರ್ಸಿ ಸಂಖ್ಯೆಯಾಗಿ 7 ಅನ್ನು ಆಯ್ಕೆ ಮಾಡಿಕೊಂಡರು.

ಧೋನಿ ಜನಿಸಿದ್ದು ಜುಲೈ 7, 1981 ಇಲ್ಲಿ ತಿಂಗಳು ಹಾಗೂ ದಿನದಲ್ಲಿ 7 ಸಂಖ್ಯೆ ಬರುವುದು, ಇನ್ನೊಂದು ಮೂಲದ ಪ್ರಕಾರ ಧೋನಿ ಈ ಸಂಖ್ಯೆಯನ್ನು ಜ್ಯೋತಿಷಿಗಳ ಸೂಚನೆಯ ಮೇರೆಗೆ ಬಳಸಿಕೊಂಡಿದ್ದಾರೆ, ಆದ್ದರಿಂದಲೇ ಅವರು ಸ್ಥಾಪಿಸಿರುವ ಕಂಪೆನಿಗೆ ಸೆವೆನ್ ಎಂಬ ಹೆಸರನ್ನೇ ಇಟ್ಟಿದ್ದಾರೆ.

ಸುರೇಶ್‍ರೈನಾ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ್ದು 30 ಜುಲೈ 2005ರಂದು. ಅದರ ಧ್ಯೋತಕವಾಗಿಯೇ ರೈನಾ ಜೆರ್ಸಿ ನಂ 3 ಅನ್ನು ಆಯ್ಕೆ ಮಾಡಿಕೊಂಡಿದ್ದರು.

# ತಂದೆಗೆ ಗೌರವ ಸೂಚಿಸಿದ ಕೊಹ್ಲಿ:
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಧರಿಸಿರುವ ಜೆರ್ಸಿ ನಂ 18. ಅದು ಅವರ ತಂದೆ ಪ್ರೇಮ್ ಕೊಹ್ಲಿ ಅವರು ಸಾವನ್ನಪ್ಪಿದ ದಿನವನ್ನು ಸೂಚಿಸುತ್ತದೆ, ಅವರ ತಂದೆ 18 ಡಿಸೆಂಬರ್ 2006ರಂದು ಕೊಹ್ಲಿಯನ್ನು ಅಗಲಿದರು, ಅಂದಿನಿಂದಲೂ ತಂದೆಗೆ ಗೌರವ ಸೂಚಿಸುವ ಸಲುವಾಗಿ ಕೊಹ್ಲಿ ಜೆರ್ಸಿ ನಂಬರ್ 18 ಅನ್ನು ಆಯ್ಕೆ ಮಾಡಿಕೊಂಡರು.

# ಕ್ರಿಕೆಟ್ ದೇವರಿಗೆ ನಂಬರ್ 10 ಏಕೆ..?
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಆರಂಭಿಕ ಪಂದ್ಯಗಳಲ್ಲಿ 99 ನಂಬರ್‍ನ ಜೆರ್ಸಿ ತೊಡುತ್ತಿದ್ದರೂ, ತಮ್ಮ ಸರ್ ನೇಮ್‍ನ ಆಧಾರದ ಮೇಲೆ ಅವರು ನಂತರ ಟೆನ್(10) ತೆಂಡೂಲ್ಕರ್ ಆದರು.

# ಗಂಗೂಲಿ ನಂಬರ್ 1:
ಭಾರತ ತಂಡದ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುತ್ತಿದ್ದರಿಂದ ಬಿಸಿಸಿಐ ಅಧ್ಯಕ್ಷ ಸೌರವ್‍ಗಂಗೂಲಿ ತಮ್ಮ ಜೆರ್ಸಿ ನಂಬರ್ ಆಗಿ 1 ಅನ್ನು ಆಯ್ಕೆ ಮಾಡಿಕೊಂಡಿದ್ದರು, ನಂತರ 99 ನಂಬರ್ ಜೆರ್ಸಿ ಧರಿಸಿದ್ದ ದಾದಾ 2003ರ ವಿಶ್ವಕಪ್ ಸಮಯದಲ್ಲಿ ಜ್ಯೋತಿಷಿ ಸಂಜಯ್ ಜಿ. ಜುಮ್ಮನಿ ಅವರ ಸಲಹೆಯಂತೆ ತಮ್ಮ ಜೆರ್ಸಿ ನಂಬರ್ 24ಕ್ಕೆ ಬದಲಾಯಿಸಿಕೊಂಡರು. ಆ ವರ್ಷ ಭಾರತ ವಿಶ್ವಕಪ್‍ನ ರನ್ನರ್ ಆಗಿ ಹೊರಹೊಮ್ಮಿತ್ತು.

# ಅಮ್ಮ ಸೂಚಿಸಿದ ನಂಬರ್:
ಏಕದಿನ ಕ್ರಿಕೆಟ್‍ನಲ್ಲಿ 3 ದ್ವಿಶತಕ ಗಳಿಸಿರುವ ಟೀಂ ಇಂಡಿಯಾದ ಉಪನಾಯಕ ರೋಹಿತ್‍ಶರ್ಮಾಗೆ 9 ಲಕ್ಕಿ ನಂಬರ್. ಅಂಡರ್ 19 ವಿಶ್ವಕಪ್ ಸಮಯದಲ್ಲಿ ರೋಹಿತ್‍ಗೆ 19ನೆ ನಂಬರ್ ಸಿಗದಿದ್ದಾಗ ತನ್ನ ತಾಯಿಯ ಮಾತಿನಂತೆ 45 ಸಂಖ್ಯೆಯ ಜೆರ್ಸಿಯನ್ನು ಆಯ್ಕೆ ಮಾಡಿಕೊಂಡರು. 4 ಮತ್ತು 5 ನ್ನು ಕೂಡಿದರೆ 9 ಅಂಕಿ ಬರುವುದರಿಂದ ಇದು ಕೂಡ ರೋಹಿತ್‍ಗೆ ಲಕ್ಕಿ ಜೆರ್ಸಿಯಾಗಿದ್ದರಿಂದಲೇ ಅನೇಕ ದಾಖಲೆಗಳನ್ನು ನಿರ್ಮಿಸಲಾಗಿದೆ ಎಂಬುದು ರೋಹಿತ್‍ರ ಅನಿಸಿಕೆ.

# ಪ್ರೀತಿಯ ಮಡದಿಗೆ ಉಡುಗೊರೆ:
ಟೀಂ ಇಂಡಿಯಾದ ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ತಮ್ಮ ಕ್ರಿಕೆಟ್ ಜೀವನದ ಆರಂಭಿಕ ಪಂದ್ಯಗಳಲ್ಲಿ 5ನೆ ನಂಬರ್ ಜೆರ್ಸಿ ಧರಿಸುತ್ತಿದ್ದು, 2004ರ ಪಾಕಿಸ್ತಾನ ಸರಣಿಯಲ್ಲಿ ರಾಹುಲ್ 24 ನೆ ನಂಬರ್‍ಗೆ ವರ್ಗಾವಣೆಗೊಂಡರಾದರೂ ತಮ್ಮ ಪ್ರೀತಿಯ ಪತ್ನಿ ವಿಜೇತರ ಹುಟ್ಟುಹಬ್ಬದ ಸೂಚಕವಾಗಿ ಜ್ಯೋತಿಷಿ ಸಂಜಯ್ ಜಿ.ಜುಮ್ಮನಿ ಅವರ ಸೂಚನೆಯಂತೆ 19ನೇ ಜೆರ್ಸಿಯನ್ನು ರಾಹುಲ್ ದ್ರಾವಿಡ್ ಆಯ್ಕೆ ಮಾಡಿಕೊಂಡು ಆಡಿದ ಮೊದಲ ಪಂದ್ಯದಲ್ಲೇ 99 ರನ್ ಗಳಿಸಿದರು.

ಸಿಕ್ಸರ್‍ಗಳ ಸರದಾರ ಯುವರಾಜ್‍ಸಿಂಗ್ ಜನಿಸಿದ್ದು ಡಿಸೆಂಬರ್ 12ರಂದು ಆದ್ದರಿಂದ ತಮ್ಮ ಜೆರ್ಸಿ ಮೇಲೆ 12ನೇ ನಂಬರಿಗೆ ಸ್ಥಾನ ನೀಡಿದ್ದರು. ಶಿಖರ್ ಧವನ್ ಪುತ್ರ ಜೋರವಾರ್ಸ್ ಜನಿಸಿದ್ದು 25 ಆಗಿದ್ದರಿಂದ ಗಬ್ಬರ್ ಸಿಂಗ್‍ರ ಜೆರ್ಸಿ ಸಂಖ್ಯೆ 25 ಆಗಿತ್ತು, ಆದರೆ ಈಗ ಅವರು 42 ನಂಬರ್ ಜೆರ್ಸಿ ಧರಿಸುತ್ತಿದ್ದಾರೆ. ಸ್ಪಿನ್ ಮಾಂತ್ರಿಕ ಕುಲ್‍ದೀಪ್‍ಯಾದವ್ 2 ಬಾರಿ ಹ್ಯಾಟ್ರಿಕ್ ವಿಕೆಟ್ ಗಳಿಸಿರುವುದರಿಂದ ಅವರು 23 ನಂಬರ್ ಜೆರ್ಸಿ ಧರಿಸುತ್ತಾರೆ.

ದಿನೇಶ್ ಕಾರ್ತಿಕ್‍ರ ಪತ್ನಿ ಖ್ಯಾತ ಸ್ಕ್ವಾಸ್ ಆಟಗಾರ್ತಿ ದೀಪಿಕಾ ಪಲ್ಲಿಕೇಲ್ ಜನಿಸಿದ್ದು 21 ಸೆಪ್ಟೆಂಬರ್ 1991ರಂದು ಪತ್ನಿಗೆ ಗೌರವ ಸೂಚಿಸುವ ಸಲುವಾಗಿ ಕಾರ್ತಿಕ್ 21ನೇ ನಂಬರ್ ಜೆರ್ಸಿ ಧರಿಸುತ್ತಾರೆ. ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಧ್ಯೋತಕವಾಗಿ ಟೀಂ ಇಂಡಿಯಾದ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯರ ಜೆರ್ಸಿ ಮೇಲೆ 228 ನಂಬರ್ ಇದೆ.

ಜೆರ್ಸಿ ನಂಬರ್‍ಗಳು ಆಟಗಾರರ ಸಾಧನೆಯನ್ನು ಬಿಂಬಿಸುವುದರಿಂದ ಅವರಿಗೆ ಗೌರವ ಸೂಚಿಸುವ ಸಲುವಾಗಿ ಆ ನಂಬರ್‍ಗಳನ್ನು ಶಾಶ್ವತವಾಗಿ ಇಡಬೇಕೆಂಬ ಕೂಗುಗಳು ಕೇಳಿಬರುತ್ತಿದ್ದು ಇತ್ತೀಚೆಗೆ ನಿವೃತ್ತಿಯಾದ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಯ ಜೆರ್ಸಿಗೂ ನಿವೃತ್ತಿ ಸಿಗುವಂತಾಗಲಿ.

Facebook Comments

Sri Raghav

Admin