ಧೋನಿಗೆ ಕೊರೋನಾ ನೆಗೆಟಿವ್

ಈ ಸುದ್ದಿಯನ್ನು ಶೇರ್ ಮಾಡಿ

ರಾಂಚಿ, ಆ. 13- ಐಪಿಎಲ್ 13ರ ಆವೃತ್ತಿ ಸಮೀಪಿಸುತ್ತಿರುವ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್‍ನ ನಾಯಕ ಧೋನಿ ಕೊರೊನಾ ಟೆಸ್ಟ್ ಮಾಡಿಸಿಕೊಂಡಿದ್ದು ನೆಗೆಟಿವ್ ವರದಿ ಬಂದಿದೆ.

ಗುರುನಾನಕ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಹಿರಿಯ ಲ್ಯಾಬ್ ಕಾರ್ಯನಿರ್ವಾಹಕರೊಬ್ಬರು ಧೋನಿಯ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಿದ್ದು ಧೋನಿಗೆ ಕೊರೊನಾ ಸೋಂಕು ಇಲ್ಲ ಎಂದು ದೃಢಪಡಿಸಿದ್ದಾರೆ.

ಐಪಿಎಲ್ 13ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಸುತ್ತಿರುವ ಮಹೇಂದ್ರಸಿಂಗ್ ಧೋನಿಗೆ ಕೊರೊನಾ ನೆಗೆಟಿವ್ ಬಂದಿರುವುದರಿಂದ ನಾಳೆ ಚೆನ್ನೈಗೆ ಆಗಮಿಸಲಿದ್ದು, ಆಗಸ್ಟ್ 22ರಂದು ಯುಎಇಗೆ ತೆರಳುವ ನಿರೀಕ್ಷೆ ಇದೆ.

Facebook Comments

Sri Raghav

Admin